ಅಥಣಿ(ನ.20): ಪಾಪ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಗ್ಗೆ ನಮಗೆ ಅನುಕಂಪ ಆಗ್ತಿದೆ. ಸವದಿಯವರು ಮೊದಲ ರೌಂಡ್ ಕುಸ್ತಿಯಲ್ಲೇ ಸೋತು ಬಿಟ್ಟಿದ್ದಾರೆ. ಉಪಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲ ಹೀಗಾಗಿ ಅವರ ಬಗ್ಗೆ ನಮಗೆ ಅನುಕಂಪ ಇದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಅವರು ಲೇವಡಿ ಮಾಡಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಲಕ್ಷ್ಮಣ ಸವದಿ ಅವರು ಸ್ಥಳೀಯ ಬಿಜೆಪಿ ನಾಯಕರಾಗಿದ್ದಾರೆ. ಆದರೆ ಬೇರೆ ಕಡೆಯಿಂದ ಬಂದವರು ಟಿಕೆಟ್ ತಗೊಂಡು ಇವರಿಗೆ ಟಿಕೆಟ್ ತಪ್ಪಿಸಿದ್ದಾರೆ. ಸವದಿಯವರಿಗೆ ಟಿಕೆಟ್ ತಪ್ಪಿದ್ದು ನನಗೆ ನಿಜವಾಗಿಯೂ ನೋವಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಾಪ ಲಕ್ಷ್ಮಣ ಸವದಿ ಅವರಿಗೆ ಕುಸ್ತಿ ಹಿಡಿಯೋದಕ್ಕೆ ಪ್ರವೇಶವನ್ನೇ ಕೊಟ್ಟಿಲ್ಲ, ಲಕ್ಷ್ಮಣ ಸವದಿ ಜಾಗದಲ್ಲಿ ನಾನಿದ್ದಿದ್ದರೇ ಬೇರೆಯೇ ಮಾಡ್ತಿದ್ದೇ ಎಂದು ಎಂ ಬಿ ಪಾಟೀಲ ಲೇವಡಿ ಮಾಡಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.