ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ 13ಕ್ಕೆ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸರ್ಕಾರಿ ಕಚೇರಿಗಳ ಭ್ರಷ್ಟಚಾರ ವಿರೋಧಿಸಿ ಮಾ. 13ರಂದು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಹದೇವನಾಯಕ ಹೇಳಿದರು.
ಎಚ್.ಡಿ. ಕೋಟೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸರ್ಕಾರಿ ಕಚೇರಿಗಳ ಭ್ರಷ್ಟಚಾರ ವಿರೋಧಿಸಿ ಮಾ. 13ರಂದು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಹದೇವನಾಯಕ ಹೇಳಿದರು.
ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಬಹುತೇಕ ಹಳ್ಳಿಗಳ ಕಾಡಂಚಿನ ಪ್ರದೇಶದಲ್ಲಿದ್ದು ಕಾಡಾನೆ ಹಾವಳಿಯಿಂದ ರೈತರು ಫಸಲು ನಿರಂತರವಾಗಿ ನಾಶವಾಗುತ್ತಿವೆ, ಆನೆ, ಹುಲಿ, ಚಿರತೆಗಳು, ಜನ ಜಾನುವಾರುಗಳನ್ನು ಕೊಲ್ಲುತ್ತಿವೆ. ದರಖಾಸ್ತು ಮಂಜೂರಿ ಕೋರಿ ಸಲ್ಲಿಸಿರುವ ಅರ್ಜಿಗಳು ಲಕೋಟೆಯಲ್ಲಿ ಧೂಳು ಹಿಡಿಯುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಚ್.ಡಿ. ಕೋಟೆ ಪಟ್ಟಣದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಟ್ರ್ಯಾಕ್ಟರ್, ಎತ್ತಿನ ಗಾಡಿಗಳು, ಎತ್ತುಗಳು, ಜಾನುವಾರುಗಳು ಸಹ ಭಾಗವಹಿಸಲಿವೆ, ಬಡಗಲಪುರ ನಾಗೇಂದ್ರ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಬೋರೇಗೌಡ, ಶಿವಲಿಂಗಪ್ಪ, ಪ್ರಸಾದ್, ನಂದೀಶ…, ಗಣೇಶ್, ನಂದೀಶ್, ಚೆನ್ನನಾಯಕ, ಗಣೇಶ, ದೇವಮ್ಮ, ಸಿಂಗೇಗೌಡ ಇದ್ದರು.
ರೈತ ಸಂಘದಿಂದ ಲೇವಡಿ
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಜನರು ಚುನಾವಣೆ ಬಹಿಷ್ಕಾರದಂತಹಾ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಕಂದಾಯ ಸಚಿವ ಅಶೋಕ್ ಮಾತ್ರ ಎಲ್ಲಾ ಇದ್ದ ರಸ್ತೆ ಬದಿಯ ಊರಲ್ಲಿ ಗ್ರಾಮ ವಾಸ್ತವ್ಯ ಮಾಡಿ ಹೋಗಿದ್ದಾರೆ. ಗ್ರಾಮ ವಾಸ್ತವ್ಯಕ್ಕೆ ಅರ್ಥ ಬರಬೇಕಾದ್ರೆ ಮಲೆನಾಡ ಕುಗ್ರಾಮದಲ್ಲಿ ಮಾಡ್ಬೇಕಿತ್ತು ಅಂತ ಜನ ಸಚಿವ ಅಶೋಕ್ ಗ್ರಾಮ ವಾಸ್ತವ್ಯಕ್ಕೆ ಲೇವಡಿ ಮಾಡ್ತಿದ್ದಾರೆ
ಗ್ರಾಮವಾಸ್ತವ್ಯಕ್ಕೆ ಜನರ ಅಪಸ್ವರ: ಮೊನ್ನೆ ಕಂದಾಯ ಸಚಿವ ಆರ್.ಅಶೋಕ್ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆದರೆ, ಇದೀಗ, ರೈತ ಸಮುದಾಯ ಸಚಿವರ ಗ್ರಾಮ ವಾಸ್ತವ್ಯಕ್ಕೆ ಲೇವಡಿ ಮಾಡ್ತಿದ್ದಾರೆ. ಹುಲಿಕೆರೆ ಬಯಲುಸೀಮೆ ಭಾಗ ನಿಜ. ಅಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಈಗಿಲ್ಲ. ಕಳೆದ ಎರಡು ವರ್ಷಗಳಿಂದ ಸಮೃದ್ಧ ಮಳೆ-ಬೆಳೆಯಾಗಿ ಜನ ಚೆನ್ನಾಗಿದ್ದಾರೆ. ಆದರೆ, ಆರ್.ಅಶೋಕ್ ಬಂದು ಹೋಗೋದಕ್ಕೆ ಅನುಕೂಲವಾಗಲೆಂದು ಇಲ್ಲಿ ವಾಸ್ತವ್ಯ ಮಾಡಿದ್ದಾರೆಂದು ರೈತ ಸಂಘ ಆರೋಪಿಸಿದೆ.
ಅಲ್ಲಿರುವವರು ರೈತರೇ, ಕಷ್ಟದಲ್ಲಿದ್ದಾರೆ ನಿಜ. ಆದರೆ, ಕಳೆದ ಐದು ವರ್ಷದಿಂದ ಭಾರೀ ಮಳೆಗೆ ಮಲೆನಾಡಿಗರ ಬದುಕು ಬೀದಿಗೆ ಬಿದ್ದಿದೆ. ರಸ್ತೆ-ನೀರು-ಕರೆಂಟ್-ರೋಡು ಯಾವುದೂ ಇಲ್ಲದ ಗ್ರಾಮಗಳು ನೂರಾರಿವೆ. ಅಲ್ಲಿ ಸಚಿವರು ವಾಸ್ತವ್ಯ ಮಾಡಿದ್ದರೆ ಅವರ ವಾಸ್ತವ್ಯಕ್ಕೆ ಅರ್ಥ ಬರುತ್ತಿತ್ತು. ಜನರ ಸಮಸ್ಯೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮುಟ್ಟುತ್ತಿತ್ತು. ಒಂದಷ್ಟು ಸೌಲಭ್ಯಗಳಿಂದ ಜನರ ಬದುಕು ಹಸನಾಗುತ್ತಿತ್ತು. ಆದರೆ, ಸಚಿವರು ರಸ್ತೆ ಬದಿಯ ಊರಲ್ಲಿ ವಾಸ್ತವ್ಯ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಸಚಿವರ 16ನೇ ಗ್ರಾಮ ವಾಸ್ತವ್ಯ ಲೆಕ್ಕದ ಜೊತೆ ಬಂದು ಹೋದರೂ ಎಂಬ ದಾಖಲೆಗಾಗಿ ವಾಸ್ತವ್ಯ ಮಾಡಿದಂತಿದೆ ಎಂದು ಸಚಿವರ ವಾಸ್ತವ್ಯದ ಬಗ್ಗೆ ರೈತ ಮುಖಂಡ ಗುರುಶಾಂತಪ್ಪ ವ್ಯಂಗ್ಯವಾಡಿದ್ದಾರೆ.
ಮಲೆನಾಡಿಗರ ಸಮಸ್ಯೆ ಕೇಳೋರು ಯಾರು, ರೈತ ಸಂಘ ಪ್ರಶ್ನೆ: ಕಳೆದ ಐದು ವರ್ಷದಿಂದ ಮೂಡಿಗೆರೆ-ಶೃಂಗೇರಿ ಹಾಗೂ ಕಳಸ ತಾಲೂಕಿನ ಯತೇಚ್ಛವಾಗಿ ಮಳೆ ಸುರಿದಿದೆ. ಮೂಡಿಗೆರೆ-ಕಳಸದಲ್ಲಂತೂ ರಣಮಳೆ. 2019ರ ಆಗಸ್ಟ್ ಮಳೆಗೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಮಲೆಮನೆ, ಮದುಗುಂಡಿ, ಬಿದಿರುತಳ, ಆಲೇಖಾನ್ ಹೊರಟ್ಟಿ ಗ್ರಾಮಗಳಲ್ಲಿ ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿತ್ತು. ಮಲೆಮನೆ ಗ್ರಾಮದಲ್ಲಿ ಆರು ಮನೆ ನೆಲಸಮವಾಗಿದ್ದವು. ಈ ರೀತಿಯ ಹಲವು ಗ್ರಾಮಗಳಿವೆ. ಅಲ್ಲಿಂದ ಸರ್ಕಾರದ ಪುನರ್ವತಿಗೆ ಬಂದ ಜನ ರಸ್ತೆ-ನೀರು-ಚರಂಡಿ-ರೋಡು-ವಿದ್ಯುತ್ ಏನೂ ಇಲ್ಲ ಅಂತ ಚುನಾವಣೆ ಬಹಿಷ್ಕಾರಕ್ಕೂ ಚಿಂತಿಸಿದ್ದಾರೆ.