Chikkamagaluru: ಅಕ್ರಮ ಒತ್ತುವರಿ ಕಾಫಿನಾಡಿನಲ್ಲಿ 23 ಎಕರೆ ತೆರವು ಮಾಡಿದ ಅರಣ್ಯ ಇಲಾಖೆ!

ಜಿಲ್ಲೆಯ ಮಲೆನಾಡು ಭಾಗದಲ್ಲಿ ಒತ್ತುವರಿ ತೆರವಿಗೆ ಮುಂದಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಕೂಡ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಗಬ್ಗಲ್ ಗ್ರಾಮದಲ್ಲಿ 23 ಎಕರೆ ಅಕ್ರಮ ಒತ್ತುವರಿಯನ್ನು ತೆರವು ಮಾಡಿದ್ದಾರೆ.

Forest department has cleared 23 acres of illegal encroachment in chikkamagaluru gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.15): ಜಿಲ್ಲೆಯ ಮಲೆನಾಡು ಭಾಗದಲ್ಲಿ ಒತ್ತುವರಿ ತೆರವಿಗೆ ಮುಂದಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಕೂಡ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಗಬ್ಗಲ್ ಗ್ರಾಮದಲ್ಲಿ 23 ಎಕರೆ ಅಕ್ರಮ ಒತ್ತುವರಿಯನ್ನು ತೆರವು ಮಾಡಿದ್ದಾರೆ. ಬಾಳೂರು ಹೋಬಳಿಯ ಗಬ್ಗಲ್ ಸಮೀಪದ ಕೆ. ತಲಗೂರು ಗ್ರಾಮದಲ್ಲಿ ಸರ್ವೇ ನಂ. 59ರಲ್ಲಿ 23.20 ಎಕರೆ ಆಲ್ದೂರು ಅರಣ್ಯ  ವ್ಯಾಪ್ತಿಗೆ ಬರುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೇತೃತ್ವದಲ್ಲಿ ತೆರವುಗೊಳಿಸಿದ್ದಾರೆ. 

ನೋಟಿಸ್ ನೀಡಿ ತೆರೆವು: ಅರಣ್ಯ ಇಲಾಖೆಗೆ ಸೇರಿದ 23.20 ಎಕರೆ ಜಾಗದಲ್ಲಿ ತೋಟದ ಮಾಲೀಕ ರಾಮನಾಥ್ ಆಲಿಯಾಸ್ ಗಣಪತಿ ಚೆಟ್ಟಿಯಾರ್ ಎಂಬುವರು ಒತ್ತುವರಿ ಮಾಡಿದ್ದು ಅದರಲ್ಲಿ ಕಾಫಿ, ಅಡಿಕೆ, ತೆಂಗು ಬೆಳೆ ಬೆಳೆಯಲಾಗಿತ್ತು. ಅದರಲ್ಲಿ ಸದ್ಯಕ್ಕೆ ಕಾಫಿ, ಅಡಿಕೆ ಬೆಳೆಯನ್ನು ಖುಲ್ಲಾಗೊಳಿಸಿ ಸುಮಾರು 65% ರಷ್ಟು ಸರ್ಕಾರಿ ಜಾಗವನ್ನು ಆದೇಶದಂತೆ ತೆರವು ಗೊಳಿಸಲಾಯಿತು. ಶೇ 35 ಭಾಗದಷ್ಟು ಜಾಗವನ್ನು ಖುಲ್ಲಾಗೊಳಿಸಲು ಬಾಕಿ ಇದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖಾ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಸಮಕ್ಷಮದಲ್ಲಿ ಶಾಂತಿಯುತವಾಗಿ ಸರ್ಕಾರಿ ಜಾಗವನ್ನು ತೆರವುಗೊಳಿಸಿ ವಶ ಪಡಿಸಲಾಯಿತು. 

ಎಂ.ಬಿ.ಪಾಟೀಲ್‌ ಪುತ್ರ ತೆಗೆದ ವಿಶೇಷ ಚಿರತೆ ಚಿತ್ರ ವೈರಲ್‌, 'ಅಪರೂಪದ ಚಿರತೆ ಇದಲ್ಲ' ಎಂದ ಬಂಡಿಪುರ!

ಮಾಲೀಕರಿಗೆ ನಾಲ್ಕು ವರ್ಷದ ಹಿಂದೆಯೇ ಈ ಬಗ್ಗೆ ನೊಟೀಸ್ ನೀಡಲಾಗಿತ್ತು. ಅದರಂತೆಯೇ ಜಾಗದಲ್ಲಿನ ಬೆಳೆ  ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಬಾಳೂರು ಸಬ್ ಇನ್ ಸ್ಪೆಕ್ಟರ್  ದಿಲೀಪ್ ಸೇರಿದಂತೆ 25 ಮಂದಿ ಡಿ.ಆರ್.ಪೊಲೀಸರ ತಂಡ ಹಾಗೂ ಆಲ್ದೂರು ವಲಯ ಅರಣ್ಯ ಅಧಿಕಾರಿಗಳಾದ ಹರೀಶ್ ಕುಮಾರ್, ಚರಣ್, ಶಿವಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ನವೀನ್, ಗೌತಮ್, ಸಂದೀಪ್, ಚೇತನ್, ವಿಜಯ್ ಸೇರಿದಂತೆ ಹತ್ತಾರು ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios