ಯಾದಗಿರಿ: ಕಬ್ಬು ಖರೀದಿ ಹಣ ನೀಡದ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ

ವಡಗೇರಾದ ಕೋರ್ ಗ್ರೀನ್ ಶುಗರ್ ಕಾರ್ಖಾನೆಯೆದುರು ರೈತರ ಪ್ರತಿಭಟನೆ| ಕಬ್ಬು ಮಾರಾಟ ಮಾಡಿ ಆರು ತಿಂಗಳಾದರೂ ಕಾರ್ಖಾನೆ ಹಣ ನೀಡಿಲ್ಲ, ಸಾಲ ಮಾಡಿದ ನಾವುಗಳು ಬಹಳ ತೊಂದರೆಯಲ್ಲಿದ್ದೇವೆ. ಆಯ್ಮಹತ್ಯೆಯೊಂದೇ ದಾರಿ ಎನ್ನುವಂತಾಗಿದೆ: ರೈತರ ಅಳಲು|
 

Farmers Held Protest Against Sugar Factory in Yadgir

ಸಗರ(ಜೂ.11): ಕಬ್ಬು ಖರೀದಿಸಿ ಏಳು ತಿಂಗಳುಗಳಾಗುತ್ತ ಬಂದರೂ ಹಣ ನೀಡದ ಕಾರ್ಖಾನೆ ವಿರುದ್ಧ ರೈತರು ಆಕ್ರೋಶಗೊಂಡು, ಪ್ರತಿಭಟನೆ ನಡೆಸಿದ ಘಟನೆ ವಡಗೇರಾ ತಾಲೂಕಿನ ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿ ಆವರಣದಲ್ಲಿ ಬುಧವಾರ ನಡೆದಿದೆ.

ಯಾದಗಿರಿ ಜಿಲ್ಲೆ ಸೇರಿದಂತೆ ಕಲಬುರಗಿ, ಬೀದರ್ ಹಾಗೂ ವಿಜಯಪುರದ ವಿವಿಧೆಡೆಯ ಕಬ್ಬು ಬೆಳೆಗಾರರಿಂದ ಕಬ್ಬು ಖರೀದಿಸಿದ ಕಾರ್ಖಾನೆಯವರು ಏಳೆಂಟು ತಿಂಗಳಾದರೂ ಬಿಲ್ ಪಾವತಿ ಮಾಡುತ್ತಿಲ್ಲ ಎಂದು ಐವತ್ತಕ್ಕೂ ಹೆಚ್ಚು ರೈತರು ಸಕ್ಕರೆ ಕಾರ್ಖಾನೆಯೆದುರುಜಮಾವಣೆಗೊಂಡಿದ್ದರು.

ಬೇರೆ ಫ್ಯಾಕ್ಟರಿಯವರು ರೈತರ ಹಣ ನೀಡುತ್ತಾರಾದರೂ, ವರ್ಷಾನುಗಟ್ಟಲೇ ಇಲ್ಲಿನವರು ಮಾತ್ರ ಹಣ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಿಲ್ ನೀಡುವುದಾಗಿ ಬರೀ ಭರವಸೆಗಳನ್ನು ನೀಡುತ್ತ ಬಂದಿರುವ ಕಾರ್ಖಾನೆ ಆಡಳಿತ ಮಂಡಳಿಯವರು ಸತಾಯಿಸುತ್ತಿದ್ದಾರೆ.

ಯಾದಗಿರಿ: 669 ಕೊರೋನಾ ಸೋಂಕಿತರಲ್ಲಿ 119 ಜನರು ಗುಣಮುಖ

ಖಾಸಗಿಯವರ ಬಳಿ ಸಾಲ ಮಾಡಿ ಬೆಳೆ ಬೆಳೆದು ಮಾರಾಟ ಮಾಡಿದ್ದೇವೆ ಎಂದು ತಮಗಾದ ಸಂಕಷ್ಟ ಕನ್ನಡಪ್ರಭದೆದುರು ತೋಡಿಕೊಂಡರು.ಕಬ್ಬು ಮಾರಾಟದ ಹಣ ಕೇಳಲು ಬಂದರೆ ನಿರ್ಲಕ್ಷ್ಯ ಮಾಡುವ ಕಾರ್ಖಾನೆ ಆಡಳಿತ ಮಂಡಳಿಯವರು, ಕೆಲವೊಮ್ಮೆ ರೈತರನ್ನೇ ಗದರಿಸಿ ಕಳುಹಿಸಿದ ಉದಾಹರಣೆಗಳಿವೆ ಎಂದು ಅಲ್ಲಿನ ಕೆಲವರು ದೂರಿದರು.

ಕಬ್ಬು ಮಾರಾಟ ಮಾಡಿ ಆರು ತಿಂಗಳಾದರೂ ಕಾರ್ಖಾನೆ ಹಣ ನೀಡಿಲ್ಲ. ಸಾಲ ಮಾಡಿದ ನಾವುಗಳು ಬಹಳ ತೊಂದರೆಯಲ್ಲಿದ್ದೇವೆ. ಆಯ್ಮಹತ್ಯೆಯೊಂದೇ ದಾರಿ ಎನ್ನುವಂತಾಗಿದೆ. ಮನೆ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕಬ್ಬು ಬೆಳೆಗಾರ ಮಹಾಂತಯ್ಯ ನೋವು ತೋಡಿಕೊಂಡರು.

ರೈತರ ಪ್ರತಿಭಟನೆ ಕಾವೇರುತ್ತಿದ್ದಂತೆಯೇ ಆಡಳಿತ ಮಂಡಳಿಯ ಕೆಲವರು ಕಾರಣಗಳನ್ನು ನೀಡಲು ಮುಂದಾದರು. ಮಾಲೀಕರ ಜೊತೆ ಮಾತನಾಡಿ ಬಗೆಹರಿಸುವ ಭರವಸೆ ನೀಡಿದರಾದರೂ, ಬಾಯಿಮಾತಿನಲ್ಲಿ ರೈತರು ಒಪ್ಪಲಿಲ್ಲ. ಕೊನೆಗೆ, ಜೂ.15 ರಂದು ರೈತರ ಖಾತೆಗಳಿಗೆ ಹಣ ಜಮೆ ಮಾಡುವುದಾಗಿ ಬರೆದುಕೊಟ್ಟ ಕಾರ್ಖಾನೆಯ ಸಂರಕ್ಷಿತ ಅಽಕಾರಿ ಬಲವಂತರೆಡ್ಡಿ ಭರವಸೆ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಲ್ಲಿ ಶಂಕರಲಿಂಗ, ನಿಂಗಪ್ಪ, ಶಾಂತಗೌಡ ಮುಂತಾದವರಿದ್ದರು.
 

Latest Videos
Follow Us:
Download App:
  • android
  • ios