Asianet Suvarna News Asianet Suvarna News

ಬರಸಿಡಿಲಿಗೆ ಕಂಗಾಲಾದ ಗುಮ್ಮಟನಗರಿ ಅನ್ನದಾತ: ಶೆಂಗಾ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ!

ಮುಂಗಾರು ಮಳೆ ಕೈಕೊಟ್ಟಿದೆ. ರಾಜ್ಯದಲ್ಲಿ ಮಳೆ ಇಲ್ಲದೆ ಬರದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಬರದ ಜಿಲ್ಲೆಯೆ ಎಂದು ಗುರುತಿಸಿಕೊಂಡಿರುವ ವಿಜಯಪುರದಲ್ಲಿ ಬರದ ಚಿತ್ರಣ ಅಂಥವರನ್ನು ಗಾಭರಿ ಬೀಳಿಸುವಂತಿದೆ. 

Farmer of Vijayapura who resorted to tanker water without rain gvd
Author
First Published Oct 15, 2023, 10:07 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಅ.15): ಮುಂಗಾರು ಮಳೆ ಕೈಕೊಟ್ಟಿದೆ. ರಾಜ್ಯದಲ್ಲಿ ಮಳೆ ಇಲ್ಲದೆ ಬರದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಬರದ ಜಿಲ್ಲೆಯೆ ಎಂದು ಗುರುತಿಸಿಕೊಂಡಿರುವ ವಿಜಯಪುರದಲ್ಲಿ ಬರದ ಚಿತ್ರಣ ಅಂಥವರನ್ನು ಗಾಭರಿ ಬೀಳಿಸುವಂತಿದೆ. ಮಳೆ ಇಲ್ಲದೆ ರೈತರು ಹೈರಾಣಾಗಿದ್ದರೇ, ಇತ್ತ ಮಳೆಯೇ ಇಲ್ಲದೆ ಒಣಗುತ್ತಿರುವ ಬೆಳೆಯನ್ನ ಕಾಪಾಡಿಕೊಳ್ಳಲು ರೈತರು ನಡೆಸುತ್ತಿರುವ ಹರಸಾಹಸದ ಬಗ್ಗೆ ತಿಳಿದರೆ ನೀವು ಸಹ ಇಂಥ ಕಷ್ಟ ಶತ್ರುವಿಗು ಬೇಡ ಎನ್ನುತ್ತಿರಿ. ಅಷ್ಟಕ್ಕು ಬೆಳೆದ ಬೆಳೆಯನ್ನ ರಕ್ಷಿಸಿಕೊಳ್ಳಲು ಅನ್ನದಾತ ಪಡುತ್ತಿರುವ ಪಡಿಪಾಟಲು ಏನು ಎನ್ನುವುದರ ಪುಲ್ ಮಾಹಿತಿ ಇಲ್ಲಿದೆ ಓದಿ..

ಬರದಿಂದ ಬೆಳೆಗೆ ನೀರಿಲ್ಲದೆ ಕಂಗೆಟ್ಟ ಅನ್ನದಾತ: ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರ ಕಾಣಿಸಿಕೊಂಡಿದೆ. ವಾಡಿಕೆಗಿಂತ ಬಹಳ ಕಡಿಮೆ ಮಳೆಯಾಗಿರುವ ಕಾರಣ ರೈತರು ನಲಗುವಂತಾಗಿದೆ. ಜುಲೈನಲ್ಲಿ ಸುರಿದ ಅಲ್ಪ ಮಳೆಯನ್ನ ನಂಬಿಕೊಂಡು ಜಿಲ್ಲೆಯ 5.20 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ವಿವಿಧ ಬೆಳೆಗಳನ್ನ ರೈತರು ಬಿತ್ತನೆ ಮಾಡಿದ್ದರು. ಅಗಷ್ಟ, ಸಪ್ಟೆಂಬರ್ ಹಾಗೂ ಅಕ್ಟೋಬರ್ ನಿಂದ ಮಳೆಯಾಗಿಲ್ಲ. ಹಾಗಾಗಿ ಬಿತ್ತನೆ ಮಾಡಿದ್ದ ಬೆಳೆಗಳು ಇದೀಗ ಒಣಗಿ ಹೋಗ್ತೀವೆ. ಅಲ್ಪಸ್ವಲ್ಪ ಫಸಲಾದರೂ ಬರುತ್ತದೆ ಎಂದು ಕನಸು ಕಂಡಿದ್ದ ರೈತರ ಕನಸು ಭಗ್ನವಾಗಿದೆ. 

