Asianet Suvarna News Asianet Suvarna News

Bagalkot: ಮಾಜಿ ಶಾಸಕ ಜಿ.ವಿ.ಮಂಟೂರ ನಿಧನ

*   ಬಾಗಲಕೋಟೆ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಮಂಟೂರ
*   ವಯೋಸಹಜ ಕಾಯಿಲೆಯಿಂದ ನಿಧನ
*   ಮಂಟೂರ ನಿಧನಕ್ಕೆ ಗಣ್ಯರ ಸಂತಾಪ

Former MLA GV Mantur Passed Away in Bagalkot grg
Author
Bengaluru, First Published Feb 18, 2022, 10:41 AM IST | Last Updated Feb 18, 2022, 10:41 AM IST

ಬಾಗಲಕೋಟೆ(ಫೆ.18):  ಹಿರಿಯ ರಾಜಕಾರಣಿ, ಬಾಗಲಕೋಟೆ(Bagalkot) ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಜಿ.ವಿ.ಮಂಟೂರ(92)(GV Mantur) ಅಲ್ಪ ಕಾಲದ ವಯೋಸಹಜ ಕಾಯಿಲೆಯಿಂದ ನಿನ್ನೆ(ಗುರುವಾರ) ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ಮೂರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು- ಬಳಗ ಹಾಗೂ ಅಭಿಮಾನಿ ಬಳಗವಿದೆ. 70ರ ದಶಕದಲ್ಲಿ ತಾಲೂಕಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದ ಅವರು 1983ರಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ, 1985ರಲ್ಲಿ ಜನತಾ ಪಕ್ಷದಿಂದ(Janata Party) ಮರು ಆಯ್ಕೆಯಾಗಿದ್ದರು. ದಿ.ರಾಮಕೃಷ್ಣ ಹೆಗಡೆ(Ramakrishna Hegde), ಮಾಜಿ ಪ್ರಧಾನಿ ದೇವೇಗೌಡರ(HD Devegowda) ಒಡನಾಡಿಯಾಗಿದ್ದ ಮಂಟೂರ ಅವರು ಬಾಗಲಕೋಟೆಯ ಮಾಜಿ ಸಚಿವ ಎಚ್.ವೈ.ಮೇಟಿ(HY Meti) ಸೇರಿದಂತೆ ಹಲವರನ್ನು ಸಕ್ರಿಯ ರಾಜಕಾರಣಕ್ಕೆ ತಂದವರು. ಜನಮಾನಸದಲ್ಲಿ ಮಂಟೂರ ಖಾಖಾ ಎಂದೇ ಚಿರಪರಿಚಿತರಾಗಿದ್ದರು, ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದವರಾಗಿದ್ದ ಅವರು ಗ್ರಾಮದ ರೂರಲ್ ಎಜುಕೇಶನ್ ಸೊಸೈಟಿ ಆರಂಭಿಸಿ ಗ್ರಾಮದಲ್ಲಿ ಪ್ರೌಢಶಾಲೆ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಮೃತರ ಅಂತ್ಯಕ್ರಿಯೆ ಖಜ್ಜಿಡೋಣಿ ಗ್ರಾಮದಲ್ಲಿ ನೆರವೇರಿತು.

Bagalkot: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ

ಗಣ್ಯರ ಕಂಬನಿ: 

ಸಚಿವರಾದ ಗೋವಿಂದ ಕಾರಜೋಳ(Govind Karjol), ಮುರುಗೇಶ ನಿರಾಣಿ(Murugesh Niranin), ಸಂಸದ ಪಿ.ಸಿ.ಗದ್ದಿಗೌಡರ, ಎಸ್.ಆರ್.ಪಾಟೀಲ, ಎಚ್.ವೈ.ಮೇಟಿ, ಅಜಯಕುಮಾರ ಸರನಾಯಕ, ಜೆ.ಟಿ. ಪಾಟೀಲ, ಕುಮಾರ ಮಲಘಾಣ, ನಿಂಗನಗೌಡ ಪಾಟೀಲ, ನಾಗರಾಜ ಹದ್ಲಿ ಗಣ್ಯರು ಸಂತಾಪ(Condolences) ವ್ಯಕ್ತಪಡಿಸಿದ್ದಾರೆ. 

