ಮಕ್ಕಳಿಗೆ ಸಾತ್ವಿಕ ಆಹಾರ ನೀಡಿ, ಮಾಂಸವನ್ನು ವಧೆ ಮಾಡಿ ತೂಗು ಹಾಕಬೇಡಿ: ಪೇಜಾವರ ಶ್ರೀ
ಮಕ್ಕಳಿಗೆ ಸಾತ್ವಿಕ ಆಹಾರ ನೀಡಿ, ಮಾಂಸವನ್ನು ವಧೆ ಮಾಡಿ ತೂಗು ಹಾಕಬೇಡಿ. ಮಕ್ಕಳ ಮುಂದೆ ಮಾಂಸ ನೇತು ಹಾಕಬಾರದು, ಮಕ್ಕಳ ಮುಂದೆ ಪ್ರಾಣಿ ವಧೆ ಮಾಡಬಾರದು, ಮಾಂಸದ ಅಂಗಡಿಗಳಲ್ಲಿ ನೇತು ಹಾಕುವ ಪದ್ಧತಿ ನಿಲ್ಲಿಸಬೇಕು ಅಥವಾ ಮರೆ ಮಾಡಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಸರಕಾರಕ್ಕೆ ಸಲಹೆ ನೀಡಿದರು.
ಉಡುಪಿ (ಜ.11): ಮಕ್ಕಳಿಗೆ ಸಾತ್ವಿಕ ಆಹಾರ ನೀಡಿ, ಮಾಂಸವನ್ನು ವಧೆ ಮಾಡಿ ತೂಗು ಹಾಕಬೇಡಿ. ಮಕ್ಕಳ ಮುಂದೆ ಮಾಂಸ ನೇತು ಹಾಕಬಾರದು, ಮಕ್ಕಳ ಮುಂದೆ ಪ್ರಾಣಿ ವಧೆ ಮಾಡಬಾರದು, ಮಾಂಸದ ಅಂಗಡಿಗಳಲ್ಲಿ ನೇತು ಹಾಕುವ ಪದ್ಧತಿ ನಿಲ್ಲಿಸಬೇಕು ಅಥವಾ ಮರೆ ಮಾಡಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಸರಕಾರಕ್ಕೆ ಸಲಹೆ ನೀಡಿದರು. ಅವರು ಬುಧವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ವರ್ಧನೆ ಕುರಿತು ವಿಧಾನಸೌಧದಲ್ಲಿ ಶಿಕ್ಷಣ ಸಚಿವರು ಕರೆದಿದ್ದ ಸಭೆಯಲ್ಲಿ ಭಾಗಿಯಾಗಿ, ಅಭಿಪ್ರಾಯ ಮಂಡಿಸಿದ ಪೇಜಾವರ ಶ್ರೀಗಳ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಎಲ್ಲಾ ಧರ್ಮ ಗುರುಗಳು ಅವರ ಅಭಿಪ್ರಾಯ ಮಂಡಿಸಿದ್ದಾರೆ. ಅಭಿಪ್ರಾಯ ಮಂಡನೆಯ ಬಗ್ಗೆ ಯಾರ ತಕರಾರು ಇರಲಿಲ್ಲ. ಸಮಾಜದ ಶಾಂತಿ ಸುವ್ಯವಸ್ಥೆ ನೆಮ್ಮದಿಗಾಗಿ ಧರ್ಮ ಗುರುಗಳು ಸಲಹೆ ನೀಡಿದ್ದೇವೆ ಎಂದರು. ಮಕ್ಕಳಿಂದ ನಾವು ಏನು ಬಯಸುತ್ತೇವೋ ಅದನ್ನೇ ತೋರಿಸಬೇಕು, ಸಮಾಜದಲ್ಲಿ ನಾವು ಬೇಡ ಎಂದು ಬಯಸುವ ಯಾವುದೇ ದೃಶ್ಯ ಮಾತು ನಡವಳಿಕೆ ಮಕ್ಕಳ ಮುಂದೆ ಕಾಣಬಾರದು.ಮಾಂಸದ ಅಂಗಡಿಗಳು ಯಾವುದು ಎಂದು ಎಲ್ಲರಿಗೂ ಗೊತ್ತಿರುತ್ತದೆ.ಪ್ರಾಣಿವಧೆಯನ್ನು ಮಕ್ಕಳ ಎದುರಲ್ಲಿ ಮಾಡಲೇಬಾರದು, ಕೇವಲ ಮಾಂಸದ ಅಂಗಡಿ ಮಾತ್ರವಲ್ಲ ಮನೆಯಲ್ಲೂ ಈ ನಿಯಮ ಪಾಲಿಸಿ, ದಯವಿಟ್ಟು ಮಕ್ಕಳ ಎದುರಲ್ಲಿ ಪ್ರಾಣಿವಧೆ ಮಾಡಬೇಡಿ ಎಂದು ವಿನಂತಿಸಿದರು.
