ಕೊಡಗು: ಭಾರೀ ಮಳೆಗೆ ಗದ್ದೆಗಳು ಜಲಾವೃತ, ಕಂಗಾಲಾದ ಅನ್ನದಾತ..!
ಭಾರಿ ಮಳೆ ಸುರಿಯುತ್ತಿರುವುದರಿಂದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ವಿರಾಜಪೇಟೆ ತಾಲ್ಲೂಕಿನ ಕದನೂರು ಸಮೀಪ ಕದನೂರು ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೊಳೆಯ ನೀರು ಹೊಲಗದ್ದೆಗಳಿಗೆ ನುಗ್ಗಿ ಗದ್ದೆಗಳೆಲ್ಲಾ ಸಂಪೂರ್ಣ ಜಲಾವೃತವಾಗಿವೆ.
ಕೊಡಗು(ಆ.28): ಜಿಲ್ಲೆಯಲ್ಲಿ ಕಳೆದ ಎರಡು ವಾರದಿಂದ ಕೊಂಚ ಬಿಡುವ ನೀಡಿದ್ದ ವರುಣ ಕಳೆದ ನಾಲ್ಕು ದಿನಗಳಿಂದ ಮತ್ತೆ ಅಬ್ಬರಿಸುತ್ತಿದ್ದಾನೆ. ಅದರಲ್ಲೂ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ಬಿಟ್ಟು ಬಿಟ್ಟು ಭಾರೀ ಮಳೆ ಸುರಿಯುತ್ತಿದ್ದು ರೈತರು ಕಂಗಾಲಾಗುವಂತೆ ಮಾಡಿದೆ.
ಹೌದು ಭಾರಿ ಮಳೆ ಸುರಿಯುತ್ತಿರುವುದರಿಂದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ವಿರಾಜಪೇಟೆ ತಾಲ್ಲೂಕಿನ ಕದನೂರು ಸಮೀಪ ಕದನೂರು ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೊಳೆಯ ನೀರು ಹೊಲಗದ್ದೆಗಳಿಗೆ ನುಗ್ಗಿ ಗದ್ದೆಗಳೆಲ್ಲಾ ಸಂಪೂರ್ಣ ಜಲಾವೃತವಾಗಿವೆ.
ಪಶ್ಚಿಮಘಟ್ಟದ ಬಫರ್ ಝೋನ್ ಬೆಟ್ಟ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ?: ಗ್ರಾಮಸ್ಥರ ಮನವಿಯಲ್ಲೇನಿದೆ!
ತಗ್ಗು ಪ್ರದೇಶದ ಗದ್ದೆಗಳನ್ನು ಎತ್ತ ನೋಡಿದರೂ ಗದ್ದೆಗಳೆಲ್ಲಾ ಕೆರೆ ಹೊಳೆಯಂತೆ ಭಾಸವಾಗುತ್ತಿವೆ. ಜೂನ್ ತಿಂಗಳ ಆರಂಭದಿಂದ ಆಗಸ್ಟ್ ತಿಂಗಳ ಮೊದಲನೇ ವಾರದವರೆಗೂ ತೀವ್ರ ಮಳೆ ಸುರಿದಿದ್ದರಿದ ಇದುವರೆಗೆ ರೈತರು ಭತ್ತದ ಪೈರನ್ನು ನಾಟಿ ಮಾಡುವುದಕ್ಕೇ ಆಗಿಲ್ಲ. ಮಳೆ ತುಂಬಾ ಜಾಸ್ತಿ ಇದ್ದಿದ್ದರಿಂದ ನೀರಿನಲ್ಲಿ ಬೆಳೆಯೆಲ್ಲಾ ಕೊಚ್ಚಿ ಹೋಗಬಹುದು ಎಂದು ಇದುವರೆಗೆ ನಾಟಿಯನ್ನೇ ಮಾಡಿಲ್ಲ. ಬದಲಾಗಿ ಪದೇ ಪದೇ ಉಳುಮೆ ಮಾಡಿ ಹದ ಮಾಡಿಟ್ಟುಕೊಂಡಿದ್ದ ಗದ್ದೆಗಳೆಲ್ಲಾ ಈಗ ಸಂಪೂರ್ಣ ಜಲಾವೃತ ಆಗಿವೆ. ಇದರಿಂದ ನಾಟಿ ಮಾಡುವುದಕ್ಕಾಗಿ ಗದ್ದೆಗಳನ್ನು ಸಿದ್ಧಮಾಡಿಟ್ಟುಕೊಂಡಿದ್ದರೂ ನಾಟಿ ಮಾಡಲಾಗದೆ ರೈತರು ಪರದಾಡುವಂತೆ ಆಗಿದೆ.
ಮಳೆ ಕಡಿಮೆಯಾದಲ್ಲಿ ಗದ್ದೆ ನಾಟಿ ಕೆಲಸ ಮಾಡಬಹುದು. ಇಲ್ಲದಿದ್ದರೆ ನಾಟಿ ಮಾಡಲು ತಡವಾಗಿ ಬೆಳೆನಷ್ಟವಾಗುವ ಆತಂಕ ಶುರುವಾ