ಉಡುಪಿ(ಆ.23): ಶವ ಅದಲು ಬದಲಾಗಿದ್ದರಿಂದ ಕುಟುಂಬಸ್ಥರು ಕೆಲ ಕಾಲ ಆತಂಕಕ್ಕೊಳಗಾದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಇಂದು(ಭಾನುವಾರ) ನಡೆದಿದೆ. 

"

ಕೋಟೇಶ್ವರ ಮೂಲದ ನೇರಂಬಳ್ಳಿಯ ಗಂಗಾಧರ ಆಚಾರ್ಯ ಎಂಬುವರು ನ್ಯುಮೋನಿಯಾದಿಂದ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆಸ್ಪತ್ರೆಯ ಸಿಬ್ಬಂದಿ ಗಂಗಾಧರ ಆಚಾರ್ಯ ಅವರ ಮೃತದೇಹ ಹಸ್ತಾಂತರಿಸದೆ ಬೇರೊಬ್ಬರ ಶವವನ್ನ ನೀಡಿದ್ದರು. ಕಾರ್ಕಳ ಮೂಲದ ವ್ಯಕ್ತಿಯ ಶವವನ್ನ ಮೃತ ಗಂಗಾಧರ ಆಚಾರ್ಯ ಅವರ ಕುಟುಂಬಸ್ಥರಿಗೆ ನೀಡಲಾಗಿತ್ತು. 

ಉಡುಪಿ: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಹಿಂದೂ ಜಾಗರಣ ವೇದಿಕೆ ತಂಡ

ಆಸ್ಪತ್ರೆಯಿಂದ ಶವ ಪಡೆದು ಅಂತ್ಯ ಸಂಸ್ಕಾರಕ್ಕೆಂದು ಕುಂದಾಪುರ ರುದ್ರ ಭೂಮಿಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಗಂಗಾಧರ ಆಚಾರ್ಯ ಅವರ ಶವ ನೀಡುವ ಬದಲು ಬೇರೆಯರ ಶವ ನೀಡಿದ್ದರ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಈ ಸಂದರ್ಭದಲ್ಲಿ ಮೃತ ಗಂಗಾಧರ ಆಚಾರ್ಯ ಕುಟುಂಬಸ್ಥರಲ್ಲಿ  ಕೆಲ ಕಾಲ ಗೊಂದಲದಲ್ಲಿದ್ದರು.