ಸಿದ್ದರಾಮಯ್ಯಗೆ ಅನಾರೋಗ್ಯ: ಬನಶಂಕರಿ ದೇವಿಗೆ ದೀರ್ಘದಂಡ ನಮಸ್ಕಾರ ಸೇವೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅನಾರೋಗ್ಯ| ಅಭಿಮಾನಿಗಳು ಸಿದ್ದರಾಮಯ್ಯ ಬೇಗನೆ ಗುಣಮುಖರಾಗಲೆಂದು ಬನಶಂಕರಿ ದೇವಿಗೆ ವಿಶೇಷ ಪೂಜೆ, ದೀರ್ಘದಂಡ ನಮಸ್ಕಾರ ಸೇವೆ| ನಾಡಿನ ಶಕ್ತಿಪೀಠಗಳಲ್ಲೊಂದಾಗಿರುವ ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನ|
ಬಾಗಲಕೋಟೆ(ಡಿ.12): ಮಾಜಿ ಸಿಎಂ ಹಾಗೂ ಜಿಲ್ಲೆಯ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅನಾರೋಗ್ಯ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಿದ್ದರಾಮಯ್ಯ ಅವರು ಬೇಗನೆ ಗುಣಮುಖರಾಗಲೆಂದು ಬನಶಂಕರಿ ದೇವಿಗೆ ವಿಶೇಷ ಪೂಜೆ, ದೀರ್ಘದಂಡ ನಮಸ್ಕಾರ ಸಲ್ಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ ಅವರ ಅಭಿಮಾನಿಗಳು ನಾಡಿನ ಶಕ್ತಿಪೀಠಗಳಲ್ಲೊಂದಾಗಿರುವ ಬಾದಾಮಿಯ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಯುವ ಮುಖಂಡ ಅನಿಲ್ ಕುಮಾರ್ ದಡ್ಡಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಲಾಗಿದೆ. ಈ ವೇಳೆ ಸಿದ್ದರಾಮಯ್ಯ ಅಭಿಮಾನಿ ಹಿರೇಬೂದಿಹಾಳ ಗ್ರಾಮದ ಗ್ರಾಪಂ ಸದಸ್ಯ ರಂಗಪ್ಪ ಎಂಬುವರು ದೀರ್ಘದಂಡ ನಮಸ್ಕಾರ ಸೇವೆ ಮಾಡುವ ಮೂಲಕ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಪುಷ್ಕರಣಿಯಿಂದ ಬನಶಂಕರಿ ದೇಗುಲದ ಸುತ್ತಲೂ ರಂಗಪ್ಪ ಅವರು ದೀರ್ಘದಂಡ ನಮಸ್ಕಾರ ಸೇವೆ ಸಲ್ಲಿಸಿದ್ದಾರೆ.