Asianet Suvarna News Asianet Suvarna News

ದೀಪಾವಳಿ ಹಬ್ಬದ ಹೊಸ್ತಿನಲ್ಲಿ ರೈತರಿಗೆ ಆಘಾತ: ಬೆಳಕಿನ ಹಬ್ಬಕ್ಕೆ 'ಗಗನ ಕುಸುಮ'ವಾದ ಸೇವಂತಿಗೆ..!

ನಿರಂತರ ಮಳೆಯಿಂದಾಗಿ ಸೇವಂತಿಗೆ ಗಿಡಗಳು‌ ಕೊಳೆತು ಹೋಗಿವೆ. ಕೆಲವೆಡೆ ಹೂವು ಬಂದಿದ್ರೂ, ತೇವಾಂಶ ಹೆಚ್ಚಿರೋದ್ರಿಂದ ಬೇಡಿಕೆ ಇಲ್ಲದಂತಾಗುವ ಸಾಧ್ಯತೆ ಇದೆ.

Flower Crop Damage Due to Rain in Gadag grg
Author
First Published Oct 20, 2022, 10:00 PM IST | Last Updated Oct 20, 2022, 11:02 PM IST

ಗದಗ(ಅ.20):  ತಾಲೂಕಿನ ಲಕ್ಕುಂಡಿ ಸೇರಿದಂತೆ ಸುತ್ತಲ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆದಿದ್ದ ನೂರಾರು ಎಕರೆ ಸೇವಂತಿಗೆ ಹೂ ತೇವಾಂಶದಿಂದ ಕೊಳೆತು ಹೋಗಿದೆ. ಅಳಿದುಳಿದ ಹೂವುಗಳಿಗೆ ಬೇಡಿಕೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ.  ಲಕ್ಕುಂಡಿ, ಅಡವಿ ಸೋಮಾಪುರ, ಕಣವಿ, ಹೊಸೂರು ಗ್ರಾಮದ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಈ ಬಾರಿ ಸೇವಂತಿಗೆ ಬೆಳೆಯಲಾಗಿತ್ತು. ದೀಪಾವಳಿ ಹಬ್ಬದ ಸಮಯಕ್ಕೆ ಹೂವು ಕೈಸೇರಿದ್ರೆ ಭರ್ಜರಿ ವ್ಯಾಪಾರ ಫಿಕ್ಸ್ ಅಂತಾ ರೈತ್ರು ಅನ್ಕೊಂಡಿದ್ರು. ಆದ್ರೆ ನಿರಂತರ ಮಳೆಯಿಂದಾಗಿ ಸೇವಂತಿಗೆ ಗಿಡಗಳು‌ ಕೊಳೆತು ಹೋಗಿವೆ. ಕೆಲವೆಡೆ ಹೂವು ಬಂದಿದ್ರೂ, ತೇವಾಂಶ ಹೆಚ್ಚಿರೋದ್ರಿಂದ ಬೇಡಿಕೆ ಇಲ್ಲದಂತಾಗುವ ಸಾಧ್ಯತೆ ಇದೆ.. 

ತೇವಾಂಶ ಹೆಚ್ಚಾಗಿ ಬೆಳೆ ಕುಂಠಿತ 

ಸುಗಂಧರಾಜ, ಕನಕಾಂಬರ, ಸೇವಂತಿಗೆ ಹೂವುಗಳಿಗೆ ಹಬ್ಬ ಹರಿದಿನಗಳಲ್ಲಿ ಭರ್ಜರಿ ಬೇಡಿಕೆ ಇರುತ್ತೆ. ಕೆಜಿ ಸೇವಂತಿಗೆ 200 ರಿಂದ 250 ರೂಪಾಯಿಗೆ ಮಾರಾಟ ಆಗ್ತಿತ್ತು. ಆದ್ರೆ ಈ ಬಾರಿ ಮಳೆಯಿಂದಾಗಿ ಹೂವು ತೇವಗೊಂಡಿರೋದ್ರಿಂದ ರೇಟ್ ಬೀಳುವ ಸಾಧ್ಯತೆ ಇದೆ. ಕೆಜಿಗೆ 30/40 ರೂಪಾಯಿಗೆ ಕೇಳಿದ್ರೂ ಅಚ್ಚರಿ ಇಲ್ಲ ಅಂತಾರೆ ಲಕ್ಕುಂಡಿಯ ಹೂ ಬೆಳೆಗಾರ ಮರಿಯಪ್ಪ. 

