ಅಥಣಿ(ನ.25): ಗೋಕಾಕ್ - ಬಿಜಾಪುರ ಕಂಟ್ರೋಲ್ ನಲ್ಲಿ ಇರಬೇಡಿ, ಜನರ ಕಂಟ್ರೋಲ್ ನಲ್ಲಿ ಇರಿ ಎಂದುನಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರಿಗೆ ಎಂದು ಮಾಜಿ ಸಚಿವ ಹಾಗೂ ಅಥಣಿ ಕ್ಷೇತ್ರದ ಚುನಾವಣಾ ಉಸ್ತುವಾರಿ ಎಂ.ಬಿ.ಪಾಟೀಲ ಅವರು ಸಲಹೆ ನೀಡಿದ್ದಾರೆ. 

ಸೋಮವಾರ ಕ್ಷೇತ್ರದ ನದಿ ಇಂಗಳಗಾವ ಗ್ರಾಮದಲ್ಲಿ ನಡೆಯುತ್ತಿರುವ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಮಹೇಶ್ ಕುಮಟಳ್ಳಿ ಥರ್ಡ್ [3] ನಂಬರ್, ಗಜಾನನ ನಂ 1. ಸ್ಥಾನ ಸಿಕ್ಕಿದೆ. ಚುನಾವಣಾ ಆಯೋಗ ಸರಿಯಾದ ನಂಬರ್ ಕೊಟ್ಟಿದೆ. ಈ ನಂಬರ್ ಕೊಟ್ಟ ಹಾಗೆ ಗಜಾನನ ಮಂಗಸೂಳಿ ಅವರು ಉಪಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀನು ಕೂಡ ಕುಮಟಳ್ಳಿಯಂತೆ ಮೋಸ ಮಾಡಬೇಡ ಎಂದು ಗಜಾನನ ಅವರಿಗೆ ಸಲಹೆ ನೀಡಿದ್ದಾರೆ. ಅನರ್ಹರೆಲ್ಲ  ನಾಲಾಯಕರು, ಅಯೋಗ್ಯರಾಗಿದ್ದಾರೆ. ಈ ನಾಲಾಯಕರನ್ನ ಲಾಯಕ್ ಮಾಡಬೇಡಿ, ಮಹೇಶ್ ಕುಮಟಳ್ಳಿಯನ್ನ ಶಾಶ್ವತವಾಗಿ ಅನರ್ಹರನ್ನಾಗಿ ಮಾಡಿ, ಅವರನ್ನ ಪರ್ಮನೆಂಟ್ ಆಗಿ ಮುಂಬೈಗೆ ಕಳುಹಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಭೀಕರ ಪ್ರವಾಹ ಬಂದ ವೇಳೆ ಸಂತ್ರಸ್ತರು ಗಂಜಿ ಕುಡಿಯುತ್ತಿದ್ರೆ, ಅನರ್ಹ ಕುಮಟಳ್ಳಿ ಮುಂಬೈ ಹೊಟೇಲ್ ನಲ್ಲಿ 2 ಸಾವಿರ ರು. ಟೀ ಕುಡಿಯುತ್ತಿದ್ದ, ಕುಮಟಳ್ಳಿ ಹಣ ಕೊಡಲು ಬಂದ್ರೆ ತಗೊಳ್ಳಿ, ಬಿಡಬೇಡಿ ಅದು ನಿಮ್ಮ ಹಣವಾಗಿದೆ. ಕುಮಟಳ್ಳಿಯಿಂದ ಹಣ ಪಡೆದು ಕಾಂಗ್ರೆಸ್ ಗೆ ಓಟು ಹಾಕಿ ಎಂದು ಹೇಳಿದ್ದಾರೆ.