ರ್‍ಯಾಶ್ ಡ್ರೈವಿಂಗ್ ಮಾಡೋರೇ ಹುಷಾರ್: 130km ಅಧಿಕ ಸ್ಪೀಡ್‌ನಲ್ಲಿ ವಾಹನ ಹೋದ್ರೆ ಎಫ್‌ಐಆರ್ ದಾಖಲು..!
ಅತೀ ವೇಗ ಚಾಹನ ಚಲಾಯಿಸುವವರ ವಿರುದ್ಧ ಕೇಸ್ ದಾಖಲು ಮಾಡಲು ಪೊಲೀಸರು ಮುಂದಾಗಿದ್ದಾರೆ. ಓವರ್ ಸ್ಪೀಡ್ ಗೆ ಬ್ರೇಕ್ ಹಾಕಲು ಎಡಿಜಿಪಿ ಅಲೋಕ್ ಕುಮಾರ್ ಹೊಸ ಅಸ್ತ್ರವನ್ನ ಬಳಸಲು ಮುಂದಾಗಿದ್ದಾರೆ. ಅತಿ ವೇಗದ ಚಾಲನೆಯಿಂದ ಶೇ. 90 ರಷ್ಟು ಅಪಘಾತವಾಗುವ ಸಾಧ್ಯತೆ ಇರುತ್ತೆ. ಪರಿಶೀಲನೆ ವೇಳೆ ಒಂದೇ ದಿನ 150ಕ್ಕೂ ಹೆಚ್ಚು ಅತಿ ವೇಗ ಚಾಲನೆ ಕೇಸ್‌ಗಳು ಪತ್ತೆಯಾಗಿವೆ.
ಬೆಂಗಳೂರು(ಜು.27): ಹೈವೇ ಅಂತ 130km ಅಧಿಕ ಸ್ಪೀಡ್‌ನಲ್ಲಿ ವಾಹನಗಳನ್ನ ಸಂಚರಿಸಿದ್ರೆ ಇನ್ಮುಂದೆ ಎಫ್‌ಐಆರ್ ದಾಖಲಾಗುತ್ತೆ. ಹೌದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ರ್‍ಯಾಶ್ ಡ್ರೈವಿಂಗ್ ನಿಲ್ತಿಲ್. ಹೀಗಾಗಿ 130km ಅಧಿಕ ಸ್ಪೀಡ್‌ನಲ್ಲಿ ಸಂಚರಿಸ್ತಿರೋ ವಾಹನ ಸವಾರರಿಗೆ ಎಡಿಜಿಪಿ ಅಲೋಕ್ ಕುಮಾರ್ ಶಾಕ್ ಕೊಟ್ಟಿದ್ದಾರೆ.
ಅತೀ ವೇಗ ಚಾಹನ ಚಲಾಯಿಸುವವರ ವಿರುದ್ಧ ಕೇಸ್ ದಾಖಲು ಮಾಡಲು ಪೊಲೀಸರು ಮುಂದಾಗಿದ್ದಾರೆ. ಓವರ್ ಸ್ಪೀಡ್ ಗೆ ಬ್ರೇಕ್ ಹಾಕಲು ಎಡಿಜಿಪಿ ಅಲೋಕ್ ಕುಮಾರ್ ಹೊಸ ಅಸ್ತ್ರವನ್ನ ಬಳಸಲು ಮುಂದಾಗಿದ್ದಾರೆ. ಅತಿ ವೇಗದ ಚಾಲನೆಯಿಂದ ಶೇ. 90 ರಷ್ಟು ಅಪಘಾತವಾಗುವ ಸಾಧ್ಯತೆ ಇರುತ್ತೆ. ಪರಿಶೀಲನೆ ವೇಳೆ ಒಂದೇ ದಿನ 150ಕ್ಕೂ ಹೆಚ್ಚು ಅತಿ ವೇಗ ಚಾಲನೆ ಕೇಸ್‌ಗಳು ಪತ್ತೆಯಾಗಿವೆ.
ಇನ್ಮುಂದೆ ಫಾಸ್ಟ್ಯಾಗ್ ಬದಲು GNSS ಟೋಲ್ ಸಂಗ್ರಹ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಾರಿ!
ನಿನ್ನೆ ಮೈಸೂರು ಬೆಂಗಳೂರು ಹೈವೇ ಸಿಸಿಟಿವಿಯನ್ನ ಸಂಚಾರಿ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಅವರು ಪರಿಶೀಲನೆ ನಡೆಸಿದ್ದರು. ಈ ವೇಳೆ ಅತೀ ವೇಗದ ಚಾಲನೆ ಹೆಚ್ತಿರೋ ಹಿನ್ನೆಲೆಯಲ್ಲಿ ಆಗಸ್ಟ್ 1ರಿಂದ ಅತಿ ವೇಗ ಚಾಲನೆ ಮಾಡಿದೋರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ. 130km ವಾಹನಗಳ ಸ್ಟೀಡ್ ದಾಟಿದ್ರೆ ಎಫ್ಐಆರ್ ದಾಖಲಾಗುತ್ತದೆ. ಈ ಬಗ್ಗೆ ಎಕ್ಸ್ ಖಾತೆ ಮೂಲಕ ಓವರ್ ಸ್ಪೀಡ್ ಓಡಿಸೋರಿಗೆ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.