Asianet Suvarna News Asianet Suvarna News

ಬೆಳೆ ವಿಮೆ: ರೈತರಿಗೆ ಎಫ್‌ಐಡಿ ಕಡ್ಡಾಯ

ಅಧಿಸೂಚಿತ ಬೆಳೆಗೆ ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಒಂದು ವೇಳೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಡಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕ್‌ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡಲಾಗುವುದು.

FID Mandatory for Farmers For Crop Insurance in Bagalkot grg
Author
First Published Jul 4, 2023, 11:15 PM IST

ಬಾಗಲಕೋಟೆ(ಜು.04):  ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯಡಿ ರೈತರು ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಅಧಿಸೂಚಿತ ಬೆಳೆಗೆ ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಒಂದು ವೇಳೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಡಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕ್‌ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡಲಾಗುವುದು.

ಬಾಗಲಕೋಟೆ ತೋವಿವಿ ಘಟಿಕೊತ್ಸವ: ಕೋಲಾರದ ಕಿರಾಣಿ ವ್ಯಾಪಾರಿ ಮಗಳಿಗೆ 16 ಚಿನ್ನದ ಪದಕ

ಬೆಳೆ ಸಾಲ ಪಡೆಯದ ರೈತರಿಗೆ ಬೆಳೆವಿಮೆ ಯೋಜನೆ ಐಚ್ಛಿಕವಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಎಸ್‌ಬಿಐ, ಜಿಐಸಿ ವಿಮಾ ಕಂಪನಿ ಆಯ್ಕೆಯಾಗಿರುತ್ತದೆ. ಆಸಕ್ತ ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಅಧಿಸೂಚಿತ ಬೆಳೆಗೆ ಹತ್ತಿರದ ಬ್ಯಾಂಕ್‌ ಅಥವಾ ವಿಮಾ ನೋಂದಣಿ ಕೇಂದ್ರಗಳಲ್ಲಿ ವಿಮಾ ಕಂತು ತುಂಬಿ ಬೆಳೆಗಳಿಗೆ ವಿಮೆ ಮಾಡಿಸಬೇಕು. ಮುಂಗಾರು ಹಂಗಾಮಿನಲ್ಲಿ ಆಹಾರ ಬೆಳೆಗಳಿಗೆ ಬೆಳೆ ವಿಸ್ತೀರ್ಣಕ್ಕೆ ತಕ್ಕಂತೆ ಬೆಳೆ ವಿಮಾ ಕಂತಿನ ಶೇ.2ರಷ್ಟುಹಾಗೂ ವಾಣಿಜ್ಯ ಬೆಳೆಗಳಿಗೆ ಬೆಳೆ ವಿಮಾ ಕಂತಿನ ಶೇ.5ರಷ್ಟುರೈತರು ಪಾವತಿಸಬೇಕಾಗಿರುತ್ತದೆ.

ಸ್ಥಳೀಯ ಗಂಡಾಂತರ ಕಾರಣಗಳಿಂದ (ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ ಮತ್ತು ಗುಡುಗು ಮಿಂಚುಗಳಿಂದಾಗಿ ಆಗುವ ಬೆಂಕಿ ಅವಘಡ) ಬೆಳೆ ನಷ್ಟಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಸಂಬಂಧಪಟ್ಟಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಅಥವಾ ಹಣಕಾಸು ಸಂಸ್ಥೆ ಅಥವಾ ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡತಕ್ಕದ್ದು ಇಂಥ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸತಕ್ಕದ್ದು.

ಬೆಳೆ ವಿಮೆ ಯೋಜನೆಯಡಿ 2023ರ ಮುಂಗಾರು ಹಂಗಾಮಿನಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರದಳೊಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆ ನಷ್ಟನಿರ್ಧರಿಸಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ.

ರೇಣುಕಾಚಾರ್ಯರಂತಹವರಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ: ಸಚಿವ ಮಲ್ಲಿಕಾರ್ಜುನ

ಎಫ್‌ಐಡಿ ಕಡ್ಡಾಯ

ಪ್ರಸಕ್ತ ಸಾಲಿನಿಂದ ಬೆಳೆ ವಿಮೆ ಮಾಡಿಸುವ ರೈತರು ಎಫ್‌ಐಡಿ ಹೊಂದಿರುವುದು ಕಡ್ಡಾಯ. ಬೆಳೆ ವಿಮೆ ಯೋಜನೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಬೆಳೆ ವಿಮೆ ಸಂಸ್ಥೆ ಕಚೇರಿಗಳಿಗೆ ಭೇಟಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿವಿಧ ಬೆಳೆಗಳಿಗೆ ವಿಮಾ ಯೋಜನೆ

ಬೆಳೆವಾರು ವಿಮಾ ಕಂತು ತುಂಬುವ ಕೊನೆಯ ದಿನಾಂಕ ಇಂತಿವೆ. ಸೋಯಾ ಅವರೆ (ಮಳೆ ಆಶ್ರಿತ-ನೀರಾವರಿ), ಉದ್ದು (ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ), ಜೋಳ (ನೀರಾವರಿ) ಬೆಳೆಗಳಿಗೆ ವಿಮಾ ಕಂತು ಪಾವತಿಗೆ ಜು.15 ಕೊನೆ ದಿನವಾದರೆ, ಅರಿಶಿಣ, ಸೂರ್ಯಕಾಂತಿ ((ಮಳೆಯಾಶ್ರಿ), ಕೆಂಪು ಮೆಣಸಿನಕಾಯಿ (ನೀರಾವರಿ), ಮುಸುಕಿನ ಜೋಳ (ನೀರಾವರಿ-ಮಳೆಯಾಶ್ರಿತ), ಸಜ್ಜೆ (ನೀರಾವರಿ-ಮಳೆಯಾಶ್ರಿತ), ಜೋಳ (ಮಳೆಯಾಶ್ರಿತ), ಹುರಳ್ಳಿ (ಮಳೆಯಾಶ್ರಿತ), ತೊಗರಿ (ನೀರಾವರಿ-ಮಳೆಯಾಶ್ರಿತ), ಶೇಂಗಾ (ನೀರಾವರಿ-ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ) ಬೆಳೆಗಳಿಗೆ ಜು.31 ಹಾಗೂ ಸೂರ್ಯಕಾಂತಿ (ನೀರಾವರಿ), ಈರುಳ್ಳಿ (ನೀರಾವರಿ-ಮಳೆಯಾಶ್ರಿತ), ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ) ಬೆಳೆಗಳಿಗೆ ಆಗಸ್ಟ್‌ 16 ಕೊನೆಯ ದಿನವಾಗಿದೆ.

Follow Us:
Download App:
  • android
  • ios