Chikkaballapura: ಎಲ್ಲಾ ಬೆಳೆ ಕಳೆದುಕೊಂಡ ರೈತರಿಗೆ ಈಗ ಭತ್ತದ ಆಸರೆ

ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸಂಕಟಕ್ಕೆ ಸಿಲುಕಿರುವ ಜಿಲ್ಲೆಯ ಅನ್ನದಾತರು ಈಗಾಗಲೇ ಬಿತ್ತನೆ ಮಾಡಿದ ಶೇಂಗಾ, ರಾಗಿ, ತೊಗರಿ, ಅವರೆ ಮತ್ತಿತರ ಮಳೆ ಅಶ್ರಿತ ಬೆಳೆಗಳನ್ನು ವ್ಯಾಪಕ ಮಳೆಯಿಂದಾಗಿ ಕಳೆದುಕೊಂಡಿದ್ದು ಇದೀಗ ಬರೀ ಭತ್ತದ ಬೆಳೆ ಮಾತ್ರ ಆಸರೆ ಎನ್ನುವಂತಾಗಿದೆ.

  farmers  lost all their crops  in Chikkaballapura snr

 ಚಿಕ್ಕಬಳ್ಳಾಪುರ (ಅ.31):  ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸಂಕಟಕ್ಕೆ ಸಿಲುಕಿರುವ ಜಿಲ್ಲೆಯ ಅನ್ನದಾತರು ಈಗಾಗಲೇ ಬಿತ್ತನೆ ಮಾಡಿದ ಶೇಂಗಾ, ರಾಗಿ, ತೊಗರಿ, ಅವರೆ ಮತ್ತಿತರ ಮಳೆ ಅಶ್ರಿತ ಬೆಳೆಗಳನ್ನು ವ್ಯಾಪಕ ಮಳೆಯಿಂದಾಗಿ ಕಳೆದುಕೊಂಡಿದ್ದು ಇದೀಗ ಬರೀ ಭತ್ತದ ಬೆಳೆ ಮಾತ್ರ ಆಸರೆ ಎನ್ನುವಂತಾಗಿದೆ.

ಹಲವು ದಶಕಗಳ ಕಾಲ ಮಳೆ ಕೊರತೆಯಿಂದ ಕೃಷಿ ಕಾರ್ಯಗಳಿಗೆ ಅಂತರ್ಜಲವನ್ನೆ ನಂಬಿದ್ದ ರೈತರು ಜಿಲ್ಲೆಯಲ್ಲಿ ಭತ್ತ ಬೆಳೆಯುವುದನ್ನು ಸಂಪೂರ್ಣ ಕೈ ಬಿಟ್ಟಿದ್ದರು. ಹೆಚ್ಚು ನೀರು ಬೇಡುವ ಭತ್ತದ ಬೆಳೆ ಸಹವಾಸದಿಂದ ದೂರ ಉಳಿದಿದ್ದರು. ಆದರೆ ಈಗ ಎಲ್ಲಿ ನೋಡಿದರೂ ಭತ್ತದ ಬೆಳೆಯ ಸಿರಿ ನೋಡಗರ ಕೈ ಬೀಸಿ ಕರೆಯುತ್ತಿದೆ.

ಮಳೆಗೆ ಶೇಂಗಾ, ರಾಗಿ ಹಾನಿ

ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಆದ ತೀವ್ರ ಮಳೆಯಿಂದಾಗಿ ಬಿತ್ತನೆಗೂ ಸಮರ್ಪಕವಾಗಿ ಸಮಯ ಸಿಗಲಿಲ್ಲ. ಬಿತ್ತನೆ ಆದರೂ ನಿರಂತರ ಮಳೆಯಿಂದಾಗಿ ಅಪಾರ ಪ್ರಮಾಣದ ಶೇಂಗಾ, ರಾಗಿ, ಅವರೆ, ತೊಗರಿ ಮತ್ತತರ ಬೆಳೆಗಳು ಮಳೆಯಿಂದ ಸಾಕಷ್ಟುಹಾನಿಯಾಗಿದ್ದು ರೈತರು ಕಣ್ಣೀರು ಸುರಿಸುವಂತಾಗಿದೆ. ಜೊತೆಗೆ ಈ ಬಾರಿ ಶೇಂಗಾ, ರಾಗಿ ಬಿತ್ತನೆ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ.

ಹೀಗಾಗಿ ಮುಂಗಾರು ಕೈ ಹಿಡಿದರೂ ಜಿಲ್ಲೆಯಲ್ಲಿ ಅತಿವೃಷ್ಠಿ ಪರಿಣಾಮ ರೈತರ ಪರಿಸ್ಥಿತಿ ಸಂಕಷ್ಟಕ್ಕೀಡಾಗಿದ್ದು ಮಳೆಯ ತೀವ್ರತೆಯ ಪರಿಣಾಮ ಖುಷ್ಕಿ ಬೇಸಾಯದ ಮೇಲೆ ವ್ಯತಿರಕ್ತ ಪರಿಣಾಮ ಬೀರಿದೆ. ಇನ್ನೂ ಅವರೆ, ತೊಗರಿ, ಹುರುಳಿ ಬಿತ್ತನೆಗೂ ಮಳೆ ಕಾಟ ತಪ್ಪಲಿಲ್ಲ. ಇಲ್ಲಿವರೆಗೂ ಜಿಲ್ಲಾದ್ಯಂತ ಶೇ.80 ರಷ್ಟುಬಿತ್ತನೆ ಗುರಿ ಸಾಧಿಸಲಾಗಿದೆ.

