ಬಾಗಲಕೋಟೆ(ಜ.17): ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯೆ ಟಾಕ್ ವಾರ್ ಜೋರಾಗಿದೆ. ಕಳೆದು ಎರಡು ದಿನಗಳಿಂದ ಮುರುಗೇಶ ನಿರಾಣಿ ಅವರ ಸಹೋದರ ಸಂಗಮೇಶ ನಿರಾಣಿ ಹಾಗೂ ಯತ್ನಾಳ ಮಧ್ಯೆ ಮಾತಿನ ಸಮರ ನಡೆಯುತ್ತಿದೆ. ಆದರೆ, ಮಾತಿನ ಸಮರಕ್ಕೆ ಇದೀಗ ಮುರುಗೇಶ್ ನಿರಾಣಿ ಎಂಟ್ರಿ ಕೊಟ್ಟಿದ್ದಾರೆ. 

ರಸ್ತೆಯಲ್ಲಿ ಹೋಗುವವರಿಗೆಲ್ಲ ನಾನು ಉತ್ತರ ಕೊಡುವುದಿಲ್ಲ: ಶಾಸಕ ಯತ್ನಾಳ

ಹೌದು, ಬಸವಣ್ಣನವರ ವಚನ ಮೂಲಕ ಮುರುಗೇಶ್ ನಿರಾಣಿ ಯತ್ನಾಳ್‌ಗೆ ಟಾಂಗ್ ಕೊಟ್ಟಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಮುರುಗೇಶ್ ನಿರಾಣಿ ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಸವಣ್ಣನವರ ವಚನ ಉಲ್ಲೇಖಿಸಿ ಬರೆದುಕೊಂಡು ಪರೋಕ್ಷವಾಗಿ ಯತ್ನಾಳ್‌ಗೆ ತಿರುಗೇಟು ನೀಡಿದ್ದಾರೆ. 

ವಚನಾನಂದ ಸ್ವಾಮೀಜಿ ಬೆದರಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ನಿಂದಿಸಿದರೆ ನಿಂದಿಸಲಿ ಬಿಡು, ಆರೋಪಗಳನ್ನು ಹೊರಸಲಿ ಬಿಡು, ನೋಯಿಸಿದರೆ ನೋಯಿಸಲಿ ಬಿಡು, ಶಪಿಸಲಿ ಬಿಡು, ಮನಬಂದಂತೆ ಕೂಗಾಲಿಬಿಡು‌‌, ಅವರವರ ಬುತ್ತಿ ಅವರ ಹೆಗಲಿಗೆ-ವಿಶ್ವಗುರು ಬಸವಣ್ಣ ಎಂದು ಪೋಸ್ಟ್ ಮಾಡಿದ್ದಾರೆ.

'ಯತ್ನಾಳ ಗೂಂಡಾಗಿರಿ ಮಾಡಿದ್ರೆ ಅದೇ ಭಾಷೆಯಲ್ಲೇ ಉತ್ತರ ಕೊಡ್ತೇವೆ'

ಗುರುವಾರ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ನಿರಾಣಿ ಕುಟುಂಬದ ವಿರುದ್ಧ ವಾಗ್ದಾಳಿ ನಿರಾಣಿ ಕುಟುಂಬದ ಜಾತಕ ಬಯಲು ಮಾಡುತ್ತೇನೆ ಎಂದು ಕಿಡಿಕಾರಿದ್ದರು.  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಎದುರು ವಚನಾನಂದ ಶ್ರೀಗಳು  ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಲೇಬೇಕು ಅನ್ನೋ ಬೆದರಿಕೆ ಮಾತನ್ನು ವಿರೋಧಿಸಿ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದರು.