ಮಸ್ಕತ್‌(ಡಿ.12): ಉಡುಪಿಯ ಪುತ್ತಿಗೆ ಮಠದ 1008 ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳಿಗೆ ಒಮಾನ್‌ನ ರಾಜಧಾನಿಯಲ್ಲಿ ಶೇಖ್‌ ಕನಾಕ್ಸಿ ಖಿಮ್ಜಿ ಅವರ ಕುಟುಂಬವು ಪಾದಪೂಜೆ ನೆರವೇರಿಸಿತು.

ಇತ್ತೀಚೆಗೆ ಪುತ್ತಿಗೆ ಶ್ರೀಗಳು ಒಮಾನ್‌ಗೆ ಆಗಮಿಸಿದ್ದಾಗ ಮಸ್ಕಟ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ ಕನಾಕ್ಸಿ ಖಿಮ್ಜಿ ಅವರು ಪಾದಪೂಜೆ ನೆರವೇರಿಸಿದ್ದಾರೆ. ಇದೇ ವೇಳೆ ಶ್ರೀಗಳು ಕನಾಕ್ಸಿ ಅವರನ್ನು ತಮ್ಮ ಪರ್ಯಾಯದ ವೇಳೆ ಉಡುಪಿಗೆ ಆಗಮಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುವಂತೆ ಆಹ್ವಾನಿಸಿದ್ದಾರೆ.

ಮಲ್ಪೆಯಲ್ಲಿ ಬೀದಿ ನಾಯಿಗಳ ರ್‍ಯಾಂಪ್‌ ವಾಕ್, ಶ್ವಾನ ನಡೆಯುವ ಚಂದ ನೋಡಿ

ಒಮಾನ್‌ನ ಓಂಕಾರ ಸಮಿತಿಯು ಪುತ್ತಿಗೆ ಶ್ರೀಗಳನ್ನು ಶಾಂತಿಯ ಸಂದೇಶ ಸಾರಲು ಹಾಗೂ ಕೃಷ್ಣಭಕ್ತಿಯ ಬಗ್ಗೆ ಪ್ರವಚನ ನೀಡಲು ದೇಶಕ್ಕೆ ಆಹ್ವಾನಿಸಿತ್ತು. ಈ ವೇಳೆ ಅವರು ಭಾರತದ ರಾಯಭಾರಿ ಮುನು ಮುಹಾವರ್‌ ಅವರನ್ನೂ ಭೇಟಿ ಮಾಡಿದರು.

ಕನಾಕ್ಸಿ ಖಿಮ್‌ಜಿ ಅವರು ಗುಜರಾತ್‌ ಮೂಲದವರಾಗಿದ್ದು, ಒಮಾನ್‌ನ ಹಿಂದು ಸಮುದಾಯದ ಅತ್ಯಂತ ಪ್ರಭಾವಿ ಮುಖಂಡರಾಗಿದ್ದಾರೆ. ಇಲ್ಲಿನ ರಾಜವಂಶಸ್ಥರಿಂದ ‘ಶೇಖ್‌’ ಬಿರುದು ಪಡೆದ ಏಕೈಕ ಹಿಂದು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಇವರು, 150 ವರ್ಷಗಳ ಹಿಂದೆ ಒಮಾನ್‌ನಲ್ಲಿ ಸ್ಥಾಪನೆಯಾದ ಖಿಮ್ಜಿ ರಾಮದಾಸ್‌ ಕಂಪನಿಗಳ ಸಮೂಹದ ಮಾಲಿಕರಾಗಿದ್ದಾರೆ. ಒಮಾನ್‌ನ ಸುಲ್ತಾನರಿಗೇ ಸಾಲ ನೀಡಿದ ಏಕೈಕ ಹಿಂದು ಎಂಬ ಹಿರಿಮೆಯೂ ಇವರಿಗಿದೆ.

'ಕಣ್ಣೀರು ಹಾಕಿದ್ರೆ ಗೆಲುವು ಸಿಗಲ್ಲ', ರಿಸಲ್ಟ್‌ ಬಗ್ಗೆ ಕೋಟ ಮಾತು