ಇದೆಂಥಾ ಅವಸ್ಥೆ ಮಾರಾಯ್ರೆ! ಮಾಜಿ ಡಿಸಿಎಂ ಬಳಿ ಕಂದಾಯ ಕಟ್ಲಿಕ್ಕೆ ದುಡ್ಡಿಲ್ವಾ?
ಬಡ ರೈತರು, ಕಾರ್ಮಿಕರು ತಪ್ಪದೇ ತೆರಿಗೆ ಕಟ್ಟುತ್ತಾರೆ, ಆದ್ರೆ ಪ್ರಭಾವಿಗಳನ್ನು ಯಾರು ಕೇಳ್ತಾರೆ..? ಮಾಜಿ ಡಿಸಿಎಂ ಅವರೇ 4 ವರ್ಷದಿಂದ ತೆರಿಗೆ ಕಟ್ಟದೆ ಸುಮಾರು 71 ಲಕ್ಷದಷ್ಟು ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ತುಮಕೂರು(ಡಿ.14): ಬಡ ರೈತರು, ಕಾರ್ಮಿಕರು ತಪ್ಪದೇ ತೆರಿಗೆ ಕಟ್ಟುತ್ತಾರೆ, ಆದ್ರೆ ಪ್ರಭಾವಿಗಳನ್ನು ಯಾರು ಕೇಳ್ತಾರೆ..? ಮಾಜಿ ಡಿಸಿಎಂ ಅವರೇ 4 ವರ್ಷದಿಂದ ತೆರಿಗೆ ಕಟ್ಟದೆ ಸುಮಾರು 71 ಲಕ್ಷದಷ್ಟು ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
"
ಬಡವರು ತೆರಿಗೆ ಕಟ್ಟದೆ ಇದ್ದಾಗ ಕಾಡಿಸಿ, ಪೀಡಿಸಿ ತೆರಿಗೆ ವಸೂಲಿ ಮಾಡೋ ಅಧಿಕಾರಿಗಳು ಪ್ರಭಾವಿಗಳು, ಶ್ರೀಮಂತರೂ ಕಂದಾಯ ಕಟ್ಟದಿದ್ದರೆ ಮಾತ್ರ ತಟಸ್ಥರಾಗಿ ಇದ್ದುಬಿಡುತ್ತಾರೆ. ಸಾಮಾನ್ಯ ಜನರ ಕೆಲವೇ ಸಾವಿರ ತೆರಿಗೆ ಕಟ್ಟದೇ ಇದ್ದಲ್ಲಿ ತಟ್ಟನೆ ಕಂಡು ಹಿಡಿಯೋ ಅಧಿಕಾರಿಗಳು ಲಕ್ಷ ಲಕ್ಷ ತೆರಿಗೆ ವಂಚನೆಯಾದ್ರೂ ಸುಮ್ಮನಿರುವುದು ವಿಪರ್ಯಾಸ.
ಮತ್ತೋರ್ವ ಮಹಿಳೆಗೆ ಸಿಗುತ್ತಾ BSY ಸಂಪುಟದಲ್ಲಿ ಸ್ಥಾನ ?.
ಮಾಜಿ ಡಿಸಿಎಂ ಬರೋಬ್ಬರಿ 4 ವರ್ಷಗಳಿಂದ ಕಂದಾಯ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ. ಮಾಜಿ ಡಿಸಿಎಂ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಕಂದಾಯ ತೆರಿಗೆ ವಂಚನೆ ಮಾಡಲಾಗಿದೆ. ಶಿಕ್ಷಣ ಸಂಸ್ಥೆ ಹೆಗ್ಗೆರೆ ಗ್ರಾಮ ಪಂಚಾಯತ್‌ಗೆ ಬರೊಬ್ಬರಿ 71 ಲಕ್ಷ ರೂ ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ.
2015 ರಿಂದ 2019 ರ ವರೆಗೆ ಬರೊಬ್ಬಿ 71 ಲಕ್ಷ ಕಂದಾಯ ಬಾಕಿ ಉಳಿಸಿಕೊಳ್ಳಲಾಗಿದೆ. ಹೆಗ್ಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ಸಿದ್ದಾರ್ಥ ಯೂನಿವರ್ಸಿಟಿ, ಡೆಂಟಲ್ ಕಾಲೇಜು, ಗಂಗಾಧರಯ್ಯ ಮೆಮೊರಿಯಲ್ ಹಾಲ್ ಸೇರಿದಂತೆ ಒಟ್ಟು 7ಆಸ್ತಿಗಳ ಕಂದಾಯ ತೆರಿಗೆ ವಾಕಿ ಇದೆ.
ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ತುಮಕೂರು ಮಹಾನಗರ ಪಾಲಿಕೆಗೂ 2 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ. ಐಟಿ ದಾಳಿ ವೇಳೆ ಪಾಲಿಕೆಗೆ ತೆರಿಗೆ ಕಟ್ಟದ ವಿಚಾರ ಬಹಿರಂಗವಾಗಿತ್ತು.
ಗ್ರಾಮ ಪಂಚಾಯಿತಿ ಪೂರೈಸೋ ಕುಡಿಯೋ ನೀರಿನ ಟ್ಯಾಂಕ್‌ನಲ್ಲೇ ವಿಷ..!