ಗದಗ(ನ.27): ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಮಾಜಿ ಶಾಸಕರೊಬ್ಬರ ಅಳಿಯನನ್ನ ಜಿಲ್ಲೆಯ ರೋಣ ಪೊಲೀಸರು ಇಂದು(ಬುಧವಾರ) ಬಂಧಿಸಿದ್ದಾರೆ.  

ಉದಯ ದೇಸಾಯಿ ಎಂಬಾತನೇ ಪೊಲೀಸರಿಂದ ಬಂಧಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಉದಯ ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದಾರೆ ಅಂತ ದೂರು ನೀಡಲಾಗಿತ್ತು. ರೋಣ ಪಟ್ಟಣದ ನಿವಾಸಿ ಮಂಜುನಾಥ್ ಎಂಬುವರು ಉದಯ ದೇಸಾಯಿ ವಿರುದ್ಧ ದೂರು ನೀಡಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೂರಿನ ಮೇರೆಗೆ ರೋಣ ಪೊಲೀಸರು ಉದಯ ದೇಸಾಯಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂಬಂಧ ರೋಣ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.