ಬಿಜೆಪಿಯೇ ಮುಳುಗುತ್ತಿರುವ ಹಡಗು: ಎಂ.ಪಿ.ರೇಣುಕಾಚಾರ್ಯ

ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ: ಈ ಮದ್ಯೆ ಹೇಗಾದರೂ ಮಾಡಿ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಕೆಲ ರೈತರು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ವಿಜಯಪುರ ತಾಲೂಕಿನ ರಂಭಾಪುರ ಗ್ರಾಮದ ರೈತ ಶ್ರೀಕಾಂತ ದೇಸಾಯಿ ತನ್ನ ಜಮೀನನಲ್ಲಿ ಬೆಳೆದ ಶೇಂಗಾ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಹೂಬಿಟ್ಟು ಕಾಳು ಕಟ್ಟಿವ ಹಂತದಲ್ಲಿದ್ದ  ಶೇಂಗಾ ಬೆಳೆಯನ್ನು ಉಳಿಸಿಕೊಳ್ಳಲು ರೈತರ ಶ್ರೀಕಾಂತ ದೇಸಾಯಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ಶೆಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರು: ಎರಡೂವರೆ ಎಕರೆ ಜಮೀನಿನಲ್ಲಿ ಶೆಂಗಾ ಬಿತ್ತನೆ ಮಾಡಿದ್ದರು. ಶೇಂಗಾ ಹೂಬಿಟ್ಟು ಕಾಳುಗಟ್ಟಿತ್ತು. ಇದೇ ವೇಳೆ ತೇವಾಂಶ ಕೊರತೆಯಿಂದ ಶೇಂಗಾ ಬೆಳೆ ಬಾಡುತ್ತಾ ಹೋಗಿದೆ. ಇದನ್ನು ಗಮನಿಸಿದ ರೈತ ಶ್ರೀಕಾಂತ ದೇಸಾಯಿ ಟ್ಯಾಂಕರ್ ಮೂಲಕ ನೀರು ಹಾಕಲು ಮುಂದಾಗಿದ್ದಾರೆ. ಒಂದು ಟ್ಯಾಂಕರ್ ಗೆ 800 ರಿಂದ 1000 ರೂಪಾಯಿ ಬಾಡಿಗೆ ನೀಡುತ್ತಿದ್ದಾರೆ. ಎರಡು ದಿನಕ್ಕೊಮ್ಮೆ 2 ರಿಂದ 3 ಟ್ಯಾಂಕರ್ ನೀರು ಜಮೀನಿಗೆ ಹಾಕಿಸುತ್ತಿದ್ದಾರೆ. ಮುಂದಿನ 15 ದಿನಗಳಲ್ಲಿ ಫಸಲು ಬರುತ್ತಿದ್ದು ಅಲ್ಲಿಯವರೆಗೂ ಟ್ಯಾಂಕರ್ ನೀರು ಹಾಕ್ತಿದ್ದಾರೆ.

ಕೈಕೊಟ್ಟ ಮಳೆ, ಬಾರದ ಫಸಲು, ರೈತ ಕಂಗಾಲು: ಒಂದು ಎಕರೆ ಶೇಂಗಾ ಬಿತ್ತನೆ ಮಾಡಿ ಬೆಳೆಯಲು  20 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಸಾಮಾನ್ಯವಾಗಿ ಜೂನ್ ನಲ್ಲಿ ಮಳೆಯಾಗುತ್ತಿತ್ತು, ಆದರೆ ಈ ಬಾರಿ ಮಳೆಯ ಅಭಾವ ಉಂಟಾಗಿ ಜುಲೈ 15 ರ ಬಳಿಕ ಮಳೆಯಾಯಿತು. ಮುಂದೆ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಮಳೆ ಮಾಯವಾದ  ಕಾರಣ ಫಸಲು ಬರಲ್ಲಾ ಎಂದು ಅನೇಕ ರೈತರು ತಮ್ಮ ತಮ್ಮ ಬೆಳೆಗಳನ್ನು ನಾಶ ಮಾಡಿದ್ದಾರೆ. ಇಷ್ಟರ ಮಧ್ಯೆ ರೈತ ಶ್ರೀಕಾಂತ ಅವರ ಜಮೀನಿನಲ್ಲಿದ್ದ ಶೇಂಗಾ ಬೆಳೆಯೂ ಒಣಗಲು ಆರಂಭಿಸಿತ್ತು. ಹಾಲುಗಟ್ಟಿದ ಹಂತದಲ್ಲಿದ್ದ ಶೇಂಗಾ ಬೆಳೆ ಮುಂದಿನ 15 ರಿಂದ 29 ದಿನಗಳಲ್ಲಿ ಫಸಲು ಬರಲಿದ್ದು ಅದನ್ನು ಹೇಗಾದರೂ ಮಾಡಿ ಉಳಿಸಬೇಕೆಂದು ಪಟ್ಟು ಹಿಡಿದಿದ್ದಾನೆ ಯುವರೈತ ಶ್ರೀಕಾಂತ.

