Asianet Suvarna News Asianet Suvarna News

ಕನ್ನಡ ಸಾಹಿತ್ಯದಲ್ಲಿ ಜನಪದ ಸಂಸ್ಕೃತಿ, ಕಲೆ ತಾಯಿ ಬೇರು: ಶ್ರೀ

ಬುಡಕಟ್ಟು ಸಂಪ್ರದಾಯದ ಪರಂಪರೆಯಲ್ಲಿರುವ ದೈವಶಕ್ತಿ, ಬೇರೊಂದು ಪರಂಪರೆಯಲ್ಲಿ ಕಂಡುಬರುವುದಿಲ್ಲ. ಕನ್ನಡ ಸಾಹಿತ್ಯದಲ್ಲಿ ಜನಪದ ಸಂಸ್ಕೃತಿ ಮತ್ತು ಕಲೆ ತಾಯಿ ಬೇರು ಎಂದು ವನಕಲ್ಲು ಮಠದ ಪೀಠಾಧ್ಯಕ್ಷರಾದ ಬಸವ ರಮಾನಂದ ಸ್ವಾಮೀಜಿ ಹೇಳಿದರು.

Folk Culture, Art Mother Root in Kannada Literature snr
Author
First Published Nov 22, 2023, 8:02 AM IST

  ಶಿರಾ: ಬುಡಕಟ್ಟು ಸಂಪ್ರದಾಯದ ಪರಂಪರೆಯಲ್ಲಿರುವ ದೈವಶಕ್ತಿ, ಬೇರೊಂದು ಪರಂಪರೆಯಲ್ಲಿ ಕಂಡುಬರುವುದಿಲ್ಲ. ಕನ್ನಡ ಸಾಹಿತ್ಯದಲ್ಲಿ ಜನಪದ ಸಂಸ್ಕೃತಿ ಮತ್ತು ಕಲೆ ತಾಯಿ ಬೇರು ಎಂದು ವನಕಲ್ಲು ಮಠದ ಪೀಠಾಧ್ಯಕ್ಷರಾದ ಬಸವ ರಮಾನಂದ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಕಳುವರಹಳ್ಳಿ ಶ್ರೀ ಕ್ಷೇತ್ರದ ಐತಿಹಾಸಿಕ ಪ್ರಸಿದ್ಧ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಜುಂಜಪ್ಪ ಸ್ವಾಮಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಕಾಡುಗೊಲ್ಲರ ಆರಾಧ್ಯ ದೈವ ಜನಪದ ಸಾಂಸ್ಕೃತಿಕ ಲೋಕದ ಜುಂಜಪ್ಪ ದೇವರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಿ ಅಭಿವೃದ್ಧಿಪಡಿಸಿ ಕಾಯಕಲ್ಪ ಕಲ್ಪಿಸಬೇಕು. ಲಕ್ಷಾಂತರ ಭಕ್ತರ ಆರಾಧ್ಯ ದೈವ ಜುಂಜಪ್ಪನ ಕ್ಷೇತ್ರದ ಪ್ರಗತಿಗೆ ಎಲ್ಲರೂ ಒಗ್ಗೂಡಿ ಜುಂಜಪ್ಪ ದೇವರ ಕ್ಷೇತ್ರ ಅಭಿವೃದ್ಧಿ ಟ್ರಸ್ಟ್ ಸ್ಥಾಪನೆ ಮಾಡಿ ಸರ್ಕಾರದ ಅನುದಾನ ಪಡೆದು ಅಭಿವೃದ್ಧಿ ಮಾಡಿ ರಾಜ್ಯದಲ್ಲಿಯೇ ಜುಂಜಪ್ಪನ ಕ್ಷೇತ್ರ ಮಾದರಿಯಾಗುವಂತೆ ಮಾಡಬೇಕು ಎಂದರು.

ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಿ ಮಾತನಾಡಿದ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪ ದೇವರ ಕ್ಷೇತ್ರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಸರ್ಕಾರ ಜನಪದ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಜುಂಜಪ್ಪ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸೋರೆಕುಂಟೆ ಸತ್ಯನಾರಾಯಣ, ಡಿಎಂಪಿ ಕರಿಯಪ್ಪ, ಶಿರಾ ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಈಶ್ವರಪ್ಪ, ಕಾರ್ಯದರ್ಶಿ ಚಂದ್ರಪ್ಪ, ಗುಮ್ಮನಳ್ಳಿ ಈರಣ್ಣ, ದೊಡ್ಡಬಾಣಗೆರೆ ರಾಜಣ್ಣ, ಕುಂಟನಹಟ್ಟಿ ಕರಿಯಪ್ಪ, ಶ್ರೀನಿವಾಸ ಬಾಬು, ಕಲಾವಿದ, ಗಾಯಕ ಮೋಹನ್ ಕುಮಾರ್, ಗಿರೀಶ್, ಸಿದ್ದಾಪುರ ಶ್ರೀನಿವಾಸ್, ಚಂಗಾವರ ರಾಮಕೃಷ್ಣ, ಗೌಡಪ್ಪ, ವಕೀಲ ಸಿದ್ದಪ್ಪ, ಕುಂಬಾರಹಳ್ಳಿ ಈರಣ್ಣ, ರಾಮಮೂರ್ತಿ, ಚಿಕ್ಕಣ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು.

ಜನಮನದಲ್ಲಿ ಬದಲಾವಣೆ ಅಗತ್ಯ

ನವದೆಹಲಿ (ಜಿಪಿ ರಾಜರತ್ನಂ ವೇದಿಕೆ) (ನ.16): ಕನ್ನಡ ಬೆಳೆಯಬೇಕಾದರೆ ಮನೆ ಮನೆಯಲ್ಲಿ, ಜನಮನದಲ್ಲಿ ವ್ಯಾಪಕವಾದ ಮತ್ತು ಸ್ಥಾಯಿಯಾದ ಬದಲಾವಣೆ ಆಗಬೇಕು ಎಂದು ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ದೆಹಲಿಯ ಕುಮಾರಿ ಸುದೀತಿ ಅಂಬಳೆ ತಿಳಿಸಿದರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ದೆಹಲಿ ಘಟಕದ ಆಶ್ರಯದಲ್ಲಿ ದೆಹಲಿಯ ಸತ್ಯಸಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ ಈ ಜವಾಬ್ದಾರಿಯು ಸಮಾಜದ ಪ್ರತಿಯೊಬ್ಬರದ್ದಾಗಬೇಕು ಎಂದರು .

ಇಂದು ನಾವು ಪಣ ತೊಟ್ಟು ಜನಾಂದೋಲನ ಮಾಡಿದ್ದೇ ಆದರೆ ಆ ಒಕ್ಕೊರಲಿನ ಧ್ವನಿಯು  ಪರಿಣಾಮಕಾರಿಯಾಗಲಿದೆ.  ಕಲಿಕೆ ಎನ್ನುವುದು ಕಲಿಸುವವರ ಮತ್ತು ಕಲಿಯುವವರ ಆಸಕ್ತಿಯನ್ನು ಅವಲಂಬಿಸಿದ್ದು ಈ ಆಸಕ್ತಿಯನ್ನು ಮಕ್ಕಳಲ್ಲಿ ಮೂಡಿಸುವುದು ಹೇಗೆ ಎನ್ನುವುದೇ ಹೊರನಾಡ ಕನ್ನಡಿಗರ ಮುಂದಿರುವ ಸವಾಲಾಗಿದೆ. ಇದರಲ್ಲಿ ಪೋಷಕರ ಪಾತ್ರವೇ ಮುಖ್ಯವೆಂದರು. ಕನ್ನಡ ಮೊದಲು ಮನೆಯ ಮಾತಾಗಬೇಕು. ಹೊರನಾಡ ಕನ್ನಡದ ಮಕ್ಕಳಿಗೆ ಕನ್ನಡದ ಪುಸ್ತಕವನ್ನು ಓದಿ ಎಂದು ಒಮ್ಮೆಗೆ ಹೇಳಿದರೆ ಅದು ಹತ್ತಲಾಗದ ಬೆಟ್ಟದಂತೆ ಕಾಣುತ್ತದೆ . ಈ ಸಮಸ್ಯೆಗೆ ಪರಿಹಾರ ಖಂಡಿತ ಇದೆ. 

