ವಿಜಯಪುರ(ಫೆ.29): ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬಾಯಿಗೆ ವಿಜಯಪುರ ನಗರದ ಆರಾಧ್ಯ ದೈವ ಸಿದ್ದೇಶ್ವರ(ದೇವರು) ಲಗಾಮು ಹಾಕಲಿ. ಯತ್ನಾಳ್‌ಗೆ ದೇವರು ಬುದ್ಧಿ ದಯ ಪಾಲಿಸಲಿ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. 

ಶುಕ್ರವಾರ ನಗರದ ಅಂಬೇಡ್ಕರ ವೃತ್ತದಲ್ಲಿ ಯತ್ನಾಳ್‌ ವಿರುದ್ಧ ಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಾವು ಯಾರು ಹೇಳಿದರೂ ಯತ್ನಾಳ್‌ ಕೇಳುವುದಿಲ್ಲ. ಯತ್ನಾಳ್‌ ಬಾಯಿ ಬಂದ್‌ ಆಗಲ್ಲ. ಬಸವಣ್ಣನವರ ಹೆಸರು ಇಟ್ಟುಕೊಂಡು ಹೀಗೆ ಮಾತನಾಡುವುದು ಯತ್ನಾಳ್‌ಗೆ ಶೋಭೆ ತರುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಮಾತನಾಡಿದ ಯತ್ನಾಳ್‌ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಯತ್ನಾಳ್‌ ಶಾಸಕತ್ವ ರದ್ದುಪಡಿಸಬೇಕು. ಸಿಎಂ ಕೂಡ ಯತ್ನಾಳ್‌ ವಿರುದ್ಧ ಕ್ರಮಕೈಗೊಳ್ಳಲ್ಲ. ಸಿಎಂ ಶಾಸಕರಿಗೆ ಹೆದರಿ ಕೂರಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ನಾಯಿಯೂ ಸತ್ತಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಸಾಸಿವೆ ಕಾಳಿನಷ್ಟು ಇವರ ಕೊಡುಗೆ ಇಲ್ಲ. ರಾಷ್ಟ್ರದ ಪರ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿಯವರಿಗೆ ನಿಮ್ಮ ಸಂಘಟನೆ ಸದಸ್ಯನೇ ಗುಂಡಿಕ್ಕಿ ಕೊಂದಿದ್ದಾನೆ. ಗೋಡ್ಸೆಯನ್ನು ಬಿಜೆಪಿಯಿಂದ ವೈಭವೀಕರಿಸಲಾಗುತ್ತದೆ. ಇಂಥವರಿಂದ ನಾವು ದೇಶಪ್ರೇಮದ ಪಾಠ ಕಲಿಯಬೇಕಾಗಿಲ್ಲ ಎಂದರು.