ದಾವಣಗೆರೆ: ನಿಯಮ ಉಲ್ಲಂಘಣೆ, ವಾಲ್ಮೀಕಿ ಟ್ರಸ್ಟ್‌ ಸೂಪರ್ ಸೀಡ್ ಮಾಡಲು ಪ್ರಕರಣ ದಾಖಲು

ಟ್ರಸ್ಟ್‌ನಲ್ಲಿ ಅನ್ಯ ಜಾತಿಯವರನ್ನು ಸೇರ್ಪಡೆ ಮಾಡಿಕೊಂಡಿರುವುದು ಟ್ರಸ್ಟ್ ನಿಯಮ ಉಲ್ಲಂಘನೆ ಒಳಗೊಂಡಂತೆ ಹಲವಾರು ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಟ್ರಸ್ಟ್ ಸೂಪರ್ ಸೀಡ್ ಮಾಡಬೇಕು ಎಂದು ನ್ಯಾಯಾಲಯ ದಾವೆ ಹೂಡಲಾಗಿದೆ.

Filed Case For Super Seed Valmiki Trust in Davanagere grg

ವರದಿ: ವರದರಾಜ್ 

ದಾವಣಗೆರೆ(ಜು.04):  ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‌ಅನ್ನು ಸೂಪರ್ ಸೀಡ್ ಮಾಡಬೇಕು ಎಂದು ಕೋರಿ ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯವಾದಿ ಕೆ.ಎಂ. ಮಲ್ಲಿಕಾರ್ಜುನ ಗುಮ್ಮನೂರು ತಿಳಿಸಿದರು.

ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ‌ ನಡೆಸಿ ಮಾತನಾಡಿದ ಕೆ.ಎಂ. ಮಲ್ಲಿಕಾರ್ಜುನ ಗುಮ್ಮನೂರು ಅವರು, ಸರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಅವರು ಟ್ರಸ್ಟಿನ ಅನೇಕ ನಿಯಮಗಳನ್ನು ಅತ್ಯಂತ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಟ್ರಸ್ಟ್‌ಅನ್ನು ಸೂಪರ್ ಸೀಡ್ ಮಾಡಬೇಕು ಎಂದು ನ್ಯಾಯಾಲಯದಲ್ಲಿ ಜು. 3 ರಂದು ದಾವೆ ಹೂಡಲಾಗಿದೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಸಂತೆ, ಐದು ವಾರ ಸಂತೆ ಕಳೆಯುವಷ್ಟರಲ್ಲಿ ಮಳೆ!

1998 ರ ಜೂ. 23 ರಂದು ಎಲ್.ಜಿ. ಹಾವನೂರು ಅವರು ವಾಲ್ಮೀಕಿ ಗುರು ಪೀಠ ಟ್ರಸ್ಟ್ ರಚಿಸಿದ್ದರು. 2016 ರಲ್ಲಿ ಈಗಿರುವ ಸ್ವಾಮೀಜಿಯವರು ಟ್ರಸ್ಟ್‌ಅನ್ನು ಪುನರ್ ರಚನೆ ಮಾಡಿದ್ದಾರೆ. ಟ್ರಸ್ಟ್ ನಿಯಮಗಳ ಪ್ರಕಾರ ಸ್ವಾಮೀಜಿಯವರು ಶಿಕ್ಷಣ, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಬದಲಿಗೆ ಅನೇಕ ನಿಯಮಗಳ ಉಲ್ಲಂಘನೆ ಮಾಡಿರುವ ದಾಖಲೆ ಇವೆ. ಟ್ರಸ್ಟ್ ಸೂಪರ್ ಸೀಡ್ ಮಾಡುವ ಜೊತೆಗೆ ಸರ್ಕಾರ ಆಡಳಿತಾಧಿಕಾರಿಯನ್ನ ನೇಮಕ ಮಾಡಬೇಕು. ಹಣಕಾಸು ವ್ಯವಹಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿಗಳ ಸಮ್ಮತಿಯಿಂದ ಸರ್ಕಾರದ ಅನುದಾನವನ್ನು ಜಾತ್ರೆಗೆ ಬಳಸಿಕೊಂಡಿ ದ್ದಾರೆ. ಶೇ. 7.5 ರಷ್ಟು ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ತಿಳಿಸಿದರು.

ಸಿದ್ದೇಶ್ವರ ಜನ್ಮದಿನ: 5ರಂದು ನಮ್ಮಭಿಮಾನ ಕಾರ‍್ಯಕ್ರಮ ಬಿಎಸ್‌ವೈ ಉದ್ಘಾಟನೆ

ಟ್ರಸ್ಟ್‌ನಲ್ಲಿ ಅನ್ಯ ಜಾತಿಯವರನ್ನು ಸೇರ್ಪಡೆ ಮಾಡಿಕೊಂಡಿರುವುದು ಟ್ರಸ್ಟ್ ನಿಯಮ ಉಲ್ಲಂಘನೆ ಒಳಗೊಂಡಂತೆ ಹಲವಾರು ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಟ್ರಸ್ಟ್ ಸೂಪರ್ ಸೀಡ್ ಮಾಡಬೇಕು ಎಂದು ನ್ಯಾಯಾಲಯ ದಾವೆ ಹೂಡಲಾಗಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಎಸ್.ಎಚ್. ಸುಭಾಷ್, ಪಿ. ರಾಧಾಕೃಷ್ಣ, ಪ್ರಶಾಂತ ರಾಮಪ್ಪ ದಳವಾಯಿ, ಆಂಜ ನೇಯ ದಳವಾಯಿ, ಮಾರಣ್ಣ ಪಾಳೇಗಾರ, ಟಿ.ಎನ್. ಮನೋಹರ್, ಟಿ.ಎಸ್. ಕರಿಯಪ್ಪ, ತಾಯಪ್ಪ ನಾಯಕ ಇತರರು ಹಾಜರಿದ್ದರು. 

Latest Videos
Follow Us:
Download App:
  • android
  • ios