Asianet Suvarna News Asianet Suvarna News

ಕೋಲಾರ ಮಾರುಕಟ್ಟೆಯಲ್ಲಿ ಖರೀದಿ ಜೋರು

ಹಬ್ಬದ ಪ್ರಯುಕ್ತ ಬೆಲೆ ಏರಿಕೆ ನಡುವೆಯೂ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಪ್ರತಿ ಮನೆಯಲ್ಲೂ ಬಳಸುವ ವಾಹನ, ಉಪಕರಣಗಳು, ಅಂಗಡಿ, ಕಚೇರಿಗಳಲ್ಲಿ ವಿಶೇಷ ಪೂಜೆ ನಡೆಯುತ್ತಿರುವುದರಿಂದ ಹೂವಿನ ಬೆಲೆ ತಾರಕಕ್ಕೇರಿದೆ.

Festival shopping in kolar
Author
Bangalore, First Published Oct 7, 2019, 12:11 PM IST

ಕೋಲಾರ(ಅ.07): ದಸರಾ ಮುಕ್ತಾಯದ ಹಿಂದಿನ ದಿನವಾದ ಆಯುಧಪೂಜೆಗಾಗಿ ನಗರದಲ್ಲಿ ಬೆಲೆ ಏರಿಕೆಯ ಬಿಸಿಯ ನಡುವೆಯೂ ಹಬ್ಬದ ವ್ಯಾಪಾರ ಜೋರಾಗೇ ನಡೆದಿತ್ತು. ಪ್ರತಿ ಮನೆಯಲ್ಲೂ ಬಳಸುವ ವಾಹನ, ಉಪಕರಣಗಳು, ಅಂಗಡಿ, ಕಚೇರಿಗಳಲ್ಲಿ ವಿಶೇಷ ಪೂಜೆ ನಡೆಯುತ್ತಿರುವುದರಿಂದ ಹೂವಿನ ಬೆಲೆ ತಾರಕಕ್ಕೇರಿದೆ.

ಹೂವಿನ ಬೆಲೆ ಗಗನಕ್ಕೆ:

ಕಳೆದ ಒಂದೆರಡು ದಿನಗಳ ಹಿಂದೆ ಬೆಲೆ ಕುಸಿತದಿಂದ ವ್ಯಾಪಾರವಾಗದೇ ಕಸದ ರಾಶಿ ಸೇರುತ್ತಿದ್ದ ಮೂಟೆಗಟ್ಟಲೇ ಚೆಂಡು ಹೂವಿಗೆ ಮಹಾನವಮಿಯ ಮುನ್ನಾದಿನ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಪ್ರತಿ ಕೆಜಿ ಚೆಂಡೂ ಹೂ 80 ರೂಗಳವರೆಗೂ ಮಾರಾಟವಾಗುತ್ತಿದೆ. ಇದರೊಂದಿಗೆ ಇತರೆ ಹೂವಿನ ಬೆಲೆಯನ್ನು ಕೇಳುವಂತೆಯೇ ಇರಲಿಲ್ಲ. ಕೇವಲ 50 ರು. ಕೆಜಿಯಿದ್ದ ಬಟನ್‌ ರೋಸ್‌ ಇಂದು 200 ರಿಂದ 240 ರು.ಗಳಿಗೆ ಏರಿದೆ. ಕನಕಾಂಬರ ಕನಕದಷ್ಟೇ ಬೆಲೆ ಏರಿಸಿಕೊಂಡಿದ್ದು ಕೆಜಿಗೆ 1500 ರೂಗಳಾಗಿದ್ದರೆ ಕಾಕಡ 500 ರು.ಗೆ ಮಾರಾಟವಾಗುತ್ತಿತ್ತು.

ಬೂದುಗುಂಬಳಕ್ಕೆ ಭಾರೀ ಬೇಡಿಕೆ:

ನಗರದ ರಂಗಮಂದಿರದ ಮುಂಭಾಗ ರಾಶಿಗಟ್ಟಲೇ ಬೂದುಗುಂಬಳ ಕಾಯಿಗಳು, ಬಾಳೆ ಕಂಬಗಳು ಕಂಡು ಬಂದವು. ಇಲ್ಲಿಯೂ ವ್ಯಾಪಾರ ಜೋರಾಗೇ ನಡೆದಿದ್ದು, ಬೂದುಗುಂಬಳ ಕಾಯಿ ಕನಿಷ್ಟ60 ರಿಂದ 200 ರೂಗಳವರೆಗೂ ತನ್ನ ಬೆಲೆಯನ್ನು ಏರಿಸಿಕೊಂಡು ನಾಗರೀಕರ ಜೇಬಿಗೆ ಕತ್ತರಿ ಹಾಕಲು ಸಿದ್ದವಾಗಿದ್ದವು. ಇಷ್ಟೊಂದು ಬೆಲೆ ಏರಿಕೆಯ ನಡುವೆಯೂ ವಹಿವಾಟಿಗೆ ಮಾತ್ರ ಯಾವುದೇ ಹಿನ್ನಡೆ ಕಂಡು ಬಂದಂತೆ ಕಾಣಲಿಲ್ಲ.

ಕಚೇರಿಯಲ್ಲಿ ಶನಿವಾರವೇ ಪೂಜೆ:

ಸರ್ಕಾರಿ ಕಚೇರಿಗಳಲ್ಲಿ ಆಯುಧಪೂಜೆ, ವಿಜಯಧಶಮಿಗೆ ಎರಡು ದಿನ ರಜೆಯಿದ್ದ ಕಾರಣ ನಗರದ ಅನೇಕ ಕಚೇರಿಗಳಲ್ಲಿ ಶನಿವಾರವೇ ಪೂಜೆ ನೆರವೇರಿಸಲಾಯಿತು. ನಾಳೆ ತಮ್ಮ ವಾಹನಗಳಿಗೆ ಪೂಜೆ ಮಾಡಲು ನಾಗರೀಕರು ಇಂದೇ ಸಿದ್ದತೆ ನಡೆಸಿದ್ದು ಕಂಡು ಬಂತು, ವಾಹನಗಳನ್ನು ತೊಳೆಯುವ ಗ್ಯಾರೇಜ್‌ಗಳು ತುಂಬಿ ತುಳುಕುತ್ತಿದ್ದು, ಹಬ್ಬದ ಉತ್ಸಾಹ ಕಂಡು ಬಂತು.

Follow Us:
Download App:
  • android
  • ios