ಕೃಷಿ, ಕುಡಿಯುವ ನೀರಿಗೆ ಮೊದಲ ಆದ್ಯತೆ : ನ್ಯಾಯಾಲಯಕ್ಕೆ ಮನವರಿಕೆ ಮಾಡಿ

  ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಅವಶ್ಯಕವಾಗಿರುವ ನೀರಿನ ಬಳಕೆಯ ಮೊದಲ ಆದ್ಯತೆ ನೀಡಿ ನಂತರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಕುರಿತು ಎಲ್ಲ ಪಕ್ಷಗಳು ರಾಜಕೀಯೇತರ ನಿಲುವು ಕೈಗೊಂಡು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ ಆಗ್ರಹಿಸಿದ್ದಾರೆ.

First priority for agriculture, drinking water : Convince the court snr

  ನಂಜನಗೂಡು :  ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಅವಶ್ಯಕವಾಗಿರುವ ನೀರಿನ ಬಳಕೆಯ ಮೊದಲ ಆದ್ಯತೆ ನೀಡಿ ನಂತರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಕುರಿತು ಎಲ್ಲ ಪಕ್ಷಗಳು ರಾಜಕೀಯೇತರ ನಿಲುವು ಕೈಗೊಂಡು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಇವರು, ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹದ ಪ್ರಮಾಣ ಹಾಗೂ ರಾಜ್ಯಕ್ಕೆ ಬೇಕಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಜಲಾಶಯದ ನೀರನ್ನು ಬಳಕೆ ಮಾಡಿಕೊಂಡು ನಂತರ ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಎಲ್ಲ ಪಕ್ಷಗಳು ರಾಜಕೀಯ ಮರೆತು ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜ್ಯದ ಹಿತ ಕಾಯಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ನಿಲುವು ಕೈಗೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಕೆಆರ್ ಎಸ್ ಜಲಾಶಯದ ನಿರ್ವಹಣಾ ವೆಚ್ಚವನ್ನು ಕೂಡ ರಾಜ್ಯ ಸರ್ಕಾರ ಭರಿಸುತ್ತಿದ್ದು, ತಮಿಳುನಾಡಿಗೆ ನೀರು ಹಂಚಿಕೆ ಮಾಡುತ್ತಿರುವುದರಿಂದ ತಮಿಳುನಾಡು ಸರ್ಕಾರವೂ ಕೂಡ ಶೇ. 50ರಷ್ಟು ನಿರ್ವಹಣಾ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿ ಎಂದು ಅವರು ಆಗ್ರಹಿಸಿದ್ದಾರೆ.

KRS ಜಲಾಶಯದ ನೀರು ಕುಸಿತ

ಮಂಡ್ಯ (ಆ.21): ಮುಂಗಾರು ಮಳೆಯ ಅವಧಿ ಆಗಿದ್ದರೂ ಮಳೆ ಬಾರದೇ ಕೊಡಗು ಭಾಗದಲ್ಲಿ ಮಳೆಯಾಗದಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯದ ನೀರಿನ ಪ್ರಮಾಣ 105 ಅಡಿಗ ಇಳಿಕೆಯಾಗಿದೆ. ಆದರೂ, ಕಾನೂನಿಗೆ ತಲೆಬಾಗಬೇಕು ಎಂದು ರಾಜ್ಯ ಸರ್ಕಾರದಿಂದ ತಮಿಳುನಾಡಿಗೆ 19 ಟಿಎಂಸಿ ನೀರಿ ನೀರು ಹರಿಸಲಾಗಿದೆ. ಆದರೂ, ನೀರು ಹರಿಸಲಾಗುತ್ತಿದೆ ಎಂದು ಮಂಡ್ಯದಲ್ಲಿ ಬಿಜೆಪಿ ನಾಯಕರು, ರೈತರು ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಒಳಗೊಂಡಂತೆ ವಿವಿಧ ಸಂಘಟನೆಗಳೊಂದಿಗೆ ಕಾವೇರಿ ನಮ್ಮದು ಹೋರಾಟ ಆರಂಭವಾಗಿದೆ.

ಕನ್ನಡ ನಾಡಿನ ಜೀವನದಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಿಕೆ ಇನ್ನೂ ಮುಂದುವರೆದಿದೆ. ಆದ್ದರಿಂದ KRS ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಇಳಿಕೆಯಾಗಿದೆ. ಅಂದರೆ ಸದ್ಯಕ್ಕೆ ಕೆ.ಆರ್.ಎಸ್ ಡ್ಯಾಂ ನೀರನ ಮಟ್ಟ 105 ಅಡಿಗೆ ಕುಸಿತ ಕಂಡಿದೆ. ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ. ಇದರಿಂದ ಕಾವೇರಿ ಕೊಳ್ಳದ ರೈತರಲ್ಲಿ ಕಾವೇರಿ ಒಡಲು ಬರಿದಾಗುವ ಆತಂಕ ಎದುರಾಗಿದೆ. ಅನ್ನದಾತರ ಮಾತಿಗೂ ರಾಜ್ಯ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ.

Mandya news: ತಮಿಳನಾಡಿಗೆ ಕಾವೇರಿ ನೀರು : ಮಂಡ್ಯದಲ್ಲಿಂದು ಸುಮಲತಾ, ಬಿಜೆಪಿ ಪ್ರತಿಭಟನೆ

ಕಾವೇರಿ ಜಲಾಶಯದಲ್ಲಿ ಶೇ.50 ನೀರು:  ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹಲವಡೆ ಮುಂದುವರೆದಿರುವ ಪ್ರತಿಭಟನೆ ಮಾಡಲಾಗುತ್ತಿದೆ. ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹ ಮಾಡಲಾಗುತ್ತಿದೆ. ಆದರೂ, ಹೋರಾಟದ ನಡುವೆಯು ಇಂದು ಕೂಡ ತಮಿಳುನಾಡಿಗೆ 12,631 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದಿಂದ ಒಟ್ಟಾರೆ 15,247 ಕ್ಯೂಸೆಕ್ ಹೊರಹರಿವು ಹೋಗಿದೆ. ಆದರೆ, ಒಳಹರಿವು ಪ್ರಮಾಣ ತೀವ್ರ ಕುಸಿತವಾಗಿದೆ. ಇನ್ನು ಕೊಡಗು ಭಾಗದಲ್ಲಿ ಕಳೆದೆರಡು ದಿನಗಳಿಂದ ಸ್ವಲ್ಪ ಮಳೆ ಆಗುತ್ತಿದ್ದು, KRS ಡ್ಯಾಂಗೆ 4,983 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ. ಇನ್ನು 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 105.70 ಅಡಿ ನೀರು ಸಂಗ್ರಹವಿದೆ. ಒಟ್ಟಾರೆ 49.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 27.617 ಟಿಎಂಸಿ ನೀರು ಮಾತ್ರ ಶೇಖರಣೆಯಿದೆ.

Latest Videos
Follow Us:
Download App:
  • android
  • ios