Asianet Suvarna News Asianet Suvarna News

'ಮಹದಾಯಿ ನೀರು ಹಂಚಿಕೆ ಸಂಪೂರ್ಣ ತೃಪ್ತಿ ತಂದಿಲ್ಲ'

ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ ನಮಗೆ ಸಂಪೂರ್ಣ ನೀರು ಸಿಗದಿರುವುದು ತೃಪ್ತಿ ತಂದಿಲ್ಲ| ಮಾಜಿ ಸಚಿವ ಬಿ.ಆರ್‌. ಯಾವಗಲ್‌ ಹೇಳಿಕೆ| ಸದ್ಯ ಈ ನೀರು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ|  ರಾಜ್ಯ ಸರ್ಕಾರ ಬೇಗ ಕಾಮಗಾರಿ ಪ್ರಾರಂಭ ಮಾಡಬೇಕು| 

Former CM B R Yavagal Reacts Over Gazette Notification on Mahadayi
Author
Bengaluru, First Published Feb 29, 2020, 8:36 AM IST

ನರಗುಂದ(ಫೆ.29): ರೈತ ಸಮುದಾಯದ ಬಹು ದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ ನಮಗೆ ಸಂಪೂರ್ಣ ನೀರು ಸಿಗದಿರುವುದು ತೃಪ್ತಿ ತಂದಿಲ್ಲವೆಂದು ಮಾಜಿ ಸಚಿವ ಬಿ.ಆರ್‌. ಯಾವಗಲ್‌ ಹೇಳಿದ್ದಾರೆ.

ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 40 ವರ್ಷದಿಂದ ಈ ಭಾಗದ ಮಲಪ್ರಭೆ ಜಲಾಶಯಕ್ಕೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ತಂದು ಜೋಡಣೆ ಮಾಡಬೇಕೆಂದು ಈ ಭಾಗದ ರೈತ ಸಮುದಾಯದ ಬೇಡಿಕೆಯಾಗಿತ್ತು. ಆ ಪ್ರಕಾರ ನಾನು ನನ್ನ 40 ವರ್ಷ ರಾಜಕೀಯ ಜೀವನದಲ್ಲಿ ಈ ಯೋಜನೆ ಜಾರಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮೇಲಾಗಿ ಈ ಹಿಂದೆ ಈ ಭಾಗದ ಕಾಂಗ್ರೆಸ್‌ ನಾಯಕರಾದ ಎಚ್‌.ಕೆ. ಪಾಟೀಲರು ರಾಜ್ಯದ ನೀರಾವರಿ ಸಚಿವರಾದ ಸಂದರ್ಭದಲ್ಲಿ ಅವರಿಗೆ ನಾನು ಮನವಿ ಮಾಡಿಕೊಂಡು ಈ ಯೋಜನೆ ಜಾರಿ ಮಾಡಬೇಕೆಂದು ಒತ್ತಾಯ ಮಾಡಿದ್ದೆ. ಆದರೆ ಕೆಲವು ಕಾನೂನು ತೊಡಕಗಳಿಂದ ಈ ಯೋಜನೆ ಜಾರಿಯಾಗಲು ಸಾಧ್ಯವಾಗಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣ ಕರ್ನಾಟಕ ರಾಜ್ಯಕ್ಕೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರನಲ್ಲಿ 13.42 ಟಿಎಂಸಿ ನೀರು ನೀಡಬೇಕೆಂದು ಹೇಳಿತ್ತು. ಆದರೆ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸದ್ದರಿಂದ ಈ ನೀರು ಬಳಕಗೆ ನಮಗೆ ತೊಂದರೆಯಾಗಿತ್ತು. ಸುಪ್ರೀಂ ಕೋರ್ಟ್‌ ನ್ಯಾಯಾಧಿಕರಣದ ತೀರ್ಪು ಎತ್ತಿ ಹಿಡಿದು ಕರ್ನಾಟಕ ರಾಜ್ಯಕ್ಕೆ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದರಿಂದ ಗುರುವಾರ ಈ ನೀರು ಬಳಕಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಸಂತೋಷ ತಂದಿದೆ. ಆದರೆ ನಮಗೆ ನದಿಯಲ್ಲಿ ಹರಿಯುವ ನೀರಿನಲ್ಲಿ ಹೆಚ್ಚು ನೀರು ಸಿಗದಿರುವುದು ತೃಪ್ತಿ ತಂದಿಲ್ಲ ಎಂದರು. ಸದ್ಯ ಈ ನೀರು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರ ಬೇಗ ಕಾಮಗಾರಿ ಪ್ರಾರಂಭ ಮಾಡಬೇಕೆಂದು ಅವರು ಒತ್ತಾಯಿಸಿದರು.

ಧಾರವಾಡ ಕೆಸಿಸಿ ಬ್ಯಾಂಕ್‌ ನಿರ್ದೇಶಕ ಎಸ್‌.ಡಿ. ಕೊಳ್ಳಿ, ಪುರಸಭೆ ಸದಸ್ಯ ಫಕೀರಪ್ಪ ಸವದತ್ತಿ, ತಾಪಂ ಅಧ್ಯಕ್ಷ ವಿಠಲ ತಿಮ್ಮರಡ್ಡಿ, ಸದಸ್ಯರಾದ ಪ್ರಭುಲಿಂಗಪ್ಪ ಯಲಿಗಾರ, ಪಿ.ಎಲ್‌.ತಿರಕನಗೌಡ್ರ, ರಾಜು ಕಲಾಲ, ಪ್ರವೀಣ ಯಾವಗಲ್‌, ಬಸಪ್ಪ ನರಗುಂದ. ಪ್ರಕಾಶ ಹಡಗಲಿ, ಶಂಕರ ಪಾರ್ಟನಕರ, ವಿಷ್ಣು ಸಾವಂತ, ಎಂ.ಬಿ.ಅರಹುಣಸಿ, ಸೇರಿದಂತೆ ಮುಂತಾದವರು ಇದ್ದರು.
 

Follow Us:
Download App:
  • android
  • ios