ಜಿ.ವಿ.ಮಂಟೂರ ನಿಧನದಿಂದ ಮುಳಗಡೆ ಜಿಲ್ಲೆಯ ಹಿರಿಯ, ಮುತ್ಸದ್ಧಿ ರಾಜಕಾರಣಿ(Politician) ಕಳೆದುಕೊಂಡು ಬಡವಾಗಿದೆ. ಅಭಿವೃದ್ಧಿ ಪರ ಚಿಂತಕರಾಗಿದ್ದರು. ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲವು ಸಾಧಿಸಿ ನಂತರ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ದ ಅವರು ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಜಿಲ್ಲೆಯ ಬಹುತೇಕ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಜಿಲ್ಲೆಯ ಬಗ್ಗೆ ಅವರಿಗೆ ಇದ್ದ ಕಾಳಜಿ ಮರೆಯಲಾಗದು ಅಂತ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ತಿಳಿಸಿದ್ದಾರೆ. 

Vijayapura: ಮುದ್ದೇಬಿಹಾಳ ಮಾಜಿ ಶಾಸಕ ಎಂ.ಎಂ. ಸಜ್ಜನ ಇನ್ನಿಲ್ಲ

ಬಾಗಲಕೋಟೆ ತಾಲೂಕು ಮಂಡಳಿಯ ಅಧ್ಯಕ್ಷರಾಗಿ ತಾಲೂಕಿನಾದ್ಯಂತ ಜನಪರ ಕಾರ್ಯಗಳನ್ನು ಮಾಡಿ ಜನಾನುರಾಗಿದ್ದರು. ಜನತೆ ಯೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದ ಇವರು 1983 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇವರ ನಿಧನದಿಂದ ಜಿಲ್ಲೆಯು ಒಬ್ಬ ಒಳ್ಳೆಯ ಜನಪರ ಚಿಂತಕನನ್ನು ಕಳೆದುಕೊಂಡಂತಾಗಿದೆ. ದೇವರು ಇವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಹಾಗೂ ಇವರ ಪವಾರದವರಿಗೆ ಈ ದುಃಖದ ಭಾರ ತಡೆಯುವ ಶಕ್ತಿಯನ್ನು ನೀಡಲಿ ಅಂತ ಯೋಜನಾ ಪ್ರಾಧಿಕಾರದ ಮಾಜಿ ಸಭಾಪತಿ ಎ.ಎ.ದಂಡಿಯಾ ಸಂತಾಪ ಸೂಚಿಸಿದ್ದಾರೆ. 

ಮಂಟೂರ ನಿಧನಕ್ಕೆ ಗಣ್ಯರ ಸಂತಾಪ

ಕಲಾದಗಿ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಮಾಜಿ ಶಾಸಕ, ರೂರಲ್ ಎಜ್ಯಕೇಶನ್ ಸೊಸೈಟಿ, ನೂತನ ವಿದ್ಯಾಲಯ ಖಜ್ಜಿ ಡೋಣಿ ಅಧ್ಯಕ್ಷ ಗೂಳಪ್ಪ ವೆಂಕಪ್ಪ ಮಂಟೂರ(92)ಅವರ ಅಂತ್ಯಕ್ರಿಯೆ(Funeral) ಗುರುವಾರ ಸಂಜೆ ಸ್ವಗ್ರಾಮ ಖಜ್ಜಿಡೋಣಿಯಲ್ಲಿ ಅಪಾರ ಜನಸ್ತೋಮದ ಮಧ್ಯ ನಡೆಯಿತು. 

ಮಾಜಿ ಶಾಸಕ ಜೆ.ಟಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಪಿ.ಎಚ್.ಪೂಜಾರ, ಸಂಸದ ಪಿ.ಸಿ.ಗದ್ದಿಗೌಡರ, ಬಸುರಾಜ ಯಂಕಂಚಿ, ಮಾಜಿ ಶಾಸಕ ಎಚ್.ವೈ.ಮೇಟಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಎಂ.ಬಿ.ಸೌದಾಗಾರ್, ಸಂಗಣ್ಣ ಮುಧೋಳ, ಶಿವಕುಮಾರ ಮಲಘಾಣ, ಶಿವಪುತ್ರಪ್ಪ, ನಾರಾಯಣ ಹಾದಿಮನಿ, ಬಸುರಾಜ ಸಂಶಿ, ಅಭು ಯಕುಮಾರ ಸರನಾಯಕ್, ಖಜ್ಜಿಡೋಣಿ ಗ್ರಾಪಂ ಅಧ್ಯಕ್ಷ ಗುರುಪಾದಪ್ಪ ಕಲ್ಲೊಳ್ಳಿ, ಪ್ರವೀಣ ಅರಕೇರಿ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 
 

Latest Videos
Follow Us:
Download App:
  • android
  • ios