ಕಾಗವಾಡ(ನ.30): ಬಿಜೆಪಿಯಲ್ಲಿ  ಮೂರು ಮುಖ್ಯಮಂತ್ರಿಗಳು ಬದಲಾಗಿದ್ದರು, ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ ಐದು ವರ್ಷಗಳ ಕಾಲ ಒಬ್ಬರೇ ಸಿಎಂ ಅಗಿ ಪೂರ್ಣಗೊಳಿಸಿದ್ದಾರೆ.ರಾಜ್ಯದಲ್ಲಿ ಉತ್ತಮ ಆಡಳಿತಕ್ಕೆ ಕಾಂಗ್ರೆಸ್ ಗೆ ಮತ ನೀಡಿ, ಕಾಂಗ್ರೆಸ್ ಬಡವರ, ಕಾರ್ಮಿಕರ ಪಕ್ಷವಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆಗೆ ಮತ ನೀಡಿ ಭರ್ಜರಿ ಅಂತರಿಂದ ಆರಿಸಿ ತರಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಅವರು ಹೇಳಿದ್ದಾರೆ.

ಶನಿವಾರ ಕಾಗವಾಡ ಕ್ಷೇತ್ರದ ಉಗಾರ ಖುರ್ದನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಉಮಾಶ್ರೀ, ಅನರ್ಹರುವ ತಮ್ಮ ಸ್ವಾರ್ಥಕ್ಕಾಗಿ ಪಕ್ಷದ ಬದಲಾವಣೆ ಮಾಡಿದ್ದಾರೆ. ಈಗಿರುವ ಸಿಎಂ ಯಡಿಯೂರಪ್ಪ ಗೆ ಬಡವರ ಪರ ಕಾಳಜಿ ಇಲ್ಲ, ಬಡವರ ಪರ  ಹೃದಯ ಇಲ್ಲ, ಬಿಜೆಪಿಯಿಂದ ಹೊಡೆಯುವುದು ಬಡಿಯುವುದು ಕೇಸ್ ಹಾಕೊದೊಂದೇ ಕೆಲಸವಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅನರ್ಹರು ಅಂದ್ರೆ ಅಯೋಗ್ಯರಾಗಿದ್ದಾರೆ. ಜನರನ್ನು ಆಳಲು ಇವರು ಅಯೋಗ್ಯರು ಅಂತಾ ಮಾಜಿ ಸ್ಪೀಕರ್ ರಮೇಶ ಕುಮಾರ ತೀರ್ಪು ನೀಡಿದ್ದಾರೆ. ಬಿಜೆಪಿಯವರು ಶಾಸಕರನ್ನು ಓಡಿಸಿಕೊಂಡು  ಹೋಗಿದ್ದಾರೆ. ಅನರ್ಹರನ್ನು ಅನರ್ಹಾಗಿಯೇ ಮನೆಗೆ ಕಳುಹಿಸಿ,ರಾಜು ಕಾಗೆ ಅವರನ್ನು ಶಾಸಕರನ್ನಾಗಿ ವಿಧಾನ ಸಭೆಗೆ ಕಳುಹಿಸಿ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.