ದಾವಣಗೆರೆ [ಡಿ.21]: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೊಠಡಿಯಲ್ಲಿಯೇ ಇದ್ದ ನೆರೆ ಪರಿಹಾರ ಸಾಮಾಗ್ರಿಗಳನ್ನು ಇದೀಗ ಸಂತ್ರಸ್ತರಿಗೆ ರವಾನಿಸಲಾಗಿದೆ. 

ದಾವಣಗೆರೆ ಎಸಿ ಮಮತಾ ಹೊಸಗೌಡ್ರು ನೇತೃತ್ವದಲ್ಲಿ ಧಾರವಾಡ ಜಿಲ್ಲೆ ನವಲಗುಂದಕ್ಕೆ ಆಹಾರ ಸಾಮಾಗ್ರಿಗಳನ್ನು ರವಾನೆ ಮಾಡಲಾಗಿದೆ.

ರಾಜ್ಯದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ತೀವ್ರ ಪ್ರವಾಹ  ಸಂದರ್ಭದಲ್ಲಿ ಸಾಕಷ್ಟು ನೆರೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಲಾಗಿದ್ದು, ಈ ಸಾಮಾಗ್ರಿಗಳೆಲ್ಲಾ ಶಾಸಕರ ಕಚೇರಿಯಲ್ಲೇ ಉಳಿದಿದ್ದವು. ಇದೀಗ 340ಕ್ಕೂ ಹೆಚ್ಚು ಚೀಲ ಅಕ್ಕಿ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ನವಲಗುಂದ ಸಂತ್ರಸ್ತರಿಗೆ ರವಾನೆ ಮಾಡಲಾಗಿದೆ. 

ರೇಣುಕಾಚಾರ್ಯ ಪರ ಮತ್ತೊಬ್ಬ ಪ್ರಭಾವಿ ಬ್ಯಾಟಿಂಗ್, ಯಾಕ್ ಬೇಕು ಡಿಸಿಎಂ?...

ಒಂದು ವಾರದಲ್ಲಿ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲಾಗುವುದು ಎಂದು ರೇಣುಕಾಚಾರ್ಯ ಹೇಳಿದ್ದರು. ಅದರಂತೆ ಕ್ರಮ ಕೈಗೊಳ್ಳಲಾಗಿದ್ದು, ಸಂಗ್ರಹವಾದ ಹಣವನ್ನು ಸಿಎಂ ಪರಿಹಾರ ನಿಧಿಗೆ ತಲುಪಿಸಲು ನಿರ್ಧಾರಿಸಲಾಗಿದೆ. 

ಇಲ್ಲಿ ಒಟ್ಟು 47 ಲಕ್ಷ ರು. ಸಂಗ್ರಹವಾಗಿದ್ದು, ಇದರೊಂದಿಗೆ ಇನ್ನೂ ಮೂರು ಲಕ್ಷ ಸೇರಿಸಿ  ಸಿಎಂ ಪರಿಹಾರ ನಿಧಿಗೆ ನೀಡಲಾಗುತ್ತಿದೆ.