ಚೀನಾದ ಫೋಟೋಗಳನ್ನ ಶೇರ್ ಮಾಡಿದ Dr Bro: ನಕಲಿಗಳ ಮಧ್ಯೆ ನೀವು ಕನ್ನಡದ ಅಸಲಿ ಚಿನ್ನ ಎಂದ ಫ್ಯಾನ್ಸ್!

ದಿನಕ್ಕೆ ಮೂರು ಟ್ಯಾಂಕರ್ ನೀರು, ನೀರಿಗಾಗಿಯೇ ಸಾವಿರಾರು ರು, ಖರ್ಚು: ಈಗ ಟ್ಯಾಂಕರ್ ಮೂಲಕ ನೀರುಣಿಸಲು ನಿರ್ಧಾರ ಮಾಡಿದ್ದಾರೆ. ಎರಡು ದಿನಕ್ಕೊಮ್ಮೆ 3 ಟ್ಯಾಂಕರ್ ನೀರು ಹಾಕುತ್ತಿದ್ದು ಅದಕ್ಕಾಗಿ 2400 ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಹೀಗೆ ಕಳೆದ ಕೆಲ ದಿನಗಳಿಂದ ನೀರು ಹಾಕುತ್ತಿದ್ದು ಇನ್ನೂ 10 ರಿಂದ 15 ದಿನಗಳ ಕಾಲ ನೀರು ಹಾಕುವ ನಿರ್ಧಾರ ಮಾಡಿದ್ದಾರೆ. ಆಗ ಶೇಂಗಾ ಫಸಲು ಬರುತ್ತಿದ್ದು ಇವರು ಮಾಡಿದ ಶ್ರಮಕ್ಕೆ ಫಲ ಸಿಗಲಿದೆ. ಇಷ್ಟೆಲ್ಲಾ ಮಾಡಿದರೂ ಶೇಂಗಾ ಬೆಳೆ ಬೆಳೆಯಲು ಮಾಡಿದ ಖರ್ಚು ಮಾತ್ರ ಬರಬಹುದು ಲಾಭದ ಮಾತೇ ಇಲ್ಲಾ ಎಂದಿದ್ಧಾರೆ. ಇಷ್ಟರ ಮದ್ಯೆ ಕೇಂದ್ರದ ಬರ ಆಧ್ಯಯನಬ ತಂಡ ಜಿಲ್ಲೆಗೆ ಆಗಮಿಸಿ ಸರಿಯಾಗಿ ಆಧ್ಯಯನ ಮಾಡಿಲ್ಲಾ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಸೂಕ್ತ  ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಕಾಲುವೆ ನೀರಿಗಾಗಿ ಹಳ್ಳಿಗಳ ವಾಟರ್ ವಾರ್:

ವಿಜಯಪುರ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸಿದೆ. ಕೆರೆ-ಕಟ್ಟೆಗಳು ಒಣಗಿ ಹೋಗಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕೆರೆಗೆ ನೀರು ತುಂಬುವ ಯೋಜನೆಯಡಿ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆದ್ರೆ ಕೆಲವರು ಕಾಲುವೆ ಬ್ಲಾಕ್‌ ಮಾಡಿ ನೀರು ನಿಲ್ಲಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ನೀರಿಗಾಗಿ ಗ್ರಾಮಗಳ ನಡುವೆ ಅಕ್ಷರಶಃ ವಾಟರ್‌ ವಾರ್‌ ಶುರುವಾಗಿದೆ. 

Follow Us:
Download App:
  • android
  • ios