Asianet Suvarna News Asianet Suvarna News

ಬಿಜೆಪಿ ಬರ ಅಧ್ಯಯನ ತಂಡದ ಮುಂದೆ ಬೆಳೆ ನಾಶಪಡಿಸಿದ ರೈತ!

ತಾಲೂಕಿನ ರಾಹುತನಕಟ್ಟಿ, ಹೂಲಿಹಳ್ಳಿ ಹಾಗೂ ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಬರ ಅಧ್ಯಯನ ತಂಡ, ಬೆಳೆಹಾನಿ ಕುರಿತು ಪರಿಶೀಲಿಸಿತು.

Farmer destroys crops in front of BJP drought study team at haveri rav
Author
First Published Oct 31, 2023, 5:08 AM IST

ರಾಣಿಬೆನ್ನೂರು  (ಅ.31) :  ತಾಲೂಕಿನ ರಾಹುತನಕಟ್ಟಿ, ಹೂಲಿಹಳ್ಳಿ ಹಾಗೂ ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಬರ ಅಧ್ಯಯನ ತಂಡ, ಬೆಳೆಹಾನಿ ಕುರಿತು ಪರಿಶೀಲಿಸಿತು.

ಬೆಳೆಹಾನಿಯಾದ ರೈತರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದಿಂದ ಪರಿಹಾರ ಬಂದಿದೆಯೋ, ಇಲ್ಲವೋ ಎನ್ನುವ ಕುರಿತು ಮಾಹಿತಿ ಕಲೆಹಾಕಿತು. ನೆಲೋಗಲ್ಲ ಗ್ರಾಮದ ರೈತ ವೀರಪ್ಪ ಎಂಬುವರು ತಂಡದ ಎದುರು ಜಮೀನಿನಲ್ಲಿ ಒಣಗಿ ನಿಂತಿದ್ದ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ನಾಶಪಡಿಸಿದರು.

ತಮಿಳುನಾಡಿಗೆ ಮತ್ತೆ ನಿತ್ಯ 2600 ಕ್ಯು ನೀರು ಬಿಡಲು ಆದೇಶ; ಕಾವೇರಿ ನದಿಗೆ ಇಳಿದು ರೈತ ಮುಖಂಡರು ಪ್ರತಿಭಟನೆ

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ, ಕಳೆದ ವರ್ಷ ಅತಿವೃಷ್ಟಿ ಉಂಟಾದ ಸಮಯದಲ್ಲಿ ₹2100 ಕೋಟಿ ಬಿಡುಗಡೆ ಮಾಡಲಾಗಿತ್ತು. ಕೇಂದ್ರ ಸರ್ಕಾರ 1 ಹೆಕ್ಟೇರ್‌ಗೆ ₹6100 ನಿಗದಿ ಪಡಿಸಿದ್ದರೆ ನಾವು ಅದರ ಡಬಲ್ ₹13 ಸಾವಿರ ಕೊಟ್ಟಿದ್ದೇವೆ. ₹12 ಸಾವಿರ ತೋಟಗಾರಿಕೆ ಬೆಳೆಗಿದ್ದರೆ ನಾವು ₹25 ಸಾವಿರ, ₹18 ಸಾವಿರ ನೀರಾವರಿ ಬೆಳೆಗಿದ್ದರೆ ನಾವು ₹28 ಸಾವಿರ ಕೊಟ್ಟಿದ್ದೇವೆ. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಎಲ್ಲಿಯೂ ಒಂದು ರು. ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು.

ಹಿರೇಕೆರೂರಿನಲ್ಲಿ ಕಾಡು ಪ್ರಾಣಿಗಳು ಬಂದು 5 ಎಕರೆ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ. ಅದಕ್ಕೆ ಪರಿಹಾರವಾಗಿ ಸರ್ಕಾರ 2804 ರು. ಕೊಟ್ಟಿದೆ. ಈ ರೀತಿಯಾದರೆ ರೈತರು ಬದುಕೋದು ಹೇಗೆ ಎಂದು ಪ್ರಶ್ನಿಸಿದರು. ಗ್ಯಾರಂಟಿಗಳನ್ನು ಕೊಡಲಿ ಬೇಡ ಅನ್ನಲ್ಲ. ಆದರೆ ನಮ್ಮ ರೈತರನ್ನು ಕೈ ಬಿಡದ ರೀತಿಯಲ್ಲಿ ಬರಗಾಲ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಕಾವೇರಿ ಜಲ ವಿವಾದ: ಇಂದು ವಾಟಾಳ್ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ

ಪ್ರಮುಖರಾದ ಗವಿಸಿದ್ದಪ್ಪ, ಬಸವರಾಜ ಹುಲ್ಲತ್ತಿ, ಭೋಜರಾಜ ಕರೂದಿ, ಭಾರತಿ ಜಂಬಗಿ, ಕೆ. ಶಿವಲಿಂಗಪ್ಪ, ಮಂಜುನಾಥ ಓಲೇಕಾರ, ಎ.ಬಿ. ಪಾಟೀಲ, ದೀಪಕ ಹರಪನಹಳ್ಳಿ, ಸಿದ್ದು ಚಿಕ್ಕಬಿದರಿ, ಪಾಲಾಕ್ಷಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

Follow Us:
Download App:
  • android
  • ios