ಬಾಗಲಕೋಟೆ: ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಕಾರು, ಪ್ರಾಣಾಪಾಯದಿಂದ ಪಾರಾದ ಚಾಲಕ!
ಚಾಲಕ ಎಪಿಎಂಸಿ ಆವರಣದಲ್ಲಿ ಕಾರು ನಿಲ್ಲಿಸಿ ಊಟಕ್ಕೆ ಹೋಗಿದ್ದರು. MH 10 cx 4888 ಮಹಾರಾಷ್ಟ್ರ ಮೂಲದ ಕಾರು ಇದಾಗಿದೆ. ಚಾಲಕ ಊಟಕ್ಕೆ ಹೋಗಿದ್ದ ವೇಳೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ. ಕಾರು ಚಾಲಕ ಬಚಾವ್ ಆಗಿದ್ದಾನೆ.
ಬಾಗಲಕೋಟೆ(ಡಿ.11): ನಿಂತಿದ್ದ ಕಾರಿನ ಇಂಜಿನ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಕಾರು ಹೊತ್ತಿ ಉರಿದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಇಂದು(ಬುಧವಾರ) ನಡೆದಿದೆ.
ಚಾಲಕ ಎಪಿಎಂಸಿ ಆವರಣದಲ್ಲಿ ಕಾರು ನಿಲ್ಲಿಸಿ ಊಟಕ್ಕೆ ಹೋಗಿದ್ದರು. MH 10 cx 4888 ಮಹಾರಾಷ್ಟ್ರ ಮೂಲದ ಕಾರು ಇದಾಗಿದೆ. ಚಾಲಕ ಊಟಕ್ಕೆ ಹೋಗಿದ್ದ ವೇಳೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ. ಕಾರು ಚಾಲಕ ಬಚಾವ್ ಆಗಿದ್ದಾನೆ.
ಮೈಮೇಲೆ ಬಿದ್ದ ಲಾಠಿ ಏಟು ಪಂಚಮಸಾಲಿ ಸಮಾಜ ಎಂದೂ ಮರೆಯೋಲ್ಲ: ಸಿದ್ದರಾಮಯ್ಯ ಸರ್ಕಾರಕ್ಕೆ ನಿರಾಣಿ ಎಚ್ಚರಿಕೆ
ನೋಡ ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾಂಟ್ರ್ಯಾಕ್ಟರ್ ಶಿವು ಎಂಬುವವರಿಗೆ ಸೇರಿದ ಕಾರು ಇದಾಗಿದೆ. ಘಟನಾ ಸ್ಥಳಕ್ಕೆ ಲೋಕಾಪುರ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಲೋಕಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.