ಐತಿಹಾಸಿಕ ಕ್ಷಣ ವೀಕ್ಷಣೆ ಪುಣ್ಯದ ಫಲ: ಮಾಜಿ ಸಚಿವ ಸೋಮಣ್ಣ

ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೈವಪುರುಷ ಎಂದಿದ್ದಾರೆ. ಇಂಥ ಐತಿಹಾಸಿಕ ಕ್ಷಣಗಳನ್ನು ವೀಕ್ಷಣೆ ಮಾಡಲು ನಾವು ಬದುಕಿರುವುದು ದೊಡ್ಡ ಪುಣ್ಯದ ಫಲ. ಶ್ರೀರಾಮನ ಜಪ, ತಪ ಮಾಡುವುದರಿಂದ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಾ ಆದರ್ಶ, ಮಾರ್ಗದರ್ಶನದಲ್ಲಿ ನಾವು ಸಾಗೋಣ ಎಂದ ಮಾಜಿ ಸಚಿವ ವಿ.ಸೋಮಣ್ಣ 

Former Minister V Somanna Talks Over Ram Mandir grg

ಬೆಂಗಳೂರು(ಜ.23):  ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವುದು ಐತಿಹಾಸಿಕ ದಿನವಾಗಿದೆ. ದೇಶದ ಜನರು ಏಕತೆ, ಸಮಗ್ರತೆಗೆ ಸಾಕ್ಷಿಯಾಗಿದ್ದಾರೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಸೋಮವಾರ ಅಯೋಧ್ಯೆ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾನ ಉದ್ಘಾಟನೆ ಶುಭ ಸಂದರ್ಭದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರುತಿ ಮಂದಿರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಮತ್ತು ದೇವರನಾಮ ಕೀರ್ತನೆ ಕಾರ್ಯಕ್ರಮ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹನುಮ ಜನ್ಮಸ್ಥಳ ಅಭಿವೃದ್ಧಿ ಮುಂದಿನ ಗುರಿ: ಮಾಜಿ ಸಿಎಂ ಬೊಮ್ಮಾಯಿ

ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೈವಪುರುಷ ಎಂದಿದ್ದಾರೆ. ಇಂಥ ಐತಿಹಾಸಿಕ ಕ್ಷಣಗಳನ್ನು ವೀಕ್ಷಣೆ ಮಾಡಲು ನಾವು ಬದುಕಿರುವುದು ದೊಡ್ಡ ಪುಣ್ಯದ ಫಲ. ಶ್ರೀರಾಮನ ಜಪ, ತಪ ಮಾಡುವುದರಿಂದ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಾ ಆದರ್ಶ, ಮಾರ್ಗದರ್ಶನದಲ್ಲಿ ನಾವು ಸಾಗೋಣ ಎಂದು ಹೇಳಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಮಾತನಾಡಿ, ಪ್ರಭು ಶ್ರೀರಾಮ ಎಲ್ಲರ ಮನೆ, ಮನಗಳಲ್ಲಿ ನೆಲಸಿದ್ದಾನೆ. ಅವತಾರ ಪುರುಷ ಶ್ರೀ ರಾಮ ದೇಶದ ಪ್ರತೀಕ, ರಾಮ ಅಂದರೆ ದೇಶ, ದೇಶ ಎಂದರೆ ರಾಮ. ಕಾಂಗ್ರೆಸ್ ಪಕ್ಷ ರಾಮ ಹುಟ್ಚಿದ್ದು ಎಲ್ಲಿ ಎಂದು ಸುಪ್ರಿಂಕೋರ್ಟ್ ಅಫಿಡವಿಟ್ ಹಾಕಿದ್ದರು. ರಾಮಾಯಣದಲ್ಲಿ ರಾಮನು ಇದ್ದಾನೆ ಮತ್ತು ರಾವಣನೂ ಇದ್ದಾನೆ. ನಮ್ಮ ಹೃದಯದಲ್ಲಿ ಇರುವ ಪ್ರಭು ಶ್ರೀರಾಮನನ್ನು ಕಿತ್ತು ಹಾಕಲು ಸಾಧ್ಯವೆ ಎಂದರು. ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಬಿಜೆಪಿ ಯುವ ಮುಖಂಡ ಡಾ। ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಅಧ್ಯಕ್ಷ ವಿಶ್ವನಾಥಗೌಡ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios