ಇಂದಿನ ಜೀವನಶೈಲಿಯಿಂದ ಆರೋಗ್ಯದಲ್ಲಿ ಏರುಪೇರು
ಈಗಿನ ಜೀವನ ಶೈಲಿ ಮತ್ತು ಅದರಿಂದ ಉಂಟಾಗುವ ಆರೋಗ್ಯದಲ್ಲಿನ ಏರುಪೇರು ಕೊನೆಗೆ ನೋವು ಮತ್ತು ಉರಿಯೂತಗಳಲ್ಲಿ ಕೊನೆಗೊಳ್ಳುತ್ತವೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದರು.
ಮೈಸೂರು : ಈಗಿನ ಜೀವನ ಶೈಲಿ ಮತ್ತು ಅದರಿಂದ ಉಂಟಾಗುವ ಆರೋಗ್ಯದಲ್ಲಿನ ಏರುಪೇರು ಕೊನೆಗೆ ನೋವು ಮತ್ತು ಉರಿಯೂತಗಳಲ್ಲಿ ಕೊನೆಗೊಳ್ಳುತ್ತವೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದರು.
ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಸಭಾ ಭವನದಲ್ಲಿ ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಯೋಜಿಸಿದ್ದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತಿ ಮಹೋತ್ಸವ ಹಾಗೂ ರೋಗನಿದಾನ ಸ್ನಾತಕೋತ್ತರ ವಿಭಾಗವು ಆಯೋಜಿಸಿದ್ದ ರಾಷ್ಟ್ರಮಟ್ಟದ ತ್ರಿಶೂಲ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜೇಂದ್ರ ಶ್ರೀಗಳ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದು ಹೇಳಿದರು.
ಸಾಹಿತಿ, ವಿಮರ್ಶಕ ಡಾ.ಎಂ.ಎನ್. ನಂದೀಶ್ ಹಂಚೆ ಮಾತನಾಡಿ, ರಾಜೇಂದ್ರ ಶ್ರೀಗಳ ತ್ಯಾಗಮಯ ಜೀವನ, ನಿಸ್ವಾರ್ಥ, ಅಕ್ಷರ ದಾಸೋಹದ ಬಗೆಗಿನ ತುಡಿತ, ಜಾತ್ಯಾತೀತ ಮಾನವತೆಯ ಸ್ವರೂಪವನ್ನು ವಿವರಿಸಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಜೆಎಸ್ಎಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಬೇಸ್ವರ್ ಕರ್, ತ್ರಿಶೂಲ ವಿಚಾರಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಎಂ. ಸುಭಾಷ್ ಚಂದ್ರ ಬೋಸ್ ಇದ್ದರು. ಅಮಲಾ ಸುನೀಲ್ ಹಾಗೂ ಮೈತ್ರಿ ಜೋಶಿ ಪ್ರಾರ್ಥಿಸಿದರು. ಡಾ. ಮಧುಸೂದನ್ ವಂದಿಸಿದರು. ಡಾ.ಪಿ.ಪಿ. ಅಯ್ಯಣ್ಣ ನಿರೂಪಿಸಿದರು.
ಸಮಾರೋಪ
ಈ ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 5 ಸಂಪನ್ಮೂಲ ವ್ಯಕ್ತಿಗಳು ನೋವು ಮತ್ತು ಉರಿಯೂತದ ಬಗ್ಗೆ ಸವಿಸ್ತಾರವಾಗಿ ವಿಷಯ ಮಂಡಿಸಿದರು. ಸಮಾರೋಪ ಸಮಾರಂಭದಲ್ಲಿ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪ್ರವೀಣ್ ಬಿ. ಕುಲಕರ್ಣಿ ಪಾಲ್ಗೊಂಡಿದ್ದರು. 230 ಹೆಚ್ಚು ವೈಜ್ಞಾನಿಕ ವಿಷಯಗಳ ಬಗ್ಗೆ ವರದಿ ಪ್ರಸ್ತುತಪಡಿಸಿದ ಸ್ನಾತಕ, ಸ್ನಾತಕೋತ್ತರ ಮತ್ತು ಸಿಬ್ಬಂದಿಗೆ 50 ಹೆಚ್ಚೂ ಪ್ರಶಸ್ತಿಗಳನ್ನು ವಿತರಿಸಲಾಯಿತು.
