ಐದು ಜನ ಪೊಲೀಸ್‌ ಪೇದೆ ಅಮಾನತು| ಕರ್ತವ್ಯಲೋಪ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಿದ ಎಸ್‌ಪಿ| ಬಳ್ಳಾರಿ ಜಿಲ್ಲೆಯ ಸಂಡೂರಿನ ಛತ್ರಪತಿ ಶಿವಾಜಿ ವಿದ್ಯಾಮಂದಿರದಲ್ಲಿ ಆಯೋಜನೆಗೊಂಡಿದ್ದ ಗಣರಾಜ್ಯೋತ್ಸವ ಸಮಾರಂಭ| 

ಬಳ್ಳಾರಿ(ಜ.27): ಗಣರಾಜ್ಯೋತ್ಸವ ಪರೇಡ್‌ಗೆ ತಡವಾಗಿ ಬಂದ ಐದು ಜನ ಪೊಲೀಸ್‌ ಪೇದೆಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಅವರು ಆದೇಶ ಹೊರಡಿಸಿದ್ದಾರೆ.

ಸಂಡೂರು ಪೊಲೀಸ್‌ ಠಾಣೆಯ ಜಂಬುನಾಥ, ರಘುಪತಿ, ವೆಂಕಟೇಶ ನಾಯ್ಕ, ವೇಣುಗೊಪಾಲ ಹಾಗೂ ಕಾಳಿಂಗಪ್ಪ ಅಮಾನತುಗೊಂಡ ಪೊಲೀಸರು.

ಗರ್ಭಿಣಿ ಮಾಡಿ ಕೈಕೊಟ್ಟ ಪೊಲೀಸಪ್ಪ: ಮಹಿಳಾ ಎಸ್‌ಐ ದೂರು

ಸಂಡೂರಿನ ಛತ್ರಪತಿ ಶಿವಾಜಿ ವಿದ್ಯಾಮಂದಿರದಲ್ಲಿ ಗಣರಾಜ್ಯೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐವರು ಪೊಲೀಸರು ಪರೇಡ್‌ಗೆ ತಡವಾಗಿ ತೆರಳಿದ್ದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಎಸ್ಪಿ ಸೌದುಲು ಅಡಾವತ್‌ ಅವರು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಅಮಾನತುಗೊಳಿಸಿದ್ದಾರೆ.