‘ಜನತಾ ಕರ್ಫ್ಯೂದಿಂದ ಕೊರೋನಾ ಹತೋಟಿಗೆ ತರಲು ಸಾಧ್ಯವಿಲ್ಲ’

22 ಸಾವಿರ ಜನ ವಿದೇಶಗಳಿಂದ ದೇಶಕ್ಕೆ ಆಗಮಿಸುತ್ತಿದ್ದಾರೆ| ಇಟಲಿಯಿಂದ ರಾಜ್ಯಕ್ಕೆ 231 ಜನ ಆಗಮಿಸುತ್ತಿದ್ದಾರೆ| ಇದು ಆತಂಕಕಾರಿಯಾದ ವಿಷಯ|ವಿದೇಶದಿಂದ ಬರುವವರನ್ನ ಒಂದು ಕ್ಯಾಂಪ್ ನಲ್ಲೇ 14 ದಿನ ಇಡುವಂತ ಕೆಲಸವನ್ನ ಸರ್ಕಾರ ಮಾಡಬೇಕು| ಇಟಲಿಯಿಂದ ಬಂದವರು ಸಾರ್ವಜನಿಕ ಕ್ಷೇತ್ರಗಳಲ್ಲಿ ತಿರುಗಾಡಿದರೆ ಪರಿಸ್ಥಿತಿ ಕಷ್ಟವಾಗಬಹುದು|

Former Minister H K Patil Reacts Over Janata Curfew

ಗದಗ[ಮಾ.22]: ಜನತಾ ಕರ್ಫ್ಯೂ ಸ್ವಾಗತಾರ್ಹ ಹೆಜ್ಜೆಯಾಗಿದೆ. ಜನತಾ ಕರ್ಫ್ಯೂ ಅನ್ನ ನಾವು ಕೂಡ ಪಾಲಿಸುತ್ತಿದ್ದೇವೆ.  ಆದರೆ ಸರ್ಕಾರ ಇನ್ನೂ ಹೆಚ್ಚಿನ ಮುಂಜಾಗೃತ ಕ್ರ‌ಮಗಳನ್ನ ಕೈಗೊಳ್ಳಬೇಕು. ಜನತಾ ಕರ್ಫ್ಯೂ ಒಂದೇ ಕೊರೋನಾ ವೈರಸ್ ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ಮಾಜಿ ಎಚ್.ಕೆ ಪಾಟೀಲ್ ಹೇಳಿದ್ದಾರೆ. 

ಜನತಾ ಕರ್ಫ್ಯೂಗೆ ಭರ್ಜರಿ ಬೆಂಬಲ: ಕುಂದಾನಗರಿ ಬೆಳಗಾವಿ ಸ್ತಬ್ಧ!

ಇಂದು[ಭಾನುವಾರ]ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, 22 ಸಾವಿರ ಜನ ವಿದೇಶಗಳಿಂದ ದೇಶಕ್ಕೆ ಆಗಮಿಸುತ್ತಿದ್ದಾರೆ.ಇಟಲಿಯಿಂದ ರಾಜ್ಯಕ್ಕೆ 231 ಜನ ಆಗಮಿಸುತ್ತಿದ್ದಾರೆ. ಇದು ಆತಂಕಕಾರಿಯಾದ ವಿಷಯವಾಗಿದೆ. ವಿದೇಶದಿಂದ ಬರುವವರನ್ನ ಒಂದು ಕ್ಯಾಂಪ್ ನಲ್ಲೇ 14 ದಿನ ಇಡುವಂತ ಕೆಲಸವನ್ನ ಸರ್ಕಾರ ಮಾಡಬೇಕು. ಇಟಲಿಯಿಂದ ಬಂದವರು ಸಾರ್ವಜನಿಕ ಕ್ಷೇತ್ರಗಳಲ್ಲಿ ತಿರುಗಾಡಿದರೆ ಪರಿಸ್ಥಿತಿ ಕಷ್ಟವಾಗಬಹುದು. 5 ಸ್ಟಾರ್ ಹೊಟೆಲ್ ಗಳನ್ನ ಸರ್ಕಾರ ವಶಕ್ಕೆ ಪಡೆದು ವಿದೇಶಗಳಿಂದ ಬಂದವರನ್ನ ಅಲ್ಲಿಡುವ ಕೆಲಸ ಮಾಡಲಿ, ಈ ಬಗ್ಗೆ ನಾನು ನನಗಿರುವ ಮಾಹಿತಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

 

 

ಜನತಾ ಕರ್ಫ್ಯೂಗೆ ಶಿವಮೊಗ್ಗದಲ್ಲಿ ವ್ಯಾಪಕ ಬೆಂಬಲ

ನಾನು ತಪ್ಪು ಮಾಹಿತಿ ನೀಡಿದ್ದೇನೆ ಅಂದರೆ ಸರ್ಕಾರವೇ ಹೇಳಲಿ, ವಿದೇಶದಿಂದ ಎಷ್ಟು ಜನ ಬಂದಿದ್ದಾರೆ ಅಂತ. ರಾಜ್ಯದ ಗಡಿಗಳನ್ನ ಬಂದ್ ಮಾಡುತ್ತೇವೆ ಅಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ,  ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆದ್ರೆ ಇಲ್ಲಿ ಏರ್ಪೋಟ್ ಗಳಲ್ಲಿ ವಿದೇಶದಿಂದ ಜನ ಬರ್ತಾನೆ ಇದ್ದಾರೆ. ಗಡಿ ಬಂದ್ ಮಾಡಿ ಏನು ಪ್ರಯೋಜನ. ನಾನು ಈ ವಿಚಾರದಲ್ಲಿ ರಾಜಕಾರಣ ಬೆರಸಲ್ಲ. ಇದು ರಾಷ್ಟ್ರೀಯ ವಿಚಾರವಾಗಿದೆ. ನಾವೆಲ್ಲರೂ ಪಕ್ಷಾತೀತವಾಗಿ ಇದನ್ನ ಎದುರಿಸಬೇಕಿದೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios