ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಸದುಪಯೋಗಪಡಿಸಿಕೊಳ್ಳಿ: ಸ್ಟೇಟ್ ಬ್ಯಾಂಕ್ ನ ಮ್ಯಾನೇಜರ್

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಕೇವಲ ಶೇ.4 ದರದಲ್ಲಿ ಬ್ಯಾಂಕಿನಲ್ಲಿ ದೊರೆಯುವ ಬೆಳೆ ಸಾಲ ಎಂದರೆ ಅದು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಒಂದೇ ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಿ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಮ್ಯಾನೇಜರ್ ಶೃತಿ ನಾಗರಾಜ್ ಹೇಳಿದರು.

Farmers avail Kisan Credit Card Loan: Manager of State Bank snr

  ಶಿರಾ :  ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಕೇವಲ ಶೇ.4 ದರದಲ್ಲಿ ಬ್ಯಾಂಕಿನಲ್ಲಿ ದೊರೆಯುವ ಬೆಳೆ ಸಾಲ ಎಂದರೆ ಅದು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಒಂದೇ ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಿ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಮ್ಯಾನೇಜರ್ ಶೃತಿ ನಾಗರಾಜ್ ಹೇಳಿದರು.

ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಆರ್ಥಿಕ ಸಾಕ್ಷರ ಸಲಹಾ ಕೇಂದ್ರ ಜಂಟಿಯಾಗಿ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದರು.

ಶಿರಾ ಸಿಎಫ್ಎಲ್ ಕೊಆರ್ಡಿನೇಟರ್ ತಿಮ್ಮರಾಜು ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೆ ವಿಶ್ವಕರ್ಮ ಯೋಜನೆಯಲ್ಲಿಯೂ ಸಾರ್ವಜನಿಕರು ಅನುಕೂಲ ಪಡೆಯಹುದು ಎಂದರು.

ಆರ್ಥಿಕ ಸಾಕ್ಷರ ಕೇಂದ್ರದ ಮಂಜುನಾಥ್ ಮಾತನಾಡಿದರು.

ಈ ಕಾರ್ಯಾಗಾರದಲ್ಲಿ ಆರೋಗ್ಯ ಇಲಾಖೆಯ ಅನಿಲ್, ಗ್ರಾಪಂ ಅಧ್ಯಕ್ಷರಾದ ಪ್ರೇಮಾ ಸುರೇಶ್, ಉಪಾಧ್ಯಕ್ಷರಾದ ಕವಿತಾ ಕರಿಯಣ್ಣ, ಗ್ರಾ.ಪಂ. ಸದಸ್ಯರು ಹಾಗೂ ರೈತರು ಸಾರ್ವಜನಿಕರು ಭಾಗವಹಿಸಿದ್ದರು.

ಈ ಸೇವಿಂಗ್ಸ್ ಟ್ರಿಕ್ಸ್ ಟ್ರೈ ಮಾಡಿ

ಗಳಿಸಿದ ಐದು ರೂಪಾಯಿಯಲ್ಲಿ ಕನಿಷ್ಠ ಒಂದು ರೂಪಾಯಿಯಾದ್ರೂ ಉಳಿಕೆ ಮಾಡ್ಬೇಕು. ಈ ಉಳಿತಾಯ ನಮ್ಮನ್ನು ಆಪತ್ ಕಾಲದಲ್ಲಿ ರಕ್ಷಿಸುತ್ತದೆ. ಹೂಡಿಕೆ ಮಾಡುವುದನ್ನು ಪ್ರತಿಯೊಬ್ಬ ತಿಳಿದಿರಬೇಕು. ಮನೆ, ಮದುವೆ, ಮಕ್ಕಳು, ಅವರ ವಿದ್ಯಾಭ್ಯಾಸ, ಅವರ ಮದುವೆ ಹೀಗೆ ಜವಾಬ್ದಾರಿ ಹೆಚ್ಚಾದಂತೆ ಖರ್ಚು ಹೆಚ್ಚಾಗುತ್ತದೆ. ಆ ಸಮಯದಲ್ಲಿ ನಾವು ಮಾಡಿದ ಹೂಡಿಕೆ ನಮ್ಮ ಕೈ ಹಿಡಿಯುತ್ತದೆ. ಹೂಡಿಕೆ ಮಾಡುವ ಮುನ್ನ ಸುರಕ್ಷಿತ ಸ್ಥಳದಲ್ಲಿ ಹಣ ಹಾಕುವುದು ಮುಖ್ಯವಾಗುತ್ತದೆ. ಹೆಚ್ಚು ಲಾಭ ಬೇಕು ಎನ್ನುವವರು ಎಫ್ ಡಿಯಲ್ಲ ಹೂಡಿಕೆ ಮಾಡ್ಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅನೇಕ ಎಫ್ ಡಿ ಯೋಜನೆಯನ್ನು ಹೊಂದಿದೆ. ಅದ್ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಕೇರ್ ಯೋಜನೆ ಕೂಡ ಸೇರಿದೆ. ನಾವಿಂದು ವಿಕೇರ್ ಯೋಜನೆ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಎಸ್‌ಬಿಐ (SBI) ವಿಕೇರ್ (VCare) ಯೋಜನೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಕೇರ್ ಯೋಜನೆ ಹಿರಿಯ ನಾಗರಿಕ (Senior Citizen) ರ ಯೋಜನೆಯಾಗಿದೆ. ಇಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡುವ ಮೂಲಕ ಉತ್ತಮ ಬಡ್ಡಿಯನ್ನು ಪಡೆಯಬಹುದು. ಹಿರಿಯ ನಾಗರಿಕರಿಗೆ 5 ವರ್ಷದಿಂದ 10 ವರ್ಷಗಳವರೆಗೆ ಹೂಡಿಕೆ ಮಾಡಲು ಇಲ್ಲಿ ಅವಕಾಶವಿದೆ. ಈ ಯೋಜನೆಯಡಿಯಲ್ಲಿ ಶೇಕಡಾ 7.5 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ.

FREE SEWING MACHINE SCHEME : ಮಹಿಳೆಯರು ಸ್ವಾವಲಂಬಿಯಾಗಲು ಇದೇ ಬೆಸ್ಟ್ ವೇ!

ಈ ಹಿಂದೆ ಈ ಯೋಜನೆಗೆ ಹೂಡಿಕೆ ಮಾಡಲು ಜೂನ್ 30, 2023 ಕೊನೆ ದಿನವಾಗಿತ್ತು. ಈಗ ಬ್ಯಾಂಕ್ ಕೊನೆ ದಿನಾಂಕವನ್ನು ವಿಸ್ತರಿಸಿದೆ. ಹಿರಿಯ ನಾಗರಿಕರು ಸೆಪ್ಟೆಂಬರ್ 30,2023ರವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ವಿಕೇರ್ ಯೋಜನೆಯಲ್ಲಿ, ಎಫ್ ಡಿ ಮೇಲೆ ಶೇಕಡಾ 0.80ರಷ್ಟು ಹೆಚ್ಚುವರಿ ಬಡ್ಡಿ ಲಭ್ಯವಿದೆ. ಮತ್ತೊಂದೆಡೆ ಎಫ್ ಡಿ ಮೇಲಿನ ಬಡ್ಡಿಯನ್ನು ಮಾಸಿಕ ಅಥವಾ ತ್ರೈಮಾಸಿಕ ಮಧ್ಯಂತರದಲ್ಲಿ ಪಾವತಿಸಲಾಗುತ್ತದೆ. ಆನ್ಲೈನ್ ಸೇವೆ ಕೂಡ ಲಭ್ಯವಿದ್ದು, ನೀವು ಆನ್ಲೈನ್ ಮೂಲಕವೇ ಈ ಯೋಜನೆಯನ್ನು ನಿರ್ವಹಿಸಬಹುದಾಗಿದೆ.

ಎಸ್‌ಬಿಐ ಬ್ಯಾಂಕ್ ಗ್ರಾಹಕರು ಎಸ್‌ಬಿಐನ ವಿ ಕೇರ್ ಯೋಜನೆಯ ಸಹಾಯದಿಂದ ಸಾಲವನ್ನು ಪಡೆಯಬಹುದು.  60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಸ್‌ಬಿಐನ ವಿಕೇರ್ ಯೋಜನೆಯಲ್ಲಿ ಹೂಡಿಕೆ ಮಾಡುವಂತಿಲ್ಲ. 60 ವರ್ಷ ಮೇಲ್ಪಟ್ಟ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಎಸ್‌ಬಿಐ ವಿ ಕೇರ್ ಎಫ್‌ಡಿ ಹೂಡಿಕೆಯು ಹಿರಿಯ ನಾಗರಿಕರಿಗೆ ಬಹಳ ಪ್ರಯೋಜನಕಾರಿ ಯೋಜನೆಯಾಗಿದೆ. ಎಸ್‌ಬಿಐ ವಿಕೇರ್ ಯೋಜನೆಯಲ್ಲಿ ಹಿರಿಯ ನಾಗರಿಕರು 5,00,000 ರೂಪಾಯಿ ಠೇವಣಿ ಇಟ್ಟರೆ ಅವರು 5 ವರ್ಷಗಳ ಮೆಚ್ಯೂರಿಟಿಯಲ್ಲಿ  7,16,130 ರೂಪಾಯಿ ಪಡೆಯುತ್ತಾರೆ. ಅಂದರೆ ಈ ಹೂಡಿಕೆಯಲ್ಲಿ ಹಿರಿಯ ನಾಗರಿಕರಿಗೆ  2,16,130 ರೂಪಾಯಿ ಒಟ್ಟೂ ಬಡ್ಡಿಯ ರೂಪದಲ್ಲಿ ಸಿಗುತ್ತದೆ.  

Latest Videos
Follow Us:
Download App:
  • android
  • ios