ಸಂಸದ ಜಿ.ಎಸ್.ಬಸವರಾಜು ದೊಡ್ಡ ಲೂಟಿಕೋರ: ಶಾಸಕ ಎಸ್.ಆರ್.ಶ್ರೀನಿವಾಸ್
ರಕ್ತ ಚಿಮ್ಮುವ, ಜೋತಾಡುವ, ಸ್ಥಿತಿಯಲ್ಲಿ ಪ್ರಾಣಿಗಳನ್ನು ಮಾರ್ಗದ ಬದಿಯಲ್ಲಿ ನೇತು ಹಾಕುವುದು ಸರಿಯಲ್ಲ, ಬೇಕಿದ್ದರೆ ಒದೆ ಮಾಡಿದ ಪ್ರಾಣಿಯನ್ನು ಒಳಗಿಟ್ಟುಕೊಳ್ಳಿ.ಪುಟ್ಟ ಮಕ್ಕಳ ಮನಸ್ಸು ವಿಕಾರ ಆಗುವ ಸಾಧ್ಯತೆ ಇದೆ. ನಿತ್ಯವೂ ಅದನ್ನೇ ನೋಡಿದರೆ ರೂಢಿಯಾಗುವ ಅಪಾಯ ಇದೆ, ಕ್ರೌರ್ಯ ಮಾಂಸ ಗಾಯ ಹೊಡೆತ ನೋಡಿಯೂ ಮಕ್ಕಳು ಮುಂದೆ ಸ್ಪಂದಿಸದೆ ಹೋಗಬಹುದು.ಮಕ್ಕಳು ಸಾತ್ವಿಕ ಆಹಾರ ತಿನ್ನಬೇಕು ಎಂದು ಹೇಳಿದ್ದೇನೆ. ಸಸ್ಯಹಾರ ಮತ್ತು ಮಾಂಸಹಾರ ಎರಡರಲ್ಲೂ ಸಾತ್ವಿಕ ಮತ್ತು ತಾಮಸ ಗುಣಗಳಿವೆ, ಮನಸ್ಸನ್ನು ಉದ್ವಿಗ್ನಗೊಳಿಸುವ ಥಾಮಸ ಆಹಾರವನ್ನು ಮಕ್ಕಳಿಗೆ ಕೊಡಬೇಡಿ. ಮಕ್ಕಳಿಗೆ ಒಳ್ಳೆಯ ಭಾವನೆ ಮೂಡುವ ಆಹಾರ ನೀಡಿ ಎಂದರು.
ಕೊಡಗು ಜಿಲ್ಲೆಯಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದ ತಾಪಮಾನ: ಸ್ಥಳೀಯರ ಆತಂಕ
ಮಾಂಸಹರವನ್ನು ವಿರೋಧಿಸಿ ನಾನು ಯಾವುದೇ ಮಾತನಾಡಿಲ್ಲ, ಸಸ್ಯಹಾರದಲ್ಲೂ ತಮಸ ಆಹಾರ ಇರಬಹುದು. ಮಾಂಸಹಾರದಲ್ಲಿ ಸಾತ್ವಿಕ ಆಹಾರ ಇರಬಹುದು. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ನೀಡಬೇಕು ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ, ಕಾರ್ಟೂನ್ಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಕಾರ್ಟೂನ್ ಮೂಲಕ ನೈತಿಕ ಮೌಲ್ಯ ತೋರಿಸಬೇಕು, ಅದಕ್ಕಾಗಿ ಪ್ರತ್ಯೇಕ ತರಗತಿ ಮಾಡಬೇಕು. ನೈತಿಕ ಮೌಲ್ಯದ ದೃಶ್ಯಗಳನ್ನು ಮಕ್ಕಳ ಮೂಲಕ ಆಡಿಸಬೇಕು. ಒಂದು ತರಗತಿಯಲ್ಲಿ ಮೌಲ್ಯ ಪ್ರದರ್ಶಿಸುವ ಪಾತ್ರಗಳನ್ನು ಮಕ್ಕಳು ನಟಿಸಬೇಕು, ಮಕ್ಕಳು ಪಾತ್ರದೊಳಗೆ ಪರಕಾಯ ಪ್ರವೇಶವಾಗುತ್ತಾರೆ. ನಾಟಕ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂದರು.