Asianet Suvarna News Asianet Suvarna News

ಶಿವಮೊಗ್ಗ: ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

* ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಚನ್ನಗಿರಿ ಆರ್‌ಎಫ್‌ಓ ಸತೀಶ್
* ಕೆಟ್ಟ ಪದಗಳಿಂದ ನಿಂದಿಸಿದ ಅಧಿಕಾರಿ ಸತೀಶ್ 
* ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಾದೇವ

Forest Department Employee Attempt to Suicide in Shivamogga grg
Author
Bengaluru, First Published Jun 27, 2021, 11:48 AM IST

ಶಿವಮೊಗ್ಗ(ಜೂ.27): ವಲಯ ಅರಣ್ಯಾಧಿಕಾರಿ ನೀಡಿದ ಕಿರುಕುಳಕ್ಕೆ ಬೇಸತ್ತ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಿನ್ನೆ(ಶನಿವಾರ) ನಡೆದಿದೆ. ಚನ್ನಗಿರಿ ವಲಯದ ಕ್ಷೇಮಾಭಿವೃದ್ಧಿ ನೌಕರ ಮಹಾದೇವ (55) ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. 

ಚನ್ನಗಿರಿ ಆರ್‌ಎಫ್‌ಓ ಸತೀಶ್ ಮಹಾದೇವ ಅವರಿಗೆ ಕಿರುಕುಳ ನೀಡುತ್ತಿದ್ದರು ಎಂದು ಆತ್ಮಹತ್ಯೆಗೆ ಯತ್ನಿಸಿದ ಮಹಾದೇವ ಅವರ ಪತ್ನಿ ಮೀನಾಕ್ಷಮ್ಮ ಆರೋಪಿಸಿದ್ದಾರೆ.  ಭದ್ರಾವತಿ ಅರಣ್ಯ ವಿಭಾಗದ ದಾವಣಗೆರೆ ಜಿಲ್ಲೆ ಚನ್ನಗಿರಿ ವಲಯದ ಕ್ಷೇಮಾಭಿವೃದ್ಧಿ ನೌಕರ ಮಹಾದೇವ ನಿನ್ನೆ(ಶನಿವಾರ) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಮಹಾದೇವ ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಾದೇವ ಅವರ ಆತ್ಮಹತ್ಯೆ ಯತ್ನಕ್ಕೆ ವಲಯ ಅರಣ್ಯಾಧಿಕಾರಿ ಸತೀಶರವರು ಕಿರುಕುಳ ನೀಡುತ್ತಿದ್ದದ್ದೇ ಕಾರಣ ಎಂದು ಮಹದೇವ ಕುಟುಂಬಸ್ಥರು ಆರೋಪಿಸಿದ್ದಾರೆ. 

ಬೀಳಗಿ: ಮದ್ಯದ ಅಮಲಿನಲ್ಲಿ ಟವರ್‌ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಕುಡುಕ..!

ಚನ್ನಗಿರಿ ಆರ್‌ಎಫ್‌ಓ ಸತೀಶ್ ರವರು ಸುಮಾರು 3 ರಿಂದ 4 ತಿಂಗಳು ನನ್ನ ಗಂಡನ ಸಂಬಳ ನಿಲ್ಲಿಸಿದ್ದರು. ಡೈರಿ ನೀಡಲು ಹೇಳಿದ್ದು ಡೈರಿ ನೀಡಿದ ನಂತರ ಸಂಬಳ ಮಾಡುವುದಾಗಿ ಹೇಳಿದ್ದರು. ನನ್ನ ಗಂಡ ಅನಕ್ಷರಸ್ಥನಾಗಿದ್ದು  ಬೇರೆಯವರ ಸಹಾಯದಿಂದ ಡೈರಿ ಬರೆದು ನೀಡಿದಾಗ ಈ ಎರಡು ಮೂರು ದಿನಗಳ ಹಿಂದೆ ಸಂಬಳವನ್ನು ಮಾಡಿದ್ದಾರೆ. ನಂತರ ಅವರನ್ನು ಈಗ ಕೆಲಸ ಮಾಡುವ ಜಾಗದಿಂದ 30 ರಿಂದ 40 ಕಿ.ಮೀ. ದೂರ ಇರುವ ಜಾಗಕ್ಕೆ ಕೆಲಸಕ್ಕೆ ಹೋಗು ಎಂದು ಆದೇಶ ಮಾಡಿದ್ದಾರೆ. ಬೇರೆ ಜಾಗಕ್ಕೆ ಹೋಗಲು ನನಗೆ ಶಕ್ತಿ ಇಲ್ಲ, ವಾಹನ ಇಲ್ಲ ನನ್ನ ಹೆಂಡತಿಗೆ ಹೃದಯ ಸಂಬಂಧಿ ಕಾಯಿಲೆ ಇದೆ ದೂರ ಹೋಗಲು ಕೌಟುಂಬಿಕ ಸಮಸ್ಯೆ ಉಂಟಾಗುತ್ತದೆ. ಇನ್ನುಳಿದ 4-5 ವರ್ಷ ಇದೇ ಜಾಗದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕಚೇರಿಗೆ ಹೋಗಿ ಬೇಡಿಕೊಂಡಿದ್ದರು. 

ಆದರೆ, ಆರ್‌ಎಫ್‌ಓ ಸತೀಶ್ ಅವರು ಆಗುವುದಿಲ್ಲ ಅಲ್ಲೇ ಕೆಲಸ ಮಾಡು ಇಲ್ಲ ಕೆಲಸ ಬಿಟ್ಟು ಹೋಗು ಎಂದು ಕೆಟ್ಟ ಪದಗಳನ್ನು ಬಳಸಿ ಬೈದಿರುತ್ತಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಪತ್ನಿ ಮೀನಾಕ್ಷಮ್ಮ ಆರೋಪಿಸಿದ್ದಾರೆ. 

ಮಹಾದೇವ ಅವರಿಗೆ ಕಿರುಕುಳ ನೀಡುವ ಪ್ರವೃತ್ತಿಯ ಆರ್‌ಎಫ್ಓ ಅವರನ್ನು ಸೇವೆಯಿಂದ ವಜಗೊಳಿಸಬೇಕು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಹಾದೇವರವರ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಅರಣ್ಯಾಧಿಕಾರಿ ಭರಿಸಬೇಕೆಂದು ಆಗ್ರಹಿಸಿದ್ದಾರೆ. 
 

Follow Us:
Download App:
  • android
  • ios