ರೈತರು ಸ್ವಂತ ಕಾರಣಕ್ಕೆ ಆತ್ಮಹತ್ಯೆ: ಡಿ.ಕೆ. ಶಿವಕುಮಾರ್ ಹೇಳಿಕೆಗೆ ರೈತ ಮಹಿಳೆ ಖಂಡನೆ
ಸುಮ್ಮ ಸುಮ್ಮನೆ ಸಾಯಲು ಜೀವ ಯಾರಿಗೆ ಬೇಡವಾಗಿದೆ. ನನ್ನ ಪತಿ ಸಾಲದ ಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಕಳೆದುಕೊಂಡ ನಾವು ಅನಾಥರಾಗಿದ್ದೇವೆ. ನಿತ್ಯವೂ ಕಣ್ಣೀರು ಹಾಕುತ್ತಿದ್ದೇವೆ ಎಂದ ಮೃತ ರೈತನ ಪತ್ನಿ ಮಹಾದೇವಿ ಗುಂಡುಗೋಳ
ಬೆಳಗಾವಿ(ಸೆ.06): ರೈತರು ಸ್ವಂತ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬೆಳಗಾವಿ ತಾಲೂಕಿನ ನಾಗೆರಹಾಳ ಗ್ರಾಮದ ಮೃತ ರೈತನ ಪತ್ನಿ ಮಹಾದೇವಿ ಗುಂಡುಗೋಳ ತಿರುಗೇಟು ನೀಡಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪತಿ ಸಿದ್ದಪ್ಪ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಲ ಮಾಡಿದ ಬೆಳೆ ಬೆಳೆಯಲಿಲ್ಲ. ಇದರಿಂದಾಗಿ ಅಪಾರ ಪ್ರಮಾಣದ ಹಾನಿಗೀಡಾಯಿತು. ಫೈನಾನ್ಸ್ ಹಾಗೂ ಕೈ ಸಾಲ ಸೇರಿ 12 ಸಾಲ ಮಾಡಿದ್ದರು ಎಂದರು.
ಸತೀಶ್ ಜಾರಕಿಹೊಳಿ ನನ್ನ ನಡುವಿನ ವಾರ್ ಬಗ್ಗೆ ಅವರನ್ನೇ ಕೇಳಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಸುಮ್ಮ ಸುಮ್ಮನೆ ಸಾಯಲು ಜೀವ ಯಾರಿಗೆ ಬೇಡವಾಗಿದೆ. ನನ್ನ ಪತಿ ಸಾಲದ ಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಕಳೆದುಕೊಂಡ ನಾವು ಅನಾಥರಾಗಿದ್ದೇವೆ. ನಿತ್ಯವೂ ಕಣ್ಣೀರು ಹಾಕುತ್ತಿದ್ದೇವೆ ಎಂದರು.
ಮೂರು ವರ್ಷ ಅತಿವೃಷ್ಟಿ, ಒಂದು ವರ್ಷ ಅನಾವೃಷ್ಟಿಯಿಂದಾಗಿ ಬೆಳೆ ಕೈಗೆ ಬರಲಿಲ್ಲ. .12 ಲಕ್ಷ ಸಾಲ ಮಾಡಿ ತರಕಾರಿ ಬೆಳೆ ಬೆಳೆಯಲಾಗಿತ್ತು. ಈಗ ಸರ್ಕಾರ ನಮ್ಮ ಕುಟುಂಬಕ್ಕೆ .5 ಸಾವಿರ ಪರಿಹಾರ ನೀಡಿರುವುದರಿಂದ ಅರ್ಧ ಸಾಲವನ್ನು ತೀರಿಸಿದ್ದೇವೆ. ಇನ್ನುಳಿದ ಸಾಲ ತಿರಿಸಲು ಸರ್ಕಾರ ನಮಗೆ ಬೆಳೆ ಸಾಲ ಕೊಡಿಸಬೇಕು. ಸ್ವಂತ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಡಿಸಿಎಂ ಶಿವಕುಮಾರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.