ಬೆಂಗ್ಳೂರಲ್ಲಿ ಸೋಂಕಿತರ ಸಂಖ್ಯೆ 22 ಸಾವಿರಕ್ಕಿಂತ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆ| ರಾಜ್ಯ ಸರ್ಕಾರ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಮಾಡುತ್ತಿರುವುದಾದರೂ ಏನು?| ಬಿಬಿಎಂಪಿ ಆಡಳಿತ ಮತ್ತು ಆರೋಗ್ಯ ಇಲಾಖೆ ವೈಫಲ್ಯದಿಂದ ರಾಜಧಾನಿಯಲ್ಲಿ ನೂರಾರು ಜನರ ಸಾವು| ಸರ್ಕಾರ ಅಗತ್ಯ ಆಮ್ಲಜನಕ ಪೂರೈಕೆ ಮಾಡದೇ ಅಮಾಯಕರನ್ನು ಕೊಲ್ಲುತ್ತಿದೆ: ಶರವಣ| 

ಬೆಂಗಳೂರು(ಮೇ.05): ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚಿನ ಆಕ್ಸಿಜನ್‌ ತರಿಸಿ ಜನರ ಪ್ರಾಣ ಉಳಿಸಬೇಕು. ಇಲ್ಲವಾದರೆ ಕೊಲೆಗಡುಕ ಸರ್ಕಾರ ಎಂಬ ಅಪಖ್ಯಾತಿಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕಾಗುತ್ತದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಆಕ್ಸಿಜನ್‌ ಕೊರತೆ ಉಂಟಾಗಿ ಭೀಕರ ಪರಿಸ್ಥಿತಿ ತಲೆದೋರಿದೆ. ಇಷ್ಟಾದರೂ ಸರ್ಕಾರ ಇನ್ನು ಎಚ್ಚರಗೊಂಡಂತೆ ಕಾಣುತ್ತಿಲ್ಲ. ಚಾಮರಾಜನಗರ ದುರಂತದ ನಂತರವಾದರೂ ಸರ್ಕಾರ ಸಮಾರೋಪಾದಿಯಲ್ಲಿ ಕೆಲಸ ಮಾಡುತ್ತದೆ ಎಂದು ಭಾವಿಸಿದ್ದು ತಪ್ಪಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪ್ರತಿ ಜಿಲ್ಲೆಗಳಲ್ಲೂ ದುರಂತ ಸಂಭವಿಸುವ ದಿನಗಳು ದೂರವಿಲ್ಲ. ಸರ್ಕಾರ ಕೂಡಲೇ ಚಾಮರಾಜನಗರ ದುರಂತಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ತಕ್ಷಣವೇ ಇತರ ಜಿಲ್ಲೆಗಳ ಆಕ್ಸಿಜನ್‌ ಕೊರತೆ ನೀಗಿಸಿ ಅಮಾಯಕರ ಜೀವ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.

"

ಏಕಾಏಕಿ ಮಾರ್ಗಸೂಚಿ ಬದಲಾವಣೆ: ಈ ನಿರ್ಧಾರ ಕೈಬಿಡಿ ಎಂದ ಶರವಣ

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 22 ಸಾವಿರಕ್ಕಿಂತ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಹಾಗಾದರೆ ರಾಜ್ಯ ಸರ್ಕಾರ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಮಾಡುತ್ತಿರುವುದಾದರೂ ಏನು. ಬಿಬಿಎಂಪಿ ಆಡಳಿತ ಮತ್ತು ಆರೋಗ್ಯ ಇಲಾಖೆ ವೈಫಲ್ಯದಿಂದ ರಾಜಧಾನಿಯಲ್ಲಿ ನೂರಾರು ಜನ ಸಾಯುತ್ತಿದ್ದಾರೆ ಇಷ್ಟಾದರೂ ಸರ್ಕಾರ ಬೆಂಗಳೂರಿನ 300 ಟನ್‌ ಆಕ್ಸಿಜನ್‌ನಲ್ಲಿ ಕೇವಲ 40 ಮಾತ್ರ ಸಿಗುತ್ತಿದೆ. ಇದರಿಂದ ಸಾವು-ನೋವು ಹೆಚ್ಚಾಗುತ್ತಿದೆ. ಸರ್ಕಾರ ಅಗತ್ಯ ಆಮ್ಲಜನಕ ಪೂರೈಕೆ ಮಾಡದೇ ಅಮಾಯಕರನ್ನು ಕೊಲ್ಲುತ್ತಿದೆ ಎಂದು ಪ್ರಕಟಣೆ ಮೂಲಕ ಆರೋಪಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona