ಉಳ್ಳಾಲ [ಸೆ.02]: ತನ್ನ ಕ್ಷೇತ್ರ ವ್ಯಾಪ್ತಿಯ ಹದಗೆಟ್ಟರಸ್ತೆಗಳ ಪರಿಶೀಲನೆಗೆ ತೆರಳಿದ್ದ ವೇಳೆ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್‌, ತಮ್ಮ ಕಾರು ಬಿಟ್ಟು ಸ್ವತಃ ಜೀಪ್‌ ಚಲಾಯಿಸುವ ಮೂಲಕ ಸುದ್ದಿಯಾಗಿದ್ದಾರೆ. 

ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ನಟ್ಟಿಬೈಲು, ನರಿಂಗಾನ ಗ್ರಾಮದ ಪೊಟ್ಟೊಳಿಕೆ, ಮೊರ್ಲಾ, ಕಲ್ಲರಕೋಡಿ ವಿವಿಧ ಕಡೆಗಳಲ್ಲಿ ಭಾನುವಾರ ರಸ್ತೆ ಪರಿಶೀಲನೆಗೆ ತೆರಳಿದ್ದ ಶಾಸಕ ಯು.ಟಿ.ಖಾದರ್‌ ಕಾರು ಹೋಗಲು ಅಸಾಧ್ಯವಾಗಿದ್ದ ಕಡೆಗಳಲ್ಲಿ ಸ್ಥಳೀಯರೊಬ್ಬರ ಜೀಪ್‌ನಲ್ಲಿ ತಾವೇ ಚಲಾಯಿಸಿಕೊಂಡು ಹೋಗಿ ವಿವಿಧ ರಸ್ತೆಗಳ ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿರಂತರ ಮಳೆಯಿಂದಾಗಿ ಈ ಭಾಗದ ರಸ್ತೆಗಳೆಲ್ಲ ಹೊಂಡ ಗುಂಡಿಗಳಿಂದ ಪ್ರಯಾಣಿಕರಿಗೆ ಪ್ರಯಾಣಿಸಲು ಆಗುತ್ತಿರಲಿಲ್ಲ. 

ಇದೀಗ ಈ ಭಾಗದ ಶಾಸಕರಾಗಿರುವ ಯು.ಟಿ.ಖಾದರ್‌ ಅವರಿಗೆ ಸ್ಥಳೀಯರ ಕಷ್ಟದ ಅನುಭವವಾಗಿದ್ದು, ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ತಮ್ಮ ಕಾರು ಹೋಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಸ್ವತಃ ತಾವೇ ಜೀಪ್‌ ಚಲಾಯಿಸಿಕೊಂಡು ಹೋಗಿ ರಸ್ತೆ ಪರಿಶೀಲನೆ ನಡೆಸಿದ್ದಾರೆ.