150 ವರ್ಷ ಬದುಕೋ ಸಮುದಾಯವಿದೆ
ಅದು 1984ನೇ ಇಸವಿ. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ತಲೆಬಿಸಿ ಮಾಡಿಕೊಂಡು ಓಡಾಡುತ್ತಿದ್ದರು. ಅಬ್ದುಲ್ ಮೊಬಾಟ್ ಅನ್ನೋ ಪ್ರಯಾಣಿಕ ಅವರಿಗೆ ತಲೆನೋವಾಗಿದ್ದ. ಇದಕ್ಕೆ ಕಾರಣ ಅವನ ವಯಸ್ಸು. ಅದೆಷ್ಟು ಅಂತೀರಿ, ತೊಂಭತ್ತು, ನೂರಾದರೂ ಕೊಂಚ ಪರಿಶೀಲಿಸಿ ಮುಂದೆ ಬಿಡಬಹುದೇನೋ, ಆದರೆ ಆತನ ವಯಸ್ಸು ಬರೋಬ್ಬರಿ 152 ವರ್ಷಗಳು ಅಂತ ತಪಾಸಣೆಯ ಸಮಯದಲ್ಲಿ ಕಂಡುಬಂತು. ಅಬ್ದುಲ್ ಮೊಬಾಟ್ ಎಂಬ ಪ್ರಯಾಣಿಕ 1832 ರಲ್ಲಿ ಜನಿಸಿರುವುದನ್ನು ಅಧಿಕಾರಿಗಳು ಕಂಡುಕೊಂಡರು. ಮೊದಲಿಗೆ ಇದು ತಾಂತ್ರಿಕ ದೋಷ ಎಂದು ಅವರು ಭಾವಿಸಿದ್ದರು. ಆತನನ್ನು ನಿಲ್ಲಿಸಿಕೊಂಡು ಸಂಪೂರ್ಣ ತನಿಖೆ ನಡೆಸಿದಾಗ ನಿಜಕ್ಕೂ ಆ ಅಬ್ದುಲ್ ಮೊಬಾಟ್ ಅವರ ವಯಸ್ಸು 152 ವರ್ಷಗಳು ಎಂದು ತಿಳಿದುಬಂತು. ಇದು ಅಲ್ಲಿದ್ದ ಅಧಿಕಾರಿಗಳಿಂದ ಹಿಡಿದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಮಾಹಿತಿ ಕೆದಕುತ್ತಾ ಹೋದಾಗ ತಿಳಿದು ಬಂದ ಮತ್ತೊಂದು ಅಚ್ಚರಿಯ ಸಂಗತಿ ಅಂದರೆ ಈ ಅಬ್ದುಲ್ ಪಾಕಿಸ್ತಾನದ ಹುಂಜಾ ಸಮುದಾಯಕ್ಕೆ ಸೇರಿದವರಾಗಿದ್ದರು.
ಆಮೇಲೆ ನೋಡಿದರೆ ಆ ಸಮುದಾಯದಲ್ಲಿ (Community) ಇಷ್ಟು ಸುದೀರ್ಘ ವರ್ಷ ಬದುಕೋದು ಬಹಳ ಕಾಮನ್ ಆಗಿತ್ತು. 150 ವರ್ಷಗಳ ಕಾಲ ಬದುಕುವ ಹುಂಜಾ ಸಮುದಾಯದ ಜನರ ದೊಡ್ಡ ರಹಸ್ಯವೆಂದರೆ, ಈ ಜನರು ಯಾವುದೇ ಗಂಭೀರ ಕಾಯಿಲೆಯಿಂದ (Disease) ಬಳಲುವುದಿಲ್ಲ. ವೃದ್ಧಾಪ್ಯವು ಅವರನ್ನೂ ಕಾಡುವುದಿಲ್ಲ. ಇದಲ್ಲದೆ, ಈ ಸಮುದಾಯದ ಮಹಿಳೆಯರು (Woman) ತುಂಬಾ ಸುಂದರವಾಗಿರುತ್ತಾರೆ.
ಸೋಮಾರಿ ಫಿಟ್‌ನೆಸ್ ಫ್ರೀಕ್, ಟ್ರೆಡ್‌ಮಿಲ್‌ನಲ್ಲಿ ಕುಳಿತು ಸ್ನ್ಯಾಕ್ಸ್ ಮೆಲ್ಲುತ್ತಿರುವ ಭೂಪ!
ಇಂದಿನ ಕಾಲದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಜೀವಿತಾವಧಿ 70 ವರ್ಷಗಳು. ಆದರೆ ಪಾಕಿಸ್ತಾನದಲ್ಲಿರುವ ಹುಂಝಾ ಎಂಬ ಸಮುದಾಯದ ಜನರು 120 ರಿಂದ 150 ವರ್ಷಗಳ ಕಾಲ ಬದುಕುತ್ತಾರೆ. ನಮ್ಮಲ್ಲೆಲ್ಲ ನಲವತ್ತೈದಕ್ಕೆಲ್ಲ ಯೌವನ ಕಳೆದುಕೊಂಡವರಂತೆ ಹ್ಯಾಪು ಮೋರೆ ಹಾಕಿಕೊಂಡಿರೋರೆ ಬಹಳ ಮಂದಿ. ಆದರೆ ಈ ಸಮುದಾಯದ ಜನರು ಹಾಗಲ್ಲ. ಅವರು 70 ವರ್ಷಗಳವರೆಗೆ ತುಂಬ ತಾರುಣ್ಯವಂತರಾಗಿ ಕಾಣುತ್ತಾರೆ, ಇನ್ನೊಂದು ಅಚ್ಚರಿಯ ಸಂಗತಿ ಅಂದರೆ ಈ ಸಮುದಾಯದ ಮಹಿಳೆಯರು 65 ವರ್ಷ ವಯಸ್ಸಿನಲ್ಲೂ ಮಕ್ಕಳಿಗೆ ಜನ್ಮ ನೀಡುತ್ತಾರೆ. ಸಾಮಾನ್ಯ ಮನುಷ್ಯರಿಗೆ ಹೋಲಿಸಿದರೆ ದೀರ್ಘಕಾಲದವರೆಗೆ ಯವ್ವನಿಗರಾಗಿರುತ್ತಾರೆ. ಇದಕ್ಕೆಲ್ಲ ಕಾರಣ ಅವರ ಜೀವನ ಪದ್ಧತಿ.