ಧಾರವಾಡ(ನ.21): ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತೆ ತೀವ್ರಗೊಳಿಸಿದ್ದು ಶುಕ್ರವಾರ ಐವರ ವಿಚಾರಣೆ ನಡೆಸಿದೆ. 

ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ, ಹತ್ಯೆಗೆ ಬಳಸಿದ ಕಾರಿನ ಮಾಲೀಕರೆನ್ನಲಾದ ಚಂದ್ರು ಪೂಜಾರ ಅವರನ್ನು ಮೊದಲು ಸಿಬಿಐ ವಿಚಾರಣೆ ಮಾಡಿದೆ. 

ಯೋಗೀಶಗೌಡ ಕೊಲೆ ಪ್ರಕರಣ: ಮತ್ತೆ ಶುರುವಾದ ಸಿಬಿಐ ತನಿಖೆ

ನಂತರ ಯೋಗೀಶಗೌಡ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಂಜೀವ ಭಜಂತ್ರಿ ಹಾಗೂ ಮಹಾಬಳೇಶ್ವರ ಹೊಂಗಲ್‌ರನ್ನೂ ವಿಚಾರಣೆಗೊಳಪಡಿಸಿತು. ಈ ಮಧ್ಯೆ ಡಿವೈಎಸ್ಪಿ ತುಳಜಪ್ಪ ಸುಲ್ಪಿಯನ್ನೂ ಮತ್ತೆ ವಿಚಾರಣೆಗೊಳಪಡಿಸಲಾಯಿತು ಎನ್ನಲಾಗಿದೆ.