3 ಟನ್ ಪುಷ್ಪ ಅರ್ಪಿಸಿ, 'ನಿಧಿ'ಗೆ ಅಶ್ರುತರ್ಪಣ

ಕರ್ನಾಟಕದೊಂದಿಗೆ ಹೇಳಿ ಕೊಳ್ಳುವಂಥ ಬಾಂಧವ್ಯ ಕರುಣಾನಿಧಿ ಅವರಿಗೆ ಇಲ್ಲದಿದ್ದರೂ, ಕೆಲವೊಂದು ವಿಷಯಗಳಲ್ಲಿ ಕನ್ನಡಿಗರು ಅವರೊಟ್ಟಿಗೆ ವ್ಯವಹರಿಸುವುದು ಅನಿವಾರ್ಯವಾಗಿತ್ತು. ಹಾಗೆಯೇ ರಾಜ್ಯದ ಗಡಿ ಭಾಗದಲ್ಲಿರುವ ತಮಿಳು ಜಿಲ್ಲೆಗಳಲ್ಲಿ ತಮ್ಮ ನೆಚ್ಚಿನ ನಾಯಕನ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ....

Fans pay floral tribute to Karunanidhi with 3 tons flowers

ಹೊಸೂರು: ಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ‌ ವಿಧಿವಶರಾದ ಹಿನ್ನೆಲೆಯಲ್ಲಿ ತಮಿಳುನಾಡು ಸಂಪೂರ್ಣ ಬಂದ್ ಆಗಿದೆ. ತಮ್ಮ ನೆಚ್ಚಿನ ನಾಯಕನಿಗೆ ವಿಧ ವಿಧವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಆನೇಕಲ್‌ ಗಡಿ ಭಾಗವಾದ ಹೊಸೂರಿನಲ್ಲಿಯೂ ಅಭಿಮಾನಗಳ ದುಃಖದ ಕಟ್ಟೆಯೊಡೆದಿದ್ದು, ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಮೂರು ಟನ್ ಹೂವನ್ನು ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. 

ಹೂ ಮಾರ್ಕೆಟ್‌ ವ್ಯಾಪಾರಿಗಳು ಮೂರು ಟನ್ ವಿಧವಿಧವಾದ ಹೂವನ್ನು ಕರುಣಾನಿಧಿ ಅವರ ಭಾವಚಿತ್ರಕ್ಕೆ ಅರ್ಪಿಸಿದರು. ಇನ್ನು ಕರ್ನಾಟಕ ತಮಿಳುನಾಡು ಗಡಿಭಾಗವಾದ  ಅತ್ತಿಬೆಲೆಯಲ್ಲಿ ಮಂಗಳವಾರದಿಂದಲೇ ಬಿಗಿ ಪೋಲಿಸ್ ಬಂದೋಬಸ್ತ್ ನಿಯೋಜಿಸಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೊಸೂರಿನಾದ್ಯಂತ ಸರ್ಕಾರಿ ಹಾಗು ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ವಾಹನಕ್ಕೂ ನಿರ್ಬಂಧ:
ಕರ್ನಾಟಕದ ಯಾವುದೇ ವಾಹನಗಳನ್ನು ತಮಿಳುನಾಡಿಗೆ ಹೋಗದಂತೆ ನಿರ್ಬಂಧ ಹೇರಿದ್ದು, ಗಡಿಭಾಗದಿಂದಲ್ಲೇ ಎಲ್ಲ ಕರ್ನಾಟಕ ವಾಹನಗಳನ್ನು ತಡೆಯೊಡ್ಡಿ ವಾಪಸುಕಳುಹಿಸುತ್ತಿದ್ದಾರೆ. ಕರುಣಾನಿಧಿ ಅವರ ಸಾವಿನ ವಿಷಯ ತಿಳಿಯುತ್ತಿದ್ದಂತೆ, ಎಲ್ಲ  ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿ, ಅಗಲಿದ ನೆಚ್ಚಿನ ನಾಯಕನಿಗೆ ವ್ಯಾಪಾರಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು,
 

Latest Videos
Follow Us:
Download App:
  • android
  • ios