ಶಿರಸಿ (ಡಿ. 11)  ಮಾಜಿ ಅಬಕಾರಿ ಸಚಿವರು, ಜನತಾ ಪಾರ್ಟಿಯ ಹಿರಿಯ ಮುಖಂಡರಾಗಿದ್ದ ಪ್ರೇಮಾನಂದ ಜೈವಂತ(74) ಶುಕ್ರವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಅವರು, ಜೆ ಎಚ್ ಪಟೇಲರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು.1999ರಲ್ಲಿ ವಿವೇಕಾನಂದ ವೈದ್ಯರೆದುರು ಪಕ್ಷೇತರರಾಗಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಮೂವರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಜೈವಂತ ಅಗಲಿದ್ದಾರೆ.

ಕಲಾಲೋಕ ಅಗಲಿದ ಗುಡ್ಡದ ಭೂತ ಖ್ಯಾತಿಯ ಆಚಾರ್ಯ

ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಪ್ರೇಮಾನಂದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.   ಜನತಾ ಪಾರ್ಟಿ ತೊರೆದು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.