ಹೆಸರು ಖರೀದಿ ವಿಳಂಬ: ತಹಸೀಲ್ದಾರ್‌ ಕಚೇರಿಗೆ ರೈತರ ಮುತ್ತಿಗೆ

ಗದಗ ಜಿಲ್ಲೆಯ ಲಕ್ಕುಂಡಿ ಹೂವಿನ ಬೆಳೆಗೆ ಹೆಸರುವಾಸಿ. ಇಲ್ಲಿಯ ಹೂವುಗಳು ಬೆಳಗಾವಿ, ಬಾಗಲಕೋಟೆ, ಧಾರವಾಡದ ಮಾರುಕಟ್ಟೆಗೆ ಹೋಗುತ್ವೆ. ಆದ್ರೆ, ಈ ಬಾರಿ ಹೂವುಗಳ ಅಭಾವ ಇದ್ದು, ಬೇಡಿಕೆಗೆ ತಕ್ಕಂತೆ ಹೂವು ಪೂರೈಕೆ ಆಗೋದು ಸಾಧ್ಯವಾಗಲ್ಲ. ಇದೇ ಕಾರಣಕ್ಕೆ ವ್ಯಾಪಾರಸ್ಥರು ರೇಟ್ ಜಂಪ್ ಮಾಡೋಸಾಧ್ಯತೆ ಇರುತ್ತೆ.. ಈ ಬಾರಿಯ ಹಬ್ಬದಲ್ಲಿ ಹೂವುಗಳು ಗಗನ ಕುಸುಮ ಆಗೋದ್ರಲ್ಲಿ ಡೌಟೇ ಇಲ್ಲ ಅಂರಿದಾರೆ ರೈತ್ರು. 

ಇನ್ನು ಗದಗ ತಾಲೂಕು ವ್ಯಾಪ್ತಿಯ 416 ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ, ಗುಲಾಬಿ ಬೆಳೆಯಲಾಗಿದೆ. ಆದ್ರೆ ನಿರಂತರ ಮಳೆಯಿಂದಾಗಿ ಬಹುತೇಕ ಬೆಳೆ ನೆಲ ಕಚ್ಚಿದೆ. ಹೀಗಿದ್ರೂ ಯಾವ ಜನ ಪ್ರತಿನಿಧಿಗಳು ನಮ್ಮ ಅಹವಾಲು ಕೇಳಿಲ್ಲ ಅನ್ನೋದು ಲಕ್ಕುಂಡಿ ರೈತ ಬಸನಗೌಡ ಬಿರಾದಾರ್ ಅವರ ಆರೋಪ. 

ಎಕರೆಗೆ 1 ಲಕ್ಷ ರೂ. ಖರ್ಚು ಮಾಡಿ ಹೂವು ಬೆಳೆಯಲಾಗಿದೆ. 4/5 ತಿಂಗಳು ಮಗುವಿನಂತೆ  ಬೆಳೆಸಿದ್ದ ಗಿಡಗಳು ಜವಳು ಹಿಡಿದಿವೆ. ಮಳೆರಾಯ ಹೂ ಬೆಳೆಗಾರರನ್ನ ಸಂಕಷ್ಟಕ್ಕೆ ತಳ್ಳಿದ್ದಾನೆ. ಈಗ್ಲಾದ್ರೂ ಜನ ಪ್ರತಿನಿಧಿಗಳು ಇತ್ತಗಮನ ಹರಿಸಿ ಹೂ ಬೆಳೆಗಾರರ ಸಂಕಷ್ಟ ಆಲಿಸಬೇಕು. ನಷ್ಟ ಹೊಂದಿದ ರೈತರಿಗೆ ಪರಿಹಾರ ವದಗಿಸಬೇಕು. 
 

Latest Videos
Follow Us:
Download App:
  • android
  • ios