ಬಾಗಲಕೋಟೆ(ಆ.29): ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಬಾರಮ್ಮ ನಟಿ, ಸಿನಿಮಾ ನಟಿ ಎಂದು ಆತ್ಮೀಯತೆಯಿಂದ ಕರೆದ ಘಟನೆ ಬಾದಾಮಿಯಲ್ಲಿ ನಡೆದಿದೆ.

ಸ್ವಕ್ಷೇತ್ರ ಬಾದಾಮಿಯಿಂದ ಬೆಂಗಳೂರಿಗೆ ಹೊರಡಲು ಸಜ್ಜಾಗಿದ್ದ ಸಿದ್ದರಾಮಯ್ಯ, ತಮ್ಮನ್ನು ಕಾಣಲು ಬಂದ ಉಮಾಶ್ರೀ ಅವರನ್ನು ಬಾರಮ್ಮ ಸಿನಿಮಾ ನಟಿ ಎಂದು ಆತ್ಮೀಯತೆಯಿಂದ ಕರೆದರು.

ಸಿದ್ದರಾಮಯ್ಯ ಅವರನ್ನು ಕಾಣಲು ಬಂದಿದ್ದ ಜನಜಂಗುಳಿ ಮಧ್ಯೆಯೇ ಅವರತ್ತ ಧಾವಿಸಿದ ಉಮಾಶ್ರೀ, ನಾನು ವರ ಬಳಿ ಏನೋ ಹೇಳೊದಿದೆ ದಾರಿ ಬಿಡಿ ಎಂದು ಮನವಿ ಮಾಡಿದರು. ಇದನ್ನು ಕಂಡ ಸಿದ್ದರಾಮಯ್ಯ ಉಮಾಶ್ರೀ ಅವರಿಗೆ ತಮ್ಮತ್ತ ಬರಲು ಅವಕಾಶ ಮಾಡಿಕೊಟ್ಟರು.