ಹುಬ್ಬಳ್ಳಿ, (ಸೆ.06): ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯಭರಿತವಾದ ಸ್ವಾಗತ ಬ್ಯಾನರ್ ಹಾಕಿಸಿದ್ದ ನಗರದ ಕಾಂಗ್ರೆಸ್‌ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ- ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿ ಮಠ ಎನ್ನುವರು ಚೆನ್ನಮ್ಮ ವೃತ್ತದಲ್ಲಿ ಮೋದಿ ವಿರುದ್ಧ ವ್ಯಂಗ್ಯವಾಗಿ ಸ್ವಾಗತ ಬ್ಯಾನರ್ ಹಾಕಿಸಿದ್ದಾರೆ.

ಇದೀಗ ರಜತ್ ಉಳ್ಳಾಗಡ್ಡಿ ವಿರುದ್ದ ಹುಬ್ಬಳ್ಳಿ ಉಪ ನಗರ ಪೊಲೀಸ್​​ ಠಾಣೆಯಲ್ಲಿ ಕರ್ನಾಟಕ ವಿವಾದ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್​ 39ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ರಾತ್ರಿ ಚಂದ್ರನೌಕೆ ಲ್ಯಾಂಡಿಂಗ್‌ ಸಾಹಸ! ಬೆಂಗ್ಳೂರಿನಿಂದ ಮೋದಿ ವೀಕ್ಷಣೆ

ಭೀಕರ ಮಳೆಯಿಂದ ನೆರೆ ಪ್ರವಾಹಕ್ಕೆ ತತ್ತರಿಸಿರುವ ಜನರ ಕಣ್ಣೀರೋರೆಸಲು ನಿಮ್ಮ ಬಳಿ ಸಮಯವಿಲ್ಲ. ಪ್ರವಾಹದ ವೇಳೆ ಬರದವರು ಈಗ ರಾಜ್ಯಕ್ಕೆ ಚಂದ್ರಯಾನ ವೀಕ್ಷಣೆ ಮಾಡಲು ಬರುತ್ತಿರುವ ನಿಮಗೆ ಸ್ವಾಗತ ಎಂದು ಬ್ಯಾನರ್ ಹಾಕಲಾಗಿತ್ತು.

‘ಚಂದ್ರಯಾನ-2’ ನೌಕೆ ಚಂದಿರನ ಮೇಲೆ ಶುಕ್ರವಾರ ತಡರಾತ್ರಿ 1.30ರಿಂದ 2.30ರ ವೇಳೆಗೆ (ಶನಿವಾರ ನಸುಕಿನಲ್ಲಿ) ಪಾದಾರ್ಪಣೆ ಮಾಡಲಿದೆ. ಈ ಅಪರೂಪದ ಕ್ಷಣಗಳನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ. ಈ ವಿಸ್ಮಯ ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ.