ವೆಂಕಟರಮಣ ದೇವಾಲಯದ ಎದುರಿನ ರಥ ಬೀದಿ ರಸ್ತೆಯ ಅಂಚಿನಲ್ಲಿ ಮಲಗಿದ್ದ ಬೀದಿ ನಾಯಿಗೆ ಬೆಂಗಳೂರು ಮೂಲದ ಪ್ರವಾಸಿ ವಾಹನ ಬಡಿದಿತ್ತು. ತೀವ್ರ ಗಾಯಗೊಂಡ ನಾಯಿ ನರಳುತಿದ್ದನ್ನು ಕಂಡ ವಿದೇಶಿ ಮಹಿಳೆ ಔಷಧ ತಂದು ಉಪಚರಿಸಿ, ತಿಂಡಿ, ನೀರು ನೀಡಿ, ಪಕ್ಕದಲ್ಲಿ ಮಲಗಿಸಿ ಸುತ್ತಲು ಕಲ್ಲು ಹಾಕಿ ಯಾರು ಹಾಯದಂತೆ ಮಾಡಿದ್ದು ನಿತ್ಯ ಚಿಕತ್ಸೆ ನೀಡುತ್ತಿದ್ದಾರೆ.

ಗೋಕರ್ಣ(ಮಾ.08): ಪ್ರವಾಸಿ ವಾಹನ ಬಡಿದು ತೀವ್ರ ಗಾಯಗೊಂಡ ಬೀದಿನಾಯಿಗೆ ವಿದೇಶಿ ಮಹಿಳೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇಲ್ಲಿನ ವೆಂಕಟರಮಣ ದೇವಾಲಯದ ಎದುರಿನ ರಥ ಬೀದಿ ರಸ್ತೆಯ ಅಂಚಿನಲ್ಲಿ ಮಲಗಿದ್ದ ಬೀದಿ ನಾಯಿಗೆ ಬೆಂಗಳೂರು ಮೂಲದ ಪ್ರವಾಸಿ ವಾಹನ ಬಡಿದಿತ್ತು. ತೀವ್ರ ಗಾಯಗೊಂಡ ನಾಯಿ ನರಳುತಿದ್ದನ್ನು ಕಂಡ ವಿದೇಶಿ ಮಹಿಳೆ ಔಷಧ ತಂದು ಉಪಚರಿಸಿ, ತಿಂಡಿ, ನೀರು ನೀಡಿ, ಪಕ್ಕದಲ್ಲಿ ಮಲಗಿಸಿ ಸುತ್ತಲು ಕಲ್ಲು ಹಾಕಿ ಯಾರು ಹಾಯದಂತೆ ಮಾಡಿದ್ದು ನಿತ್ಯ ಚಿಕತ್ಸೆ ನೀಡುತ್ತಿದ್ದಾರೆ.

ಬಿಜೆಪಿಗರು 'ಆಪರೇಷನ್‌'ನಲ್ಲಿ ನಿಸ್ಸೀಮರು: ಸಿಎಂ ಸಿದ್ದರಾಮಯ್ಯ

ಪ್ರಾಣಿ ಪ್ರಿಯ ಸುಜಯ ಶೆಟ್ಟಿ ಸಹ ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ. ಇವರ ಜತೆ ಹಲವು ವಿದೇಶಿ ಪ್ರವಾಸಿಗರು ಸಹಕರಿಸುತ್ತಿದ್ದು, ಮೂಕ ಪ್ರಾಣಿಯ ಜೀವ ಉಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ.