Asianet Suvarna News Asianet Suvarna News

ವಿಧಾನಸೌಧದಲ್ಲಿ ಸಾವರ್ಕರ ಚಿತ್ರ ದುಸ್ಸಾಹಸ: ಸಿದ್ದರಾಮಯ್ಯ

ಬಿಜೆಪಿ ಪ್ರಕಾರ ಸಾವರ್ಕರ ಒಬ್ಬರೇ ದೇಶ ಪ್ರೇಮಿಯಾಗಿದ್ದಾರಾ?: ಸಿದ್ದರಾಮಯ್ಯ

Former CM Siddaramaiah Talks Over Savarkar grg
Author
First Published Dec 20, 2022, 9:30 PM IST

ಜಮಖಂಡಿ(ಡಿ.20):  ವಿಧಾನಸೌಧದಲ್ಲಿ ಸಾವರ್ಕರ್‌ ಅವರ ಭಾವಚಿತ್ರ ಹಾಕುವ ದುಸ್ಸಾಹಕ್ಕೆ ಬಿಜೆಪಿ ಸರ್ಕಾರ ಕೈಹಾಕಿದ್ದು ಖಂಡನಾರ್ಹ. ಬಿಜೆಪಿ ಪ್ರಕಾರ ಸಾವರ್ಕರ್‌ ಒಬ್ಬರೇ ದೇಶ ಪ್ರೇಮಿಯಾಗಿದ್ದಾರಾ? ಈ ದæೕಶಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹಾಪುರುಷರು ಸಾಕಷ್ಟು ಜನರಿದ್ದು, ವಿಧಾನಸೌಧದಲ್ಲಿ ಅಂಥವರ ಭಾವಚಿತ್ರ ಹಾಕುವುದು ಅಗತ್ಯವಾಗಿತ್ತು ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ಕಾಶಿಲಿಂಗೇಶ್ವರ ಕಲ್ಯಾಣಮಂಟಪ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೊ ಅನಾವರಣ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಸಾವರ್ಕರ್‌ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ವಲ್ಲಭಭಾಯಿ ಪಟೇಲ್‌, ಸುಭಾಸ್‌ಚಂದ್ರ ಭೋಸ್‌, ಮಹಾತ್ಮ ಗಾಂಧೀಜಿ, ಅಂಬೇಡ್ಕರ್‌, ಬಸವೇಶ್ವರ, ವಿವೇಕಾನಂದ ಫೋಟೋ ಹಾಕಿರುವುದಕ್ಕೆ ನಮ್ಮ ವಿರೋಧವಿಲ್ಲ. ಅವರ ಜೊತೆ ರಾಷ್ಟ್ರನಾಯಕರಾದ ನೆಹರೂ, ಜಗಜೀವನ್‌ರಾಂ, ವಾಲ್ಮೀಕಿ, ಕನಕದಾಸ, ನಾರಾಯಣಗುರು, ಶಿಶುನಾಳ ಶರೀಫ, ಕುವೆಂಪು ಇಂತಹ ಮಹಾತ್ಮರ ಚಿತ್ರಗಳನ್ನು ಅಲ್ಲಿ ಹಾಕಬೇಕಿತ್ತು. ಇವರಿಂದ ಸಮಾಜಕ್ಕೆ ಒಳ್ಳೆಯದಾಗಿಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲಿ ಜಾತಿ ಆಧಾರಿತ ಸಿಎಂ ಆಯ್ಕೆ ಇಲ್ಲ: ಡಾ.ಜಿ.ಪರಮೇಶ್ವರ್‌

ಬಿಜೆಪಿಯವರಿಗೆ ಕೆಲವು ಪೂರ್ವಗ್ರಹಗಳಿದ್ದು, ತಮ್ಮ ಅಜೆಂಡಾದಲ್ಲಿ ಇರುವವರನ್ನು ಬಿಟ್ಟು ಬೇರೆಯವರನ್ನು ಗುರುತಿಸುವ ಮನೋಧರ್ಮ ಅವರಲ್ಲಿ ಇಲ್ಲ. ಅವರೆಲ್ಲ ಸ್ವಾರ್ಥಿಗಳು ಎಂದು ಲೇವಡಿ ಮಾಡಿದರು.

ಹಾವೇರಿ ಜಿಲ್ಲೆ ಅಕ್ಕಿಮಠದ ಅಗಡಿಯ ಗುರುಲಿಂಗ ಸ್ವಾಮೀಜಿ, ಸದಾಲಿಂಗೇಶ್ವರ ಮಹಾರಾಜರು, ಮೃತ್ಯುಂಜಯ ಸ್ವಾಮೀಜಿ, ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಂ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕ ಆನಂದ ನ್ಯಾಮಗೌಡ, ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ, ವರ್ಧಮಾನ ನ್ಯಾಮಗೌಡ, ಅರ್ಜುನ ದಳವಾಯಿ, ಸುಭಾಸ ಪಾಟೋಳ್ಳಿ, ಅಭಯ ನಾಂದ್ರೇಕರ, ಕಲ್ಲಪ್ಪ ಗಿರಡ್ಡಿ, ಆದಿನಾಥ ಸಕಳೆ, ದೇವಸ್ಥಾನ ಕಮಿಟಿ ಅಧ್ಯಕ್ಷ ಶಿವಪ್ಪ ಅತಾಲಟ್ಟಿ, ಇತರರು ವೇದಿಕೆಯಲ್ಲಿ ಇದ್ದರು.

ಕಾಶಿಲಿಂಗೇಶ್ವರ ಕಲ್ಯಾಣಮಂಟಪ ಉದ್ಘಾಟನೆ

ಕಾಜಿಬೀಳಗಿಯ ಕಾಶಿಲಿಂಗೇಶ್ವರ ಸಾವಿರಕೊಳ್ಳದಲ್ಲಿ ಕಲ್ಯಾಣಮಂಟಪವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕೇತ್ರದ ಮಹಿಮೆ ಅಪಾರವಾಗಿದೆ. ಇದನ್ನು 2ನೇ ಕಾಶಿ ಎಂದೇ ಇಲ್ಲಿನ ಜನರು ನಂಬಿದ್ದಾರೆ. ಈ ಭಾಗದಲ್ಲೂ ಕೂಡಾ ಕಲ್ಯಾಣ ಕಾರ್ಯಗಳು ನಡೆಯಲಿ ಎಂದು ಲೋಕಕಲ್ಯಾಣಕ್ಕಾಗಿ ಈ ಹಿಂದೆ ಕಾಜಿಬೀಳಗಿಗೆ ಬಂದ ಸಂದರ್ಭದಲ್ಲಿ ಕಲ್ಯಾಣ ಮಂಟಪಕ್ಕೆ .1 ಕೋಟಿ ಅನುದಾನ ನೀಡಿದ್ದೆವು. ಈಗ .3.5 ಕೋಟಿ ವೆಚ್ಚದಲ್ಲಿ ಅದ್ಭುತವಾದ ಸಮುದಾಯ ಭವನವನ್ನು ಇಲ್ಲಿ ನಿರ್ಮಿಸಿದ್ದಾರೆ. ಇದಕ್ಕೆಲ್ಲ ದೇವಸ್ಥಾನ ಕಮಿಟಿ ಅಧ್ಯಕ್ಷರ, ಕಾಜಿಬೀಳಗಿಯ ಜನರ ಆಶೀರ್ವಾದ ಮತ್ತು ಕಾಶಿಲಿಂಗೇಶ್ವರನ ಕೃಪೆ ಕಾರಣವಾಗಿದೆ ಎಂದರು.
ಈಗಾಗಲೆ ಈ ಕ್ಷೇತ್ರದಲ್ಲಿ ಶಾಸಕ ಆನಂದ ನ್ಯಾಮಗೌಡರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಶ್ಲಾಘನಿಯ. ಹಾಗಾಗಿ, ಈ ಬಾರಿಯೂ ಜನರು ಅವರನ್ನು ಆಶೀರ್ವದಿಸಬೇಕು ಎಂದರು.

Follow Us:
Download App:
  • android
  • ios