ನಾಯಿ ಕಡಿತಕ್ಕೆ ಬಾಲಕ ಬಲಿ:ಆಸ್ಪತ್ರೆಗೆ ನ್ಯಾಯಾಧೀಶರ ಬೇಟಿ ಮೃತ ಬಾಲಕನ ಪೋಷಕರಿಂದ ಮಾಹಿತಿ ಸಂಗ್ರಹ:ಆಸ್ಪತ್ರೆ ಮೂಲ ಸೌಕರ್ಯ ಪರಿಶೀಲಿಸಿದ ನ್ಯಾಯಾಧೀಶರು

ಕ್ಕಬಳ್ಳಾಪುರ (ನ.17) : ನಾಯಿ ಕಡಿತದಿಂದ ಬಾಲಕ ಮೃತಪಟ್ಟಪ್ರಕರಣಕ್ಕೆ ಸಂಬಂದಿಸಿದಂತೆ ಬುಧವಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಲಕ್ಷ್ಮೇಕಾಂತ್‌ ಜೆ.ಮಿಸ್ಕಿನ್‌ ಬೇಟಿ ನೀಡಿ ಪರಿಶೀಲಿಸಿದರು.

ಖುದ್ದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಲಕ್ಷ್ಮೇಕಾಂತ್‌ ಜೆ.ಮಿಸ್ಕಿನ್‌, ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಡೀರ್‌ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯಗಳನ್ನು ವೀಕ್ಷಿಸಿದರು. ಅಲ್ಲದೇ ಮೃತ ಬಾಲಕನ ಪೋಷಕರ ಆಹವಾಲು ಸ್ಪೀಕರಿಸಿದ ನ್ಯಾಯಾಧೀಶರು, ಆಸ್ಪತ್ರೆಯಲ್ಲಿ ವೈದ್ಯರ ಕರ್ತವ್ಯದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿದ್ದಲ್ಲದೇ ಆಸ್ಪತ್ರೆಯ ಔಷಧಿ ಉಗ್ರಾಣ ಕೊಠಡಿ, ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Chikkaballapur News: ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಾಲಕ ಸಾವು!

ಬರೀ ದಾದಿಯರು ಇದ್ದರು: ನ್ಯಾಯಾಧೀಶರು ಭೇಟಿ ನೀಡಿದ ವೇಳೆ ಆಸ್ಪತ್ರೆಯಲ್ಲಿ ಕೇವಲ ಶೂಶ್ರೂಷಕಿಯರು ಮಾತ್ರ ಇದ್ದರು. ವೈದ್ಯರು ಯಾರು ಇರಲಿಲ್ಲ. ಈ ವೇಳೆ ಮೃತ ಬಾಲಕನ ತಾಯಿ ಫಾಮೀದಾ ಮಾತನಾಡಿ, ನನಗೆ ಒಂದೇ ಗಂಡು ಮಗು. ತನ್ನ ಮಗನಿಗೆ 1ನೇ ಹಂತದ ಚುಚ್ಚು ಮದ್ದು ಕೊಟ್ಟಿದ್ದಾರೆ. ಆದರೆ ಎರಡನೇ ಹಾಗೂ ಮೂರನೇ ಹಂತದ ರೇಬಿಸ್‌ ಚುಚ್ಚು ಮದ್ದು ಕೊಟ್ಟಿದ್ದರೆ ಬದುಕುಳಿಯುತ್ತಿದ್ದ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಬಗ್ಗೆಯು ಆಕೆ ಮಾಹಿತಿ ನೀಡಿದ್ದಾಳೆ.

ಈ ವೇಳೆ ಕನ್ನಡಪ್ರಭದೊಂದಿಗೆ ಮಾತನಾಡಿದ, ನ್ಯಾ.ಲಕ್ಷ್ಮೇಕಾಂತ್‌ ಮಿಸ್ಕಿನ್‌, ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲಿಸಲಾಗಿದೆ, ಪೋಷಕರಿಂದ ಕೂಡ ಮಾಹಿತಿ ಪಡೆಯಲಾಗಿದೆ. ಆಸ್ಪತ್ರೆಯ ವೈದ್ಯರು ಕೂಡ ಯಾವುದೇ ರಜೆ ಚೀಟಿ ಕೊಡದೇ ಕಳೆದ 10 ದಿನಗಳಿಂದ ಅನಧಿಕೃತವಾಗಿ ಗೈರು ಹಾಜರಿ ಆಗಿದ್ದಾರೆ. ಆಸ್ಪತ್ರೆಯ ಲೋಪದೋಷಗಳ ಬಗ್ಗೆ ಹಾಗೂ ವೈದ್ಯರ ವಿರುದ್ದ ಶಿಸ್ತಯ ಕ್ರಮಕ್ಕೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರÜಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ನಾಯಿ ಕಚ್ಚಿದಾಗ ತಕ್ಷಣ ಕ್ರಮ ತಗೊಳ್ಳಿ, ಇಲ್ಲಾಂದ್ರೆ ರೇಬೀಸ್ ಬರೋದು ಗ್ಯಾರಂಟಿ !

ವೈದ್ಯರ ಅನಧಿಕೃತ ಗೈರು

ಹೊಸೊರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್‌.ಆರುಂದತಿ ಕಳೆದ 10 ದಿನಗಳಿಂದ ಮೇಲಾಧಿಕಾರಿಗಳ ಅನುಮತಿ ಪಡೆಯದೇ ರಜೆ ಚೀಟಿ ಕೊಡದೇ ಅನಧಿಕೃತಕವಾಗಿ ಗೈರು ಹಾಜರಿ ಆಗಿರುವುದು ನ್ಯಾಯಾಧೀಶರ ಪರಿಶೀಲನೆ ವೇಳೆ ಪತ್ತೆ ಆಗಿದೆ.