Asianet Suvarna News Asianet Suvarna News

ಆರ್ಥಿಕ ದಿವಾ​ಳಿಗೆ ಬಜೆಟ್‌ ಮುನ್ಸೂ​ಚ​ನೆ: ಎಂ.ಬಿ.ಪಾಟೀಲ

ಮೋದಿ 6 ವರ್ಷಗಳ ಅಧಿಕಾರದಲ್ಲಿ ಸಂಪೂರ್ಣ ಬಿಗಡಾಯಿಸಿ, ದೇಶ ಆರ್ಥಿಕ ದಿವಾಳಿಯತ್ತ ಹೋಗುತ್ತಿದೆ| ಜಿಡಿಪಿ ಶೇ.3.5ರಷ್ಟು ಕುಸಿದಿದೆ| ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಯುವಕರಿಗೆ ಅಚ್ಚೇದಿನ್‌ ಬರಲೇ ಇಲ್ಲ ಎಂದ ಎಂ.ಬಿ.ಪಾಟೀಲ| 

Former Minister M B Patil Talks Over Union Budget
Author
Bengaluru, First Published Feb 2, 2020, 2:06 PM IST

ವಿಜಯಪುರ(ಫೆ.02): ಆರ್ಥಿಕ ತಜ್ಞ ಡಾ.ಮನಮೋಹನ ಸಿಂಗ್‌ ಹಣಕಾಸು ಮಂತ್ರಿ, ಪ್ರಧಾನಿ ಆಗಿದ್ದಾಗ ರೂಪಿಸಿದ್ದ ಭಾರತ ಬಲಿಷ್ಠ ಆರ್ಥಿಕ ವ್ಯವಸ್ಥೆ ಪ್ರಧಾನಿ ನರೇಂದ್ರ ಮೋದಿಯವರ 6 ವರ್ಷಗಳ ಅಧಿಕಾರದಲ್ಲಿ ಸಂಪೂರ್ಣ ಬಿಗಡಾಯಿಸಿ, ದೇಶ ಆರ್ಥಿಕ ದಿವಾಳಿಯತ್ತ ಹೋಗುತ್ತಿದೆ ಎಂಬುದಕ್ಕೆ ಇಂದಿನ ಬಜೆಟ್‌ ತೋರಿಸಿಕೊಟ್ಟಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಭಾರತೀಯ ಜೀವವಿಮಾ ನಿಗಮ ನಮ್ಮ ದೇಶದ ಅತ್ಯಂತ ಸದೃಢ ಸಂಸ್ಥೆಯಾಗಿತ್ತು. ಅನೇಕ ರಾಜ್ಯಗಳಿಗೆ, ದೇಶದ ಪ್ರಮುಖ ಯೋಜನೆಗಳಿಗೆ ಸಾಲ ನೀಡಿದ್ದ ಅಂತಹ ಬಲಿಷ್ಠ ಸಂಸ್ಥೆಯ ಶೇರುಗಳನ್ನು ಇಂದು ಮಾರಾಟ ಮಾಡಲು ಹೊರಟಿರುವುದು ದೇಶದ ಆರ್ಥಿಕ ದುಸ್ಥಿತಿಯ ಪ್ರತೀಕವಾಗಿದೆ ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯುರೋಪ್‌, ಅಮೆರಿಕ ಸೇರಿದಂತೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಆರ್ಥಿಕ ಹಿಂಜರಿತ ಅನುಭವಿಸಿದ್ದರೂ ಮನಮೋಹನ ಸಿಂಗ್‌ರ ಕಾಲದಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಇಂದು ಜಿಡಿಪಿ ಶೇ.3.5ರಷ್ಟು ಕುಸಿದಿದೆ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಯುವಕರಿಗೆ ಅಚ್ಚೇದಿನ್‌ ಬರಲೇ ಇಲ್ಲ.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುದಾನ ಕಡಿತ ಮಾಡಿದ್ದಾರೆ. ಇದರಿಂದ ಇಡೀ ದೇಶದಲ್ಲಿಯೇ ಗ್ರಾಮ ಪಂಚಾಯತಿಗಳು ದುರ್ಬಲವಾಗಲಿವೆ.

ನೀರಾವರಿಗೆ ಸಂಬಂಧಿಸಿದಂತೆ ಎಐಬಿಪಿ ಯೋಜನೆಯ ಕುರಿತು ಈ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ. ಇದರಿಂದ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಬೇಕಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಗೆ (ಆಲಮಟ್ಟಿ) ಹಿನ್ನಡೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios