ಬೆಳಗಾವಿ: ಡೆಡ್ಲಿ ಕೋತಿ ಸೆರೆ ಹಿಡಿದ ಅರಣ್ಯ ಇಲಾಖೆಯ ಸಿಬ್ಬಂದಿ, ನಿಟ್ಟುಸಿರು ಬಿಟ್ಟ ರಾಮದುರ್ಗದ ಜನತೆ!
ಬೆಳಗ್ಗೆಯಿಂದಲೇ ಅರಣ್ಯ ಇಲಾಖೆ ಹಾಗೂ ಕೋತಿ ಹಿಡಿಯುವರಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸೆರೆ ಹಿಡಿಯಲು ಬಂದ ವಾಹನದ ಮೇಲೆ ಹಲವು ಸಲ ಕುಳಿತು ವಾಪಸ್ ಹೋಗಿತ್ತು ಕೋತಿ. ಕೊನೆಗೂ ಡೆಡ್ಲಿ ಕೋತಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ(ನ.03): ಡೆಡ್ಲಿ ಕೋತಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದರಿಂದ ಬೆಳಗಾವಿ ರಾಮದುರ್ಗದ ಪಟ್ಟಣದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿಯೇ ಸುಮಾರು 18 ಜನರಿಗೆ ಕೋತಿ ಕಚ್ಚಿತ್ತು. ಕೋತಿ ಕಾಟಕ್ಕೆ ಬೇಸತ್ತು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಜನರು ಓಡಾಡುತ್ತಿದ್ದರು.
ಬೆಳಗ್ಗೆಯಿಂದಲೇ ಅರಣ್ಯ ಇಲಾಖೆ ಹಾಗೂ ಕೋತಿ ಹಿಡಿಯುವರಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸೆರೆ ಹಿಡಿಯಲು ಬಂದ ವಾಹನದ ಮೇಲೆ ಹಲವು ಸಲ ಕುಳಿತು ವಾಪಸ್ ಹೋಗಿತ್ತು ಕೋತಿ. ಕೊನೆಗೂ ಡೆಡ್ಲಿ ಕೋತಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ದಿನವೇ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ರಾ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ?
ಕೋತಿ ಕಚ್ಚಿದ್ದರಿಂದ ಹಲವರಿಗೆ ಗಂಭೀರವಾದ ಗಾಯಗಳಾಗಿವೆ. ಇಂದು ಸಹ ಬೆಳಗ್ಗೆಯಿಂದಲೇ ಮೂರು ಜನರಿಗೆ ಕೋತಿ ಕಚ್ಚಿತ್ತು. ಕೋತಿ ಸೆರೆ ಹಿಡಿದ ಹಿನ್ನೆಲೆಯಲ್ಲಿ ನೇಕಾರ ಪೇಟೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.