ಸಂಸತ್‌ಗೆ ಆಗಮಿಸುವ ಪ್ರವೃತ್ತಿಯೇ ಪ್ರಧಾನಿ ಮೋದಿಗಿಲ್ಲ| ಪ್ರಧಾನಿ ಸಂಸತ್‌ಗೆ ಬರುವುದಿಲ್ಲ, ಪತ್ರಕರ್ತರಿಗೇ ಸಿಗುವುದಿಲ್ಲ, ಅದು ಹೇಗೆ ಚರ್ಚೆಗೆ ನೀವು ಸವಾಲು ಹಾಕುತ್ತೀರಾ?| ಅಮಿತ್ ಶಾ ನಿಮ್ಮ ಮಾತಿನ ಮೇಲೆ ಬದ್ಧತೆ ಇದ್ದರೆ ನಾವು ಸವಾಲಿಗೆ ಸಿದ್ಧ ಎಂದ ಉಗ್ರಪ್ಪ|
ಹುಬ್ಬಳ್ಳಿ(ಜ.23): ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಅಮಿತ್ ಶಾ ದೇಶಕ್ಕೆ ಶನಿಗಳ ಹಾಗೆ ಒಕ್ಕರಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಹೇಳಿದ್ದಾರೆ.
ಸಿಎಎ ಕುರಿತಂತೆ ಅಮಿತ್ ಶಾ ರಾಹುಲ್‌ಗೆ ಬಹಿರಂಗ ಚರ್ಚೆಗೆ ಸವಾಲು ವಿಚಾರದ ಬಗ್ಗೆ ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸತ್‌ಗೆ ಆಗಮಿಸುವ ಪ್ರವೃತ್ತಿಯೇ ಪ್ರಧಾನಿ ಮೋದಿಗಿಲ್ಲ. ಪ್ರಧಾನಿ ಸಂಸತ್‌ಗೆ ಬರುವುದಿಲ್ಲ, ಪತ್ರಕರ್ತರಿಗೇ ಸಿಗುವುದಿಲ್ಲ, ಅದು ಹೇಗೆ ಚರ್ಚೆಗೆ ನೀವು ಸವಾಲು ಹಾಕುತ್ತೀರಾ?ಅಮಿತ್ ಶಾ ನಿಮ್ಮ ಮಾತಿನ ಮೇಲೆ ಬದ್ಧತೆ ಇದ್ದರೆ ನಾವು ಸವಾಲಿಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೇಂದ್ರ ಸರ್ಕಾರ ಎಲ್ಲ ವ್ಯವಸ್ಥೆಗಳಲ್ಲೂ ವಿಫಲವಾಗಿದೆ. ದೇಶದಲ್ಲಿ ಪ್ರಜಾಸತ್ತಾತ್ಮಕ ವಾತಾವರಣವಿಲ್ಲ. ವಿರೋಧ ಪಕ್ಷಗಳ ಮೇಲೆ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಅಮಿತ್ ಶಾ ಹಾಗೂ ಮೋದಿಯವರ ಸರ್ವಾಧಿಕಾರ ಪ್ರವೃತ್ತಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲಕಚ್ಚಿದೆ. ಮೋದಿ, ಶಾ ಭಾವನಾತ್ಮಕವಾಗಿ ದೇಶದ ಜನರ ದಾರಿಯನ್ನ ತಪ್ಪಿಸುತ್ತಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದು ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ತಾನಾಗಿಯೇ ಶರಣಾಗದಿದ್ದರೆ ಏನು ಮಾಡುತ್ತಿದ್ರಿ ಬಸವರಾಜ ಬೊಮ್ಮಾಯಿಯವರೇ? ಎಂದು ಪ್ರಶ್ನಿಸಿದ ಉಗ್ರಪ್ಪ ರಾಜ್ಯ ಹಾಗೂ ದೇಶದ ಬೇಹುಗಾರಿಕೆ ಇಲಾಖೆಯವರು ಸತ್ತು ಹೋಗಿದ್ದಾರೆ. ಬೇಹುಗಾರಿಕೆ ಇಲಾಖೆ ನಿಷ್ಕ್ರೀಯಗೊಂಡಿರುವುದಕ್ಕೆ ರಾಜ್ಯ ಹಾಗೂ ಕೇಂದ್ರ ಗೃಹ ಸಚಿವರೇ ನೇರ ಹೊಣೆ ಎಂದು ಹೇಳಿದ್ದಾರೆ.
ಪ್ರಧಾನಿ ಹಾಗೂ ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದೀರಿ?, ದೇಶ ಹಾಗೂ ರಾಜ್ಯದ ಹಿತ ಕಾಪಾಡಲು ಆಗದಿದ್ದರೆ ನಿಮಗೆ ನಾಚಿಕೆಯಾಗಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಾ ಹುಲಿ ಅಲ್ಲ, ರಾಜಾ ಇಲಿ, ಅಮಿತ್ ಶಾ ಮೋದಿ ಎದುರು ಯಡಿಯೂರಪ್ಪ ಮಾತನಾಡಲಾಗದೆ ನಡುಗುತ್ತಿದ್ದಾರೆ ಎಂದು ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 23, 2020, 3:16 PM IST