ಹೊಸಪೇಟೆ(ಡಿ.15): ಅಗಲಿದ ತನ್ನ ತಾಯಿ ಆತ್ಮಕ್ಕೆ ಶಾಂತಿಕೋರಿ ದಕ್ಷಿಣ ಆಫ್ರಿಕಾ ಮೂಲದ ಯುವತಿಯೊಬ್ಬಳು ಹಂಪಿಯಲ್ಲಿ ಶನಿವಾರ ಹಿಂದೂ ಸಂಪ್ರದಾಯದಂತೆ ಶ್ರಾದ್ಧ ಕರ್ಮಗಳನ್ನು ನೆರವೇರಿಸುವ ಮೂಲಕ ಪಿಂಡ ಪ್ರದಾನ ಮಾಡಿದ್ದಾರೆ. 

"

ನದಿ ತೀರದಲ್ಲಿರುವ ಹಂಪಿ ವೈದಿಕ ಮಂಟಪದಲ್ಲಿ ಶ್ರಾದ್ಧ ಕಾರ್ಯಗಳನ್ನು ನೆರವೇರಿಸಿ ಬಳಿಕ ನದಿಯಲ್ಲಿ ಪಿಂಡ ವಿಸರ್ಜನೆ ಮಾಡುವ ಮೂಲಕ ಅಗಲಿದ ತನ್ನ ತಾಯಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. 

ದಕ್ಷಿಣ ಆಫ್ರಿಕಾದಲ್ಲಿ ತಾಯಿ ಕಾಲಿಯಾ ಮೃತಪಟ್ಟಿದ್ದಾರೆ. ಅಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಹಂಪಿಯಲ್ಲಿ ಶ್ರಾದ್ಧ ಕರ್ಮಗಳನ್ನು ಮಾಡಲಾಗುತ್ತಿದೆ ಎಂದು ಯುವತಿ ತಿಳಿಸಿದ್ದಾರೆ. ಹಂಪಿ ಕ್ಷೇತ್ರ ಪುರೋಹಿತ ಮೋಹನ ಚಿಕ್ಕಭಟ್‌ ಜೋಷಿ ಶ್ರಾದ್ಧ ಕರ್ಮಗಳನ್ನು ನಡೆಸಿಕೊಟ್ಟಿದ್ದಾರೆ.(ಚಿತ್ರ ಕೃಪೆ: ರಾಚಯ್ಯ ಎಸ್ ಸ್ಥಾವರಿಮಠ)