ಭತ್ತ ಬಂಪರ್‌ ಬೆಳೆ ನಿರೀಕ್ಷೆ

ಸದ್ಯ ರೈತರಿಗೆ ಜಿಲ್ಲೆಯಲ್ಲಿ ಭತ್ತದ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಸಣ್ಣಪುಟ್ಟಹೊಲ, ಗದ್ದೆ ಇರುವರು ಕೂಡ ಈ ಭಾರಿ ಮಳೆ ಆಗುತ್ತಿರುವುದನ್ನು ನೋಡಿ ಭತ್ತದ ಗದ್ದೆ ಸಿದ್ದಪಡಿಸಿ ಭತ್ತದ ನಾಟಿ ಮಾಡಿದ್ದು ಎಲ್ಲಿ ನೋಡಿದರೂ ಈಗ ನಾಟಿ ಮಾಡಿರುವ ಭತ್ತದ ಪೈರು ಹಚ್ಚ ಹರಿಸಿನಿಂದ ಕಂಗೊಳಿಸುತ್ತಿದೆ. ಸತತ ಎರಡು ವರ್ಷಗಳಿಂದ ಜಿಲ್ಲಾದ್ಯಂತ ಭರ್ಜರಿ ಮಳೆ ಆಗಿರುವ ಪರಿಣಾಮ ಈಗಾಗಲೇ ಕೆರೆ, ಕುಂಟೆ, ಜಲಾಶಯಗಳು ತುಂಬಿ ಹರಿಯುತ್ತಿದ್ದು ಎಲ್ಲಿ ನೋಡಿದರೂ ನೀರಿನ ಸೆಲೆಗಳು ಇರುವ ಕಾರಣದಿಂದ ರೈತರು ಧೈರ್ಯ ತೋರಿ ಭತ್ತದ ನಾಟಿಗೆ ಮುಂದಾಗಿರುವ ಪರಿಣಾಮ ಜಿಲ್ಲಾದ್ಯಂತ ನಿರೀಕ್ಷೆಗೂ ಮೀರಿ ಭತ್ತದ ನಾಟಿಯಾಗಿದ್ದು ಬಂಪರ್‌ ಬೆಳೆ ನಿರೀಕ್ಷಿಸಿದ್ದಾರೆ.

ಜಿಲ್ಲಾದ್ಯಂತ ಶೇ.170.21 ರಷ್ಟುಭತ್ತ ನಾಟಿ

ಜಿಲ್ಲೆಯಲ್ಲಿ ಎರಡು ವರ್ಷದಿಂದ ಸತತ ಮಳೆ ಆಗಿ ಕೆರೆ, ಕುಂಟೆಗಳು ಮೈದುಂಬಿ ಹರಿಯುತ್ತಿರುವ ಪರಿಣಾಮ ಈ ಬಾರಿ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಭತ್ತದ ನಾಟಿ ಆಗಿದ್ದು ಇಲ್ಲಿವರೆಗು ಶೇ.170.21 ರಷ್ಟುಭತ್ತದ ನಾಟಿ ಆಗಿದೆ. ಕೃಷಿ ಇಲಾಖೆ 2,223 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಗುರಿ ಹೊಂದಿತ್ತು. ಆದರೆ ಈಗ 3.799 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಗೊಂಡು ಇಲ್ಲಿವರೆಗೂ ಶೇ.170.21 ರಷ್ಟುಗುರಿ ತಲುಪಿದೆ, ಚಿಂತಾಮಣಿ ತಾಲೂಕಿನ ಒಂದರಲ್ಲಿಯೆ 1,660 ಹೆಕ್ಟೇರ್‌, ಬಾಗೇಪಲ್ಲಿ ತಾಲೂಕಿನಲ್ಲಿ 1,600 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಆಗಿದೆ. 

ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸಂಕಟ

ಜಿಲ್ಲೆಯ ಅನ್ನದಾತರು ಈಗಾಗಲೇ ಬಿತ್ತನೆ ಮಾಡಿದ ಶೇಂಗಾ, ರಾಗಿ, ತೊಗರಿ, ಅವರೆ ಮತ್ತಿತರ ಮಳೆ ಅಶ್ರಿತ ಬೆಳೆಗಳನ್ನು ವ್ಯಾಪಕ ಮಳೆಯಿಂದಾಗಿ ಕಳೆದುಕೊಂಡಿದ್ದು ಇದೀಗ ಬರೀ ಭತ್ತದ ಬೆಳೆ ಮಾತ್ರ ಆಸರೆ

Latest Videos
Follow Us:
Download App:
  • android
  • ios