ಇನ್ನೆಂದೂ ಇಂಥ ಘಟನೆ ಆಗದಂತೆ ನೋಡಿಕೊಳ್ಳುವೆ: ಪೊಲೀಸ್ ವಿಚಾರಣೆ ವೇಳೆ ನಟ ದರ್ಶನ್ ಮಾತು

ಕನ್ನಡ ಓದಲು ತೊಂದರೆ ಇರಬಹುದು, ಆದರೆ ಅನುಭವಿಸಲು ಏನು ತೊಂದರೆ ಇಲ್ಲವಲ್ಲ; ಕಥೆ, ಪದ್ಯ ,ಭಾವಗೀತೆ, ಜನಪದ ಗೀತೆ , ಹಾಸ್ಯ ಸಂಜೆ, ನಾಟಕಗಳು ಕನ್ನಡದ ಜ್ಞಾನ ಭಂಡಾರ ಮತ್ತು ಸೊಬಗನ್ನು ಹಂಚುತ್ತವೆ.  ಇವೆಲ್ಲವನ್ನೂ ಅನುಭವಿಸುವ ಅವಕಾಶ ಒದಗಿಸಬೇಕು. ಪುಸ್ತಕ ಓದಲಾಗದಿದ್ದರೆ ಏನಂತೆ? ಕನ್ನಡ ಪ್ರಕಾಶಕರು ಮಕ್ಕಳ ಸಂಬಂಧಿತ ಆಡಿಯೋ ಪುಸ್ತಕಗಳನ್ನು ಹೊರ ತರಬೇಕೆಂದರು.ಕನ್ನಡ ಎಂದರೆ ಸಂತೋಷ ಮತ್ತು ಆನಂದದ ಅನುಭವ ಎನಿಸುತ್ತದೆ .ಈ ಹಂತದಲ್ಲಿ ಸ್ವಯಂ ಪ್ರೇರಣೆಯಿಂದ ಕನ್ನಡ ಕಲಿಯಲು ,ಕಲಿಸಲು ಬಳಸಲು , ಬೆಳೆಸಲು ಮಕ್ಕಳೇ ಮುಂದಾಗುತ್ತಾರೆ. 

ಸರಕಾರ , ಸಮಾಜ , ಕನ್ನಡ ಪರ ಸಂಘಟನೆಗಳು, ಉದ್ಯಮಿಗಳು ಒಂದುಗೂಡಿ ನವಯುಗದ ಮಾಧ್ಯಮಗಳಲ್ಲಿ ಕೆಲಸ ಮಾಡುವ ಅಗತ್ಯವಿದೆ. ಮುಂದೊಂದು ದಿನ ತಾಯಿ ಭುವನೇಶ್ವರಿಗೆ ಜ್ಞಾನಪೀಠ ಪ್ರಶಸ್ತಿಯ ಕಿರೀಟ ಹಾಕಿಸುವ ಕುಡಿ ಹೊರನಾಡ ಕನ್ನಡಿಗರಲ್ಲಿ ಹುಟ್ಟಲೆಂದರು. ತಾಯಿ ಭುವನೇಶ್ವರಿಯ ಸೇವೆ ಮಾಡಲು ನಾವು ಕರ್ನಾಟಕದಲ್ಲಿ ಇರಬೇಕಿಲ್ಲ. ನಮ್ಮಲ್ಲಿ ಕರ್ನಾಟಕ ಇರಬೇಕು. ನಾವೇ ಕನ್ನಡದ, ಕರ್ನಾಟಕದ ರಾಯಭಾರಿಗಳಾಗಬೇಕು. ಕನ್ನಡ ಸಂಸ್ಕೃತಿ, ಭಾಷೆ, ಸಾಹಿತ್ಯ ಕರ್ನಾಟಕದ ಗಡಿಗಷ್ಟೇ ಸೀಮಿತಗೊಳಿಸಬಾರದು, ಹೊರನಾಡಿಗೂ ಹರಡುವ ಸುವರ್ಣ ಅವಕಾಶ ನಮಗಿದೆ ಎಂದರು.

ವಿನಂತಿ:  ಭಾರತದ ಎಲ್ಲೆಡೆ ಕನ್ನಡದ ಮಕ್ಕಳಲ್ಲಿ ಕಲೆ, ಸಂಸ್ಕೃತಿಯನ್ನು ಬಿತ್ತುವ ಪ್ರಯತ್ನ ಮಾಡುತ್ತಿರುವ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪವಿತ್ರ ಯಜ್ಞ ಕಾರ್ಯಕ್ಕೆ ಕರ್ನಾಟಕ ರಾಜ್ಯ ಸರಕಾರವು ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಹಾಗೂ ಕನ್ನಡಪರ ಕಾನೂನುಗಳನ್ನು ಸಕ್ರಿಯಗೊಳಿಸಬೇಕೆಂದು ವಿನಂತಿಸಿದರು. 

Follow Us:
Download App:
